ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ದೈನಂದಿನ ಕಾದಂಬರಿ : ಭಾಗ - 17

ನಿನ್ನ ಹೊಸ ಪ್ರೊಡಕ್ಟ್ ಬಗ್ಗೆ ಕೇಳಿದೆ. ಟಿ. ವಿ. ಜಾಹೀರಾತನ್ನು ನೋಡಿದೆ. ಹೇಗೂ ಕೊಬ್ಬರಿ ಕೂಡ ಡ್ರೈಪ್ರುಟ್ಸ್ ಸಾಲಿಗೆ ಸೇರಿರುವುದರಿಂದ ಅದನ್ನೇ ಸ್ವಲ್ಪ ಬದಲಾಯಿಸಿ ಇತರೆ ಡ್ರೈಪ್ರುಟ್ಸ್ಗಳಂತೆ ಮಾರಾಟ ಮಾಡಾಬಹುದಲ್ಲವೆ? ಎಂದು ಕೇಳಿದಾಗ ನಿಖಿಲ್ ನಿಸ್ಸಂಕೋಚವಾಗಿ ಹೇಳಿದ.ನವ್ಯ, ಅದು ನೀನೇ ಕೊಟ್ಟಿರೊ ಹೊಸ ಐಡಿಯಾ. ಮೊದಲು ಉತ್ತರ ಭಾರತದ ಮೂರು ಕಡೆ ಮಾರುಕಟ್ಟೆಗಳಿಸುವ ಉದ್ದೇಶದಿಂದ ಆರಂಭಿಸಿದೆ. ಬಿಸಿನೆಸ್ ಚೆನ್ನಾಗಿಯೇ ನಡೆಯಿತು.ಈಗಲೂ ಬೇಡಿಕೆ ತುಂಬಾ ಇದೆ. ಒಳ್ಳೆ ಹೊಟೇಲ್ಗಳು, ರೆಸ್ಟೊರ್ಗಳು ಕೂಡ ಬಲ್ಕ್ ಆರ್ಡರ್ ಕಳುಹಿಸುತ್ತಾ ಇವೆ. ಅದರಲ್ಲಿಯೇ ಸುಧಾರಿತ ಪ್ರಾಡಕ್ಟ್ನ್ನು ಕೂಡ ಪರಿಚಯಿಸಬೇಕೆಂದಿರುವೆ.
ಖಂಡಿತವಾಗಿಯೂ ನಿನಗೆ ಅಂತರಾಷ್ಟ್ರೀಯ ಮಾರುಕಟ್ಟೆ ಒದಗಿಸಬಲ್ಲೆ. ಸಾಧ್ಯವಾದರೆ ಮುಂದಿನ ತಿಂಗಳು ನಾನು ಗಲ್ಫ್ಗೆ ಮರಳ್ತಾ ಇದ್ದೇನೆ. ನೀನೊಂದಿಷ್ಟು ಸ್ಯಾಂಪಲ್ಗಳನ್ನು ಕಳುಹಿಸಿಕೊಡು. ಖಂಡಿತವಾಗಿಯೂ ಒಳ್ಳೆಯ ಮಾರುಕಟ್ಟೆ ದೊರಕಬಹುದು.
ಭರವಸೆಯನ್ನು ನೀಡಿದ ಮೇಲೆ ನಿಖಿಲ್ ಎರಡನೆ ಆಲೋಚನೆ ಮಾಡಲೇ ಇಲ್ಲ. ಒಣ ಕೊಬ್ಬರಿಯ ಬದಲು ಅವುಗಳನ್ನೇ ತುರಿದು ಪ್ಯಾಕೇಟ್ಗಳಲ್ಲಿ ತುಂಬಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ. ಪ್ರತಿಯೊಂದು ದಿನಸಿ ಅಂಗಡಿಯಲ್ಲಿಯೂ ಸೂಪರ್ ಮಾರ್ಕೆಟ್ಗಳಲ್ಲಿಯೂ ದೊರೆಯುವಂತಾದಾಗ ಹಿಂತುರುಗಿ ನೋಡಲಿಲ್ಲ.

