ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ತಿನ್ನಲಿಕ್ಕೆ ಬಂಡಿ ಬಂಡಿಯಷ್ಟು ಇದ್ದೂ ಉಪವಾಸಕ್ಕೆ ಮುನ್ನುಗ್ಗುವ ಒಂದು ಗುಂಪು.ತಿನ್ನಲಿಕ್ಕೆ ಏನೇನೂ ಇಲ್ಲದೇ ಗತ್ಯಂತರವಿಲ್ಲದ ಜನಸಮುದಾಯ ಇದೊಂದು ನೈಜ ಚಿತ್ರ ನಮ್ಮ ಮಹಾನ್ ಭರತ ಮಾತೆಯ ಮಡಿಲಲ್ಲಿ! ತಿನ್ನಲಿಕ್ಕೆ ಇದ್ದೂ ಉಪವಾಸದ ಸಾಹಸ ಅದೊಂದು ಬಲವಂತ ಮಾಘಸ್ನಾನದ ಸ್ಥಿತಿ.ಕಾರಣ-


ಪುರಾಣ, ಪುಣ್ಯಕಥೆ,ದೈವ,ನೇಮ,ವ್ರತ ಹೀಗೇ ಹೆಸರಿಸಬಹುದಾದ ಅವೆಷ್ಟೋ ಅವತಾರಗಳು-ಅವಾಂತರಗಳು-ಅವಕಾಶಗಳು ಆ ಬಾಬಿಗೆ!
ಎಂಜಲು ತಿನ್ನುವ,ಹಳಸಲು ತಿನ್ನುವ, ಹೊಲಸನ್ನು ತಿನ್ನುವ ಅಸಂಖ್ಯ ಮಹಾನ್ ಭಾರತದ ಜೀವಕೋಟಿಗಳು!
ಮನುಷ್ಯ ಯಂತ್ರ-ಉಪವಾಸದಿಂದ ತುಸು ವಿಶ್ರಾಂತಿ ಪಡೆದು ಪುನಃ ಉತ್ತಮಸೇವೆಗೆ ತಕ್ಕುದಾಗಿ ಒದಗುತ್ತದೆ ಎಂತ ಉಪವಾಸವಾದಿಗಳ ಗಾಥಾ!
ಸಾಲದಕ್ಕೆ, ಬೇಡದ ವಿಷ ಪದಾರ್ಥಗಳನ್ನು ಹೊರಹಾಕುತ್ತವೆ,ರಕ್ತ ಶುದ್ಧಿ ಇತ್ಯ್ದಿ ಶುದ್ಧಿಯ ಸುದ್ದಿ!

ವರ್ಷದ 365 ಇರಲಿ ಅಥವಾ 366 ದಿನಗಳಿರಲಿ, ಭಾರತದ ನೆಲದಲ್ಲಿ-ನೆಲೆಯಲ್ಲಿ ಹಬ್ಬ ಹರಿದಿನ-ಗುರುದಿನಗಳಿಗೆ ಬರವೇನು?
ಪರಮಾತ್ಮನ ಮಾತಿಗೇ ಬರೋಣ- ಅರ್ಜುನನಿಗೆ ಗೀತಾಚಾರ್ಯರ ಆಣತಿ-
ಯಾವುದನ್ನೂ-ಎಲ್ಲೂ ಅತಿಯಾಗಿ ಮಾಡುವುದು-ಮಾಡಿಸುವುದು-ಯೋಗ್ಯವಲ್ಲ-ಬದಲಿಗೆ ಭೋಗ-ರೋಗ-ಉದ್ಯೋಗ!
ಅದು ಹಾಗಿರಲಿ,

