ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಶರಬತ್ತು ಮಾಡಿದ ಲಿಂಬೆ ಹಣ್ಣಿನ ಸಿಪ್ಪೆಯನ್ನು ಉಪ್ಪು ಜಾಡಿಯಲ್ಲಿ ತುಂಬಿಡಿ. 10 ದಿನಗಳ ನಂತರ ಅದರಿಂದ ರುಚಿಕರವಾದ ತೊಕ್ಕು ತಯಾರಿಸಿ.


ಬೇಕಾಗುವ ಸಾಮಾನು : ಲಿಂಬೆ ಹಣ್ಣಿನ ಸಿಪ್ಪೆ - 10, ಬೆಳ್ಳುಳ್ಳಿ - 1 ಗಡ್ಡೆ, ಕೆಂಪು ಮೆಣಸು - 20, ಒಣಕೊಬ್ಬರಿ ಹೋಳು - 1, ಉದ್ದಿನ ಬೇಳೆ - 1 ಟೀ ಸ್ಪೂನ್, ಮೆಂತೆ - ಕಾಲು ಟೀ ಸ್ಪೂನ್, ಚಿಟಿಕೆ ಇಂಗು, ಉಪ್ಪು, ಒಗ್ಗರಣೆ ಸಾಮಾಗ್ರಿ
ಮಾಡುವ ವಿಧಾನ : ಕೊಬ್ಬರಿಯನ್ನು ಸಣ್ಣ ಚೂರುಗಳಾಗಿ ಮಾಡಿ ಕೆಂಪಗೆ ಹುರಿಯಿರಿ. ಬೆಳ್ಳುಳ್ಳಿ , ಉದ್ದಿನಬೇಳೆ, ಮೆಂತೆ, ಮೆಣಸು, ಎಲ್ಲವನ್ನೂ ಬೇರೆ ಬೇರೆಯಾಗಿ ಹುರಿಯಿರಿ. ನಂತರ ಲಿಂಬೆ ಸಿಪ್ಪೆ ಹಾಗೂ ಹುರಿದ ಸಾಮಾಗ್ರಿಗಳನ್ನು ನೀರು ಹಾಕದೆ ನುಣ್ಣಗೆ ರುಬ್ಬಿ. ಅಗತ್ಯವೆನಿಸಿದರೆ ಉಪ್ಪು ಹಾಕಿ. ತೆಂಗಿನೆಣ್ಣೆ ಜಾಸ್ತಿಹಾಕಿ ಒಗ್ಗರಣೆ ಕೊಡಿ. ಈ ತೊಕ್ಕು ಜಾಡಿಯಲ್ಲಿ ಮುಚ್ಚಿಟ್ಟರೆ 15 - 20 ದಿನಗಳ ತನಕವೂ ಕೆಡುವುದಿಲ್ಲ. ಗಂಜಿಯೊಡನೆ ನೆಂಜಿಕೊಳ್ಳಲು ರುಚಿಕರ.
- ಸುಮತಿ ಕೆ.ಸಿ.ಭಟ್, ಆದೂರು.

0 comments:

Post a Comment