ಒಂದು ತಿಂಗಳಿನಲ್ಲಿಯೇ ನವ್ಯಕುಮಾರ್ ಹೇಳಿದಂತೆ ಸ್ಯಾಂಪಲ್ಗಳನ್ನು ಕಳುಹಿಸಿಕೊಟ್ಟ. ಆತ ಹೇಳಿದಂತೆಯೇ ಮುಂದಿನ ಹದಿನೈದು ದಿನಗಳಲ್ಲಿಯೇ ಕೊಬ್ಬರಿ ಮತ್ತು ಕೊಬ್ಬರಿ ತುರಿಗಳು ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸಿದವು.
ನಿಖಿಲ್ ಎಂಟರ್ಪ್ರೈಸಸ್ನ ಜವಾಬ್ದಾರಿ ಹೆಚ್ಚಾದಾಗ ಉನ್ನತ ಮಟ್ಟದಲ್ಲಿ ಜವಾಬ್ದಾರಿಯುತ ಕೆಲಸ ಮಾಡುವವರು ಬೇಕೆನಿಸಿತು. ಕೂಡಲೇ ಪ್ರಮುಖ ಪತ್ರಿಕೆಗಳಲ್ಲಿ ಜಾಹಿರಾತು ನೀಡಿದ.

ನಿಖಿಲ್ ಎಂಟರ್ಪ್ರೈಸಸ್ ಆಗಲೇ ಬಹಳಷ್ಟು ಹೆಸರು ಪಡೆದಿದ್ದರಿಂದ ಅರ್ಜಿಗಳ ರಾಶಿಯೇ ಬಂದು ಬಿತ್ತು. ಅದರಲ್ಲಿ ಕೆಲವನ್ನು ಮಾತ್ರ ಆರಿಸಿ ಇಂಟರ್ವ್ಯ್ಯೂಗೆ ಕಳುಹಿಸಿದ.
ಮನಸ್ವಿತಾಳ ಹೆಸರು ಆ ಪಟ್ಟಿಯಲ್ಲಿ ಮೊದಲಿಗೆ ಇತ್ತು. ನಿಖಿಲ್ ಎಂಟರ್ಪ್ರೈಸಸ್ನ ಪ್ರವೇಶ ಅವಳಿಗೆ ಬದುಕಿಗೊಂದು ದಾರಿಯಾದರೆ ನಿಖಿಲ್ ಎಂಟರ್ಪ್ರೈಸಸ್ಗೆ ಯಶಸ್ಸಿನ ಕೀಲಿಕೈಯಾಯಿತು.

ಆ ದಿನ ಚೆಕ್ಗಳಿಗೆ ಸೈನ್ ಮಾಡುವ ಜವಾಬ್ದಾರಿ ಹೆಚ್ಚಿದ ಮೇಲೆ ಎಲ್ಲಾ ವೋಚರ್ಸ್ಸಗಳನ್ನು ಕೂಲಂಕಷವಾಗಿ ಗಮನಿಸಿದ ಮೇಲೆ ಆ ವೋರ್ಚಸ್ ಮೇಲೆ ಅದರ ಅಮೌಂಟ್ ಮತ್ತು ಚೆಕ್ನಲ್ಲಿರುವ ಅಮೌಂಟ್ಗೆ ತಾಳೆ ನೋಡಿದ ಮೇಲೆಯೆ ಸೈನ್ ಹಾಕುತ್ತಿದ್ದುದು, ಕ್ಲರಿಕಲ್ ಎರರ್ಗಳನ್ನು ಕಡಿಮೆ ಮಾಡಿತ್ತು. ಅವಳ ಜವಾಬ್ದಾರಿಗಳು ಹೆಚ್ಚಿದ ಮೇಲೆ ನಿಖಿಲ್ನ ಹೊರೆ ಇಳಿದಂತಾಗಿತ್ತು. ಆತ ಚೆಕ್ಗಳ ಬಗ್ಗೆ ತಲೆಕೆಡಿಸಿಕೊಳ್ಳದಿದ್ದರೂ ಟಿಡಿಎಸ್, ಅಡ್ವಾನ್ಸ್ ಪೇಮೆಂಟ್ಗಳ ಬಗ್ಗೆ ಬಹಳವಾಗಿ ಕಾಳಜಿ ವಹಿಸುತ್ತಿದ್ದ. ಸೇಲ್ಸ್ ಟ್ಯಾಕ್ಸ್, ಇಂಕಮ್ ಟ್ಯಾಕ್ಸ್ಗಳು ವಿಷಯಗಳನ್ನು ಮನಸ್ವಿತಾ ಉಮೇಶ್ನಿಗೆ ವಹಿಸಿದ್ದರೂ ಅವು ಅಂತಿಮವಾಗಿ ಬರುತ್ತಿದ್ದುದು ಅವಳ ಟೇಬಲ್ಗಳ ಮೇಲೆಯೆ.