ದೈವಕ್ಕಿಂತ ಕೆಳಗಿನ ಪ್ರಾಣಿ ವಿಶೇಷ ಮಾನವ ವರ್ಗ ಭಗವಂತನನ್ನು-ನೇಮದ ಅಡಿಯಲ್ಲಿ-ನುಡಿಯಲ್ಲಿ ಉಪವಾಸವಿತ್ತು ದೈವತಾರ್ಚನೆ ಮಾಡುವುದುಂಟೆ? ಹಾಗೆ ದೈವೋಪಾಸನೆ ಮಾಡಿ ಮಾಡಿಸಿ-ಧೂಪ-ದೀಪ-ನೈವೇದ್ಯ-ಮಂಗಳಾರತಿ- ಇ ಪೂಜಾ ಕೈಂಕರ್ಯ ಕೊಂಡಿ ಮುರಿದುಬಿದ್ದಮೇಲೆ ಪೂಜೆ ಸಾಂಗವೇ-ಪ್ರಾಪ್ತವೇ-ಪರಾತ್ಪರಕ್ಕೆ ತಕ್ಕುದೇ?

ಇರಲಿ ಮಹಾ ಗೀತಾಚಾರ್ಯರು ಅಪ್ಪಣೆ ಕೊಡಿಸಿದರು-
ಪತ್ರಂ, ಫಲಂ, ಪುಷ್ಪಂ, ತೋಯಂ
ಇವೆಲ್ಲ ಉಪವಾಸದ ಪಾಲನೆಯಲ್ಲಿ ಪರಾತ್ಪರಕ್ಕೆ-ಪರವೇ-ಪಾರವೇ?
ಇನ್ನೂ ಮುಂದೆ ಹೋಗೋಣ ನಾಲ್ಕು ವಿಧದ ಆಹಾರಗಳನ್ನು-ಎಲ್ಲರ ಶರೀರಸ್ಥನದ-ಪರಾತ್ಪರವು-ವೈಶ್ವಾನರನಾಗಿ-ಬೆಂಕಿಯಾಗಿ-ಜಠರಾಗ್ನಿಯಾಗಿ ಪಚಿಸುತ್ತೇನೆ.ಅನ್ನವೇ-ಇಲ್ಲದ-ಉಪವಾಸದ ಹೊಟ್ಟೆಯಲ್ಲಿ-ಜಠರಾಗ್ನಿ-ಪರಮ ಶಕ್ತಿಗೆ ಏನಿದೆ ಕಿಸಿಯಲು-ಕಸಿಯಲು?
ಪರಾತ್ಪರದ ಮಾತಿಗೇ ಬಂದರೆ ಭೂರಿಗೂ ಇಲ್ಲ ಮಾನ-ಖಾಲಿಗೂ ಇಲ್ಲ ಸ್ಥಾನ.

ಯೋಗವೆಂದರೆ ಗೀತಾಚಾರ್ಯನ ಆದೇಶ-ಸಮತೆ-ಸಮತ್ವ-ಬಾಲೆನ್ಸ್-ಈಕ್ವಲ್-ಝೋಲಿ ಹೊಡೆಯದ-ಹೊಡಿಸದ ಯಾವತ್ತೂ ವ್ಯತ್ಯಾಸವಿಲ್ಲದ-ಒಲ್ಲದ ಐಶ್ವರ್ಯ-ಸೌಂದರ್ಯ!
ದೇವಸ್ಥಾನಗಳಲ್ಲಿ,ಜಾತ್ರೆಗಳಲ್ಲಿ,ಮದುವೆ-ಮುಂಜಿ-ಹುಟ್ಟುಹಬ್ಬ-ಸಾವಿನಊಟ,ಪರೀಕ್ಷೆ-ಯುದ್ಧ-ಚುನಾವಣೆ
ಮತ್ತೇನೇನೋ ನೆಪ ನೆವ-ನಮಗೆ ಭಾರಿ ಭೋಜನ, ಬಾಡೂಟ!
ತಿಂದು ತೇಗಲಿಕ್ಕೆ ಐಹಿಕ ಕಾಮ-ಕ್ಷೇಮ ಆಧಾರ!
ಖಾಲಿಗೆ ಪರಾತ್ಪರದ ವ್ರತ-ಉಪಾಸನೆ ನೇಮ ಇವೇ ಅಸ್ಥಿಭಾರ!
ಹೆಚ್ಚು-ಹುಚ್ಚು-ಇಳಿಸಲು-ಕೆಚ್ಚು!

