ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು:ಕರ್ನಾಟಕ ಘನ ಸರಕಾರದ ವಾರ್ತಾ ಇಲಾಖೆಯು ನೀಡುವ 2010ನೇ ಸಾಲಿನ 'ಪರಿಸರ ಪತ್ರಿಕೋದ್ಯಮ ಪ್ರಶಸ್ತಿ'ಗೆ 'ಅಡಿಕೆ ಪತ್ರಿಕೆ'ಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆಯವರನ್ನು ಆಯ್ಕೆ ಮಾಡಿ ಸರಕಾರವು ಆದೇಶ ನೀಡಿದೆ. ನಾ. ಕಾರಂತರು ಮೂಲತಃ ಸುಳ್ಯ ಸನಿಹದ ಪೆರಾಜೆಯವರು. ಗ್ರಾಮೀಣ, ಪರಿಸರ ಮತ್ತು ಕೃಷಿ ಸಂಬಂಧಿ ಲೇಖನಗಳು ಕನ್ನಾಡಿನ ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ.


ದಕ್ಷಿಣ ಕನ್ನಡ ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ, ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಮುರುಘಾಶ್ರೀ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಪ.ಗೋ.ಪ್ರಶಸ್ತಿ ಕೃಷಿ ಮಾಧ್ಯಮ ಕೇಂದ್ರದ ಪ್ರಶಸ್ತಿ..ಹೀಗೆ ಹಲವು ಪತ್ರಿಕೋದ್ಯಮ ಪ್ರಸಸ್ತಿಗಳಿಂದ ಪುರಸ್ಕೃತರು. ಇವರ 'ಸಾಮಗ ಪಡಿದನಿ' (ಕೀರ್ತಿ ಶೇಷ ಮಲ್ಪೆ ರಾಮದಾಸ ಸಾಮಗರ ಅರ್ಥ ವೈಭವ) ಕೃತಿಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪುರಸ್ಕಾರ ಪ್ರಾಪ್ತವಾಗಿದೆ.

ಅಕ್ಷರಯೋಗಿ ಮಂಗಳೂರು ಹರೇಕಳದ ಹಾಜಬ್ಬರ ಕುರಿತು 'ಪ್ರಜಾವಾಣಿ'ಯಲ್ಲಿ ಬರೆದ ವ್ಯಕ್ತಿಚಿತ್ರವು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯಗಳ ವಾಣಿಜ್ಯ ವಿಭಾಗದ ನಾಲ್ಕನೇ ಸೆಮಿಸ್ಟರ್ನ ಕನ್ನಡ ಪಠ್ಯದಲ್ಲಿ ಸೇರ್ಪಡೆಗೊಂಡಿದೆ. ಈ ವರುಷದಿಂದಲೇ ಈ ಪಠ್ಯ ಕಾಲೇಜುಗಳಲ್ಲಿ ಅನುಷ್ಠಾನಗೊಂಡಿದೆ.

ಶೇಣಿ ದರ್ಶನ, ಶೇಣಿ ಚಿಂತನ, ಹಾಸ್ಯಗಾರನ ಅಂತರಂಗ, ಯಕ್ಷಕೋಗಿಲೆ, ಅಂತಿಕ ಮೊದಲಾದ ಯಕ್ಷಗಾನ ಕೃತಿಯಲ್ಲದೆ; ಕೃಷಿ ಕುರಿತಾದ ಹಸಿರು ಮಾತು, ಕಾಡು ಮಾವು, ತಳಿ ತಪಸ್ವಿ, ನುಡಿನಮನ, ಎಡ್ವರ್ಡ್ ರೆಬೆಲ್ಲೋ, ಮಣ್ಣಮಿಡಿತ, ಮಾಂಬಳ ಮೊದಲಾದ ಹದಿಮೂರು ಪುಸ್ತಕಗಳು ಪ್ರಕಟವಾಗಿವೆ. ಇನ್ನೆರಡು ಪುಸ್ತಕಗಳು ಅಚ್ಚಿನಲ್ಲಿವೆ. 'ಯಕ್ಷರೂಪಿಣಿ, ಸುವರ್ಣ, ಯಕ್ಷಮಾಣಿಕ್ಯ' ನೆನಪು ಸಂಚಿಕೆಗಳ ಸಂಪಾದಕತ್ವ.
ರಾಸಾಯನಿಕಗಳ ಘೋರ ಪರಿಣಾಮದಿಂದ ಪರಿಸರದೊಂದಿಗೆ ಉಣ್ಣುವ ಆಹಾರವೂ ವಿಷಮಯವಾಗುತ್ತಿದೆ.

ಈ ಕುರಿತು ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸುವ ದೃಷ್ಟಿಯಲ್ಲಿ 'ಊಟದ ಬಟ್ಟಲಿನಲ್ಲಿ ವಿಷ' ಎಂಬ ವಿಚಾರವನ್ನು ಶಾಲೆಗಳಲ್ಲಿ ಪವರ್ಪಾಯಿಂಟ್ ಮೂಲಕ ಪ್ರಸ್ತುಪಡಿಸುತ್ತಿದ್ದಾರೆ. ಇವರ ಗೌರವ ಸಂಪಾದಕತ್ವದಲ್ಲಿ ವಿಟ್ಲ ಉಬರು 'ಹಲಸು ಸ್ನೇಹಿ ಕೂಟ'ದ ವಾರ್ತಾ ಪತ್ರ ಪ್ರಕಟವಾಗಿದೆ.
ಉದಯವಾಣಿಯಲ್ಲಿ 'ನೆಲದ ನಾಡಿ' ಮತ್ತು ಪುತ್ತೂರಿನ ಸುದ್ದಿ ಪತ್ರಿಕೆಯಲ್ಲಿ 'ಊರು ಸೂರು' ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ನಾ. ಕಾರಂತ ಪೆರಾಜೆಯವರು ಪ್ರಸ್ತುತ ಮಾಜಿ ಯಕ್ಷಗಾನ ಕಲಾವಿದ! ಉಪ್ಪಳ ಮೇಳ, ಕೂಡ್ಲು ಮೇಳ, ಮಲ್ಲ ಮೇಳಗಳಲ್ಲಿ ಅನಿಯಮಿತವಾಗಿ ತಿರುಗಾಟ ಮಾಡಿದ್ದರು. ವೃತ್ತಿ ಸಂಬಂಧಿ ಕೆಲಸಗಳ ಬಿಡು ಸಂದರ್ಭಗಳಲ್ಲಿ ತಾಳಮದ್ದಳೆಯನ್ನು ಭಾಗವಹಿಸುತ್ತಾರೆ, ಯಕ್ಷಗಾನ ಕುರಿತಾದ ವಿಮರ್ಶೆ, ಲೇಖನಗಳನ್ನು ಬರೆಯತ್ತಿರುತ್ತಾರೆ.ತಾಯಿ ಲಕ್ಷ್ಮೀ, ಮಡದಿ ವೀಣಾ ಮತ್ತು ಮಗಳು ಸುಕನ್ಯಾ.

1 comments:

Mamata said...

Congrats Sir, You deserve this..:-)

Post a Comment