ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಮಳೆಗಾಲ ಪ್ರಾರಂಭಗೊಂಡಿದೆ. ಹಳ್ಳಿಗಳಲ್ಲಂತೂ ಮನೆ ಮನೆಗಳಲ್ಲಿ ಎಂಬಂತೆ ತರಕಾರಿ ಕೃಷಿ ಚುರುಕುಗೊಂಡಿದೆ. ಎಳೆಯ ಮುಳ್ಳುಸೌತೆ ಮಿಡಿಗಳು ಬಳ್ಳಿಯಲ್ಲಿ ಕಾಣಲಾರಂಭಿಸಿದೆ.

ಧೋ ಎಂದು ಸುರಿಯುವ ಮಳೆಯ ಸಂದರ್ಭದಲ್ಲಿ ಕುಚ್ಚಲಕ್ಕಿ ಗಂಜಿಯೊಡನೆ ನೆಂಜಿಕೊಳ್ಳಲು ಮುಳ್ಳುಸೌತೆ ಸಳ್ಳಿ ಬಲುರುಚಿ. ಗಟ್ಟಿಮೊಸರು,ಕುಚ್ಚಿಲಕ್ಕಿ ಗಂಜಿ,ಜೊತೆಗೆ ಮುಳ್ಳುಸೌತೆ ಸಳ್ಳಿ...ವ್ಹಾವ್ ಏನು ರುಚಿ...

ಬೇಕಾಗುವ ಸಾಮಾಗ್ರಿಗಳು : ಮುಳ್ಳು ಸೌತೆ - 1, ಶುಂಠಿ - ನೆಲ್ಲಿಕಾಯಿ ಗಾತ್ರದ್ದು , ಉಪ್ಪು - ರುಚಿಗೆ ತಕ್ಕಷ್ಟು, ಹಸಿಮೆಣಸು - 2, ಒಗ್ಗರಣೆ ಸಾಮಾಗ್ರಿ.
ಮಾಡುವ ವಿಧಾನ : ಮುಳ್ಳು ಸೌತೆಯನ್ನು ಸಣ್ಣಗೆ ಹೆಚ್ಚಿ ಒಂದು ಪಾತ್ರೆಯಲ್ಲಿಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಶುಂಠಿ ಹಾಗೂ ಹಸಿಮೆಣಸನ್ನು ಚೆನ್ನಾಗಿ ಜಜ್ಜಿ ಬೆರೆಸಿಡಿ. ಒಗ್ಗರಣೆ ಹಾಕಿ. ಗಂಜಿಯೊಂದಿಗೆ ಮುಳ್ಳುಸೌತೆ ಸಳ್ಳಿ ರುಚಿಕರ.

0 comments:

Post a Comment