ಇಂಟ್ರ್ಕಾಂ ಮೊಳಗಿದಾಗ ಫೋನ್ ಎತ್ತಿಕೊಂಡ ಮನಸ್ವಿತಾಗೆ ಅತ್ತ ಕಡೆಯಿಂದ ನಿಖಿಲ್ ದನಿ ಕೇಳಿದಾಗ. 'ಸರ್' ಅಂದಳು. ಆತ ಇನ್ನೇನು ಎರಡು ಗಂಟೆಯಲ್ಲಿ ಬೋರ್ಡ್ ರೂಂ ಅನ್ನು ಮೀಟಿಂಗ್ಗೆ ಸಿದ್ಧವಾಗಿಡಲು ಹೇಳಿ, ಅದಕ್ಕೆ ಬೇಕಾದ ಸರ್ಕ್ಯುಲರ್ ಮಾಡಲು ತಿಳಿಸಿದ.
ಯಾವ ಮ್ಯಾಟರ್ ಬಗ್ಗೆ ಮೀಟಿಂಗ್? ಸಂಶಯವಿತ್ತು ಅವಳಿಗೆ. ಆತ ಕ್ಷಣ ಹೊತ್ತು ಮೌನವಾದ ಬಳಿಕ, ಮ್ಯಾಟರ್ ತಿಳಿಸುವ ಅಗತ್ಯವಿಲ್ಲ. ಎಕ್ಸಿಕ್ಯೂಟ್ಗಳು ಇದ್ದರೆ ಮಾತ್ರ ಸಾಕು ಅಂದಾಗ ಟೈಪಿಸ್ಟ್ ಶೀಲಾ ಮತ್ತು ರಾಮರಾಜನನ್ನು ಕರೆಸಿ ಕೂಡಲೇ ಸರ್ಕ್ಯುಲರ್ ರೆಡಿ ಮಾಡುವಂತೆ ತಿಳಿಸಿದಳು.

ಹತ್ತು ನಿಮಿಷಗಳಲ್ಲಿ ಅದು ರೆಡಿಯಾಗಿ ಅವಳ ಟೇಬಲನ್ನು ತಲುಪಿತು. ಪರಿಶೀಲಿಸಿ ಸರಿಯಿದೆಯೆಂದು ತಿಳಿದ ಮೇಲೆ ನಿಖಿಲ್ನ ಕ್ಯಾಬಿನ್ಗೆ ಕಳುಹಿಸಿದಳು. ಆತ ಡ್ರಾಫ್ಟ್ನಲ್ಲಿ ಕರೆಕ್ಷನ್ಗಳನ್ನು ಮಾಡಿ ಮತ್ತೆ ಮನಸ್ವಿತಾಳಿಗೆ ಕಳುಹಿಸಿದ. ಹಿಂದನ ವಾರವಷ್ಟೆ ಬೆಂಗಳೂರಿಗೆ ಹೋಗಿ ಒಂದು ಹೊಸ ಕಾಂಟ್ರಾಕ್ಟ್ನನ್ನು ಒಪ್ಪಿಕೊಂಡು ಬರಲಾಗಿತ್ತು. ಆತ ಮತ್ತೆನೊ ಬಹುಮುಖ್ಯವಾದ ವಿಷಯವಲ್ಲದಿದ್ದರೆ ಈ ರೀತಿ ಮೀಟಿಂಗ್ ಕರೆಯುವುದಿಲ್ಲವೆಂದು ಅವಳಿಗೆ ಗೊತ್ತು.

