ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:07 PM

ಇಂದಿನ ರುಚಿ...

Posted by ekanasu

ಕಲ್ಲೆಟ್ಟೆ ಕಾಯಿಯ ವ್ಯಂಜನ

ಮೆಣಸ್ಕಾಯಿ
ಬೇಕಾಗುವ ಸಾಮಾಗ್ರಿ: ಕಲ್ಲೆಟ್ಟೆ - 3 ಹಿಡಿ, ತೆಂಗಿನ ಕಾಯಿ - 1ಗಡಿ, ಕುಮ್ಟೆ ಮೆಣಸು 8, ಎಳ್ಳು - 2ಚಮಚ, ಕೊತ್ತಂಬರಿ - ಅರ್ಧ ಚಮಚ, ಹುಳಿ - ಅರ್ಧ ಲಿಂಬೆ ಗಾತ್ರ, ಬೆಲ್ಲ - 1 ಲಿಂಬೆ ಗಾತ್ರ, ಚಿಟಿಕೆ ಅರಸಿನ ಹುಡಿ, ಉಪ್ಪು, ಒಗ್ಗರಣೆ ಸಾಮಾಗ್ರಿ.
ಮಾಡುವ ವಿಧಾನ : ಕಾಯಿಯನ್ನು ಜಜ್ಜಿ ಮೂರ್ನಾಲ್ಕು ಬಾರಿ ನೀರು ಬದಲಾಯಿಸಿ . ನಂತರ ಉಪ್ಪು, ಹುಳಿ, ಬೆಲ್ಲ, ಹಾಗೂ ಅರಸಿನ ಹುಡಿ ಹಾಕಿ ಬೇಯಿಸಿ. ತೆಂಗಿನ ತುರಿಯನ್ನು ಬಾಣಲೆಯಲ್ಲಿ ಕೆಂಬಣ್ಣಕ್ಕೆ ಬರುವಂತೆ ಹುರಿಯಿರಿ. ಕೊತ್ತಂಬರಿ, ಮೆಣಸು, ಎಳ್ಳನ್ನು ಹುರಿದು ತೆಂಗಿನ ತುರಿಯೊಂದಿಗೆ ನುಣ್ಣಗೆ ರುಬ್ಬಿ . ನಂತರ ಬೇಯಿಸಿಟ್ಟ ಹೋಳಿಗೆ ಹಾಕಿ ಚೆನ್ನಾಗಿ ಕುದಿಸಿ ಒಗ್ಗರಣೆ ಕೊಡಿ.


ಪಲ್ಯ

ಬೇಕಾಗುವ ಸಾಮಾಗ್ರಿ : ಕಲ್ಲೆಟ್ಟೆ ಕಾಯಿ 4 ಹಿಡಿ, ತೆಂಗಿನ ತುರಿ - ಅರ್ಧ ಕಪ್, ಬೆಳ್ಳುಳ್ಳಿ - 8 ಎಸಳು, ಕುಮ್ಟೆ ಮೆಣಸು - 3, ಹುಳಿ - ಅರ್ಧ ನೆಲ್ಲಿಕಾಯಿ ಗಾತ್ರ, ಬೆಲ್ಲ - ಅರ್ಧ ಲಿಂಬೆ ಗಾತ್ರ, ಕೊತ್ತಂಬರಿ - ಕಾಲು ಚಮಚ, ಚಿಟಿಕೆ ಅರಶಿನಹುಡಿ, ಉಪ್ಪು
ಮಾಡುವ ವಿಧಾನ : ಕಾಯಿಯನ್ನು ಜಜ್ಜಿ ಮೂರ್ನಾಲ್ಕು ಬಾರಿ ನೀರು ಬದಲಾಯಿಸಿ. ತೆಂಗಿನ ತುರಿಗೆ ಮೆಣಸು, ಕೊತ್ತಂಬರಿ, ಬೆಳ್ಳುಳ್ಳಿ ಹುರಿದು ಹಾಕಿ, ಹುಳಿಯನ್ನು ಹಾಕಿ ಮಿಕ್ಸಿಯಲ್ಲಿ ಎರಡು ಸುತ್ತು ತಿರುಗಿಸಿ ನಂತರ ಒಗ್ಗರಣೆಗಿಟ್ಟು ( ಎಣ್ಣೆ ತುಸು ಜಾಸ್ತಿಯಿರಲಿ) ಜಜ್ಜಿಟ್ಟ ಕಾಯಿಯನ್ನು ಹಾಕಿ. ಉಪ್ಪು ಅರಶಿನ ಹುಡಿ ಬೆಲ್ಲ ಹಾಗೂ ಎಲ್ಲಾ ಮಸಾಲೆಯನ್ನು ಹಾಕಿ ತುಸು ನೀರು ಹಾಕಿ ಚೆನ್ನಾಗಿ ಸೌಟಿನಿಂದ ಕೆದಕಿ ಸಣ್ಣ ಉರಿಯಲ್ಲಿಟ್ಟು ಮುಚ್ಚಿ. ನೀರಾರಿದ ನಂತರ ಕೆಳಗಿಳಿಸಿ.

- ಸುಮತಿ ಕೆ.ಸಿ ಭಟ್, ಆದೂರು.

1 comments:

Anonymous said...

enidu kallatte kayi photo please..

Post a Comment