ಸ್ಥಿತಪ್ರಜ್ಞ,ಯೋಗಿ, ಪರಾತ್ಪರಕ್ಕೆ ತಕ್ಕುದಾಗಿ ಇರಲು-ಇರಿಸಲು ಉಪವಾಸದ ಆವೇಶ-ಸಂದೇಶ ಸಲ್ಲುತ್ತದೆಯೇನು?
ಬೊಜ್ಜು ಕರಗಿಸಲು-ನಂತರ ಮತ್ತೆ ಹೆಚ್ಚು ತಿನ್ನಲು ಬೇಕೇನು ಈ ಆಟ ಪರಿಪಾಟ?
ತಿಳಿದವರು ಇದ್ದಾರೆ-ತಿಳಿಹೇಳುವವರೂ ಇದ್ದರೆ-ತಿಳಿಯದವರೂ-ತಿಳಿಯಲು ಇಚ್ಚಿಸುವರೂ ಎಲ್ಲ ಈ ಸಮಾಜದ ಅವಿಭಾಜ್ಯ ಅಂಗವೇ!
ಬನ್ನಿ ಬಗ್ಗಡವನ್ನು ತಿಳಿಯಾಗಿಸಿ-ತಳಿಯಾಗಿಸಿ-ತಳವಾಗಿಸಿ ನೆಮ್ಮದಿಯ ಜೀವನವನ್ನು ನಮ್ಮದಾಗಿಸಿಕೊಳ್ಳೋಣ!

ಸ್ವಾಮಿವಿವೇಕಾನಂದರು ಹೇಳಿದರು-ಖಾಲಿ ಹೊಟ್ಟೆ ಖೊಟ್ಟೆ ಎಂತ!
ಗಾಂಧಿ ಸಾರಿದರು-ಉಪವಾಸವೇ ಪರಾತ್ಮನ ಸೇವೆ ಅಂತ.
ಇಬ್ರೂ ಒಂದೇ ನೆಲದವರೇ-ಒಂದೇ ನಿಲುವಿನವರೇ-ದೇಶಭಕ್ತಿಯೇ-ಈಶ ಭಕ್ತಿ ಎಂಬ ತಾತ್ವಿಕ ಸಿದ್ಧಾಂತಕ್ಕೆ.
ಎರಡೂ ತರ್ಕವಿವೆ-ತಕ್ಕವಿವೆ.
ಹಾಗಿದ್ದರೆ ಉಪವಾಸಕ್ಕೇಕೆ ಪಟ್ಟ ಹೊಟ್ಟೆ ತುಂಬಿಸುವದಕ್ಕೇಕೆ ಲತ್ತಾ?
ನಾವೀಗ ನಮ್ಮ ವಾದ-ವಿಚಾರ ವಿಮರ್ಶೆಯನ್ನು ಮಹಾನ್ ಜನತೆ-ಓದುಗರ ಸಮ್ಮುಖ ಇಟ್ಟಿದ್ದೇವೆ!
ಸಮ್ಮುಖ-ಶ್ರೀಮುಖ-ಪರಾಞ್ಮುಖ ಇವೇಸಖ-ಸುಖ-ಶಕ!
ತಾವನ್ಮತ್ರಕ್ಕೆ ನಾವು ನೇಪಥ್ಯಕ್ಕೆ-ಈ ನೈವೇದ್ಯವು ಜನ ಹಿತಕ್ಕೆ!
"ಅನ್ನಪೂರ್ಣೆ ಕರುಣಾಕಟಾಕ್ಷಿ-ತ್ವಮೇವ ಸಾಕ್ಷಿ"

-ಆರ್.ಎಂ.ಶರ್ಮ,ಮಂಗಳೂರು.

1 comments:

RANGANATHA A said...

STUFF IS TOUGH.VERY DIFFICULT TO UNDERSTAND FOR A COMMON MAN.OF COURSE IT IS SHARMA'S STYLE!
RANGANATH MANGALORE

Post a Comment