ಕಂಪ್ಯೂಟರ್ನ ಪರದೆಯ ಮೇಲೆ ಕರ್ಸರನ್ನು ಆಡಿಸಿ ಇಂಟರ್ನೆಟ್ಗೆ ಕ್ಲಿಕ್ ಮಾಡಿದಳು. ತನ್ನ ಮೇಲ್ ಓಪನ್ ಮಾಡಿದವಳಿಗೆ ಆಶ್ಚರ್ಯ. ಅರವಿಂದನ ಮೇಲ್ ಇತ್ತು. ಎಂದಿನಂತೆ ಹಾರೈಕೆಯಾಗಲಿ, ಶುಭಾಶಯವಾಗಲಿ ಇರದೆ ದೀರ್ಘವಾದ ಪತ್ರ ಬರೆದಿದ್ದ. ಅದರಲ್ಲಿ ಪ್ರತಿಯೊಂದು ವಿಷಯವನ್ನು ಚೆನ್ನಾಗಿ ವಿವರಿಸಿ ಬರೆದಿದ್ದ. ಆತನಿಗೆ ತನ್ನ ವಿಷಯಗಳೆಲ್ಲಾ ಹೇಗೆ ತಿಳಿದಿದೆ! ತಾನು ಬೆಂಗಳೂರಿಗೆ ಹೋಗಿದ್ದು ಅಶುತೋಶ್ ಅನ್ನುವವನ ಮನೆಯನ್ನು ಖರೀದಿ ಮಾಡುವುದಕ್ಕೆ.
ನಿಖಿಲ್ ಸಂಸ್ಥೆಯಲ್ಲಿ ಬಹಳ ಜವಾಬ್ದಾರಿಯುತ ಕಾರ್ಯ ನಿಭಾಯಿಸುವುದು, ತನ್ನ ಮನೆಯ ಗೋಳಿನ ವಿಷಯ ಹೀಗೆ ತನ್ನೆಲ್ಲಾ ಜಾತಕವನ್ನೇ ತೆರೆದಿಟ್ಟಂತೆ ಇತ್ತು. ಓದಿ ಆಘಾತಕ್ಕೊಳಗಾದವಳಂತೆ ಕುಳಿತಳು. ಇಷ್ಟೊಂದು ತನ್ನ ಬಗ್ಗೆ ನಿಖರವಾದ ಮಾಹಿತಿಗಳನ್ನು ಕಲೆ ಹಾಕಿದವರು ಯಾರು? ನಿಖಿಲ್ನ ಮೇಲೆ ಸಂಶಯ ಮೂಡಿಲ್ಲ.

ನಾಲ್ಕು ಹೊತ್ತು ವ್ಯವಹಾರಗಳಲ್ಲಿ ಮುಳುಗಿರುವಾತ ತನ್ನ ವೈಯಕ್ತಿಕ ವಿಷಯಗಳ ಬಗೆ ತಲೆ ಕೆಡಿಸಿಕೊಳ್ಳಲಾರ. ಆತನ ಕಂಪೆನಿಗಾಗಿ ದುಡಿಯುತ್ತಿರುವ ತನ್ನ ಮೇಲೆ ಅವನಿಗೆ ಅಭಿಮಾನವಿದೆ ಸಹಜ. ಆದರೆ ಅದನ್ನು ಅಪಾರ್ಥ ಮಾಡಿಕೊಳ್ಳಲಾರ. ಇನ್ನುಳಿದಂತೆ ತನ್ನ ವಿಷಯ ತಿಳಿದಿರುವುದು ಯಾರಿಗೆ? ನಿಖಿಲ್ನ ಕುಟುಂಬ ಸ್ನೇಹಿತ ಅಶುತೋಶ್ಗೆ. ದೂರದ ಕಾಶ್ಮೀರದಲ್ಲಿ ಸೇನೆಯ ಪ್ರಮುಖ ಹುದ್ದೆಯಲ್ಲಿರುವಾತನಿಗೆ ಮೇಲ್ ಕಳುಹಿಸುವಷ್ಟು ಸಮಯವಾದರೂ ಎಲ್ಲಿದೆ? ಕಳುಹಿಸಿದರೂ 'ಅರವಿಂದ್' ಅನ್ನುವ ಹೆಸರಿಂದ ಕಳುಹಿಸುವ ಅಗತ್ಯವೇನು? ತನ್ನ ಹಾಗೂ ಆತನ ನಡುವೆ ಅಂತಹುದೇನು ವಿಷಯಗಳು ಡಿಸ್ಕಷನ್ ಆಗಿಲ್ಲ. ನಿಖಿಲ್ ತನ್ನ ಬಗ್ಗೆ ಹೇಳುವ ಸಾಧ್ಯತೆಯೂ ಇಲ್ಲ. ಅಸಲಿಗೆ ನಿಖಿಲ್ಗೆ ತನ್ನ ವೈಯಕ್ತಿಕ ವಿಷಯಗಳ ಬಗ್ಗೆ ತಿಳಿದಿಲ್ಲ. ಹಾಗಾದರೆ ಈ ರೀತಿ ಮೇಲ್ ಕಳುಹಿಸುರುವುದು ಯಾರೊ?

ಮೇಲ್ ಅನ್ನು ಮತ್ತೊಮ್ಮೆ ಪೂರ್ತಿಯಾಗಿ ಓದಿಕೊಂಡ ಬಳಿಕ ಉತ್ತರಿಸದಿರುವುದು ಸಮಂಜಸವಲ್ಲ. ಸ್ವಲ್ಪ ಖಾರವಾಗಿಯೇ ಬರೆಯಬೇಕೆಂದು ಕೊಂಡವಳು ಸ್ವಲ್ಪ ಆಲೋಚಿಸಿಯೇ ಬರೆದಳು. ಈ ರೀತಿ ತನ್ನ ವೈಯಕ್ತಿಕ ವಿಷಯಗಳನ್ನು ತಿಳಿದುಕೊಂಡು ತನ್ನ ಮೇಲೆ ಸಹಾನುಭೂತಿ ತೋರಿಸುವ ಅಗತ್ಯವಿಲ್ಲವೆಂದು, ಆತ ಯಾಕಾಗಿ ತನಗೆ ಮೇಲಿಂದ ಮೇಲೆ ಮೇಲ್ ಕಳುಹಿಸುತ್ತಿರುವನೆಂದು ಮತ್ತು ಈ ರೀತಿಯ ಸಂಬಂಧಗಳಿಗೆ ಅರ್ಥವಿಲ್ಲ, ಇದನ್ನು ಮುಂದುವರಿಸಲು ಮನಸ್ಸಿಲ್ಲವೆಂದೂ ಸ್ಪಷ್ಟವಾಗಿ ಬರೆದು ಕಳುಹಿಸಿದವಳ ಎದುರಿಗೆ ನಿಖಿಲ್ ನಿಂತಿದ್ದು ತಿಳಿಯಲಿಲ್ಲ!

........ ನಾಳೆಗೆ...........

- ಅನು ಬೆಳ್ಳೆ.

0 comments:

Post a Comment