ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
4:33 PM

ಪಯಣ

Posted by ekanasu

ಕಾರಿಡಾರ್

ಏನೆಂದು ಹಾಡಲಿ ಈ ಬದುಕ ಪಯಣವನು
ಕಡಲೊಳು ಮುಳುಗಲೇನೋ ತೇಲಲೇನೋ
ಈ ಜೀವದುಸಿರಿನ ದೋಣಿಯಲಿ
ಅರಿವಿಲ್ಲ ಮನಸಿನಲಿ ತಿಳಿವಿಲ್ಲ ಜ್ಞಾನದಲಿ
ಯಾವ ಧ್ರುವವ ಕ್ರಮಿಸುವುದೇನೋ? ಈ ಪಯಣ


ಹೃದಯ ಒಂದು ಕಲ್ಲು
ಮನಸೆಲ್ಲ ಮುಳ್ಳು
ಮಾತೆಲ್ಲ ಒರಟೊ
ಈ ಕಡಲ ನೀರ ಕೇಳಿ ದಿಕ್ಕು ತಿಳಿಯಲಿಲ್ಲವೊ?

ನೂರು ಅಲೆಗಳ ಆರ್ಭಟಕ್ಕೆ
ಜೀವವೆಂಬ ದೋಣಿಯಲಿ
ಪರದಾಟ ತಪ್ಪಿತೆ!
ಮುಸುಕು ಮೋಡ ದೂರದಲ್ಲಿ ಧ್ರುವವು ಎಲ್ಲಿ ತೋರಿತೊ

ಬಯಕೆ ಎಂಬ ಬಹುದೊಡ್ಡ ಬೆಳಕೆ ಮನದಲ್ಲಿ ಮೂಡಿರಲು
ದೋಣಿ ಮುಂದೆ ಸಾಗಿತೇ?

ಆ ಕಡಲು ನೀಡಿದೆ
ಬಹುಜೀವಿಗಳಿಗಾಶ್ರಯ
ಕೇಳಿತೇನೊ ಆ ಜೀವಿಗಳಿಗೆ ತನ್ನ ಬಯಕೆಯ

ತನ್ನ ನೀರು ಉಪ್ಪೆಂದು,
ದೃತಿಗೆಡಲಿಲ್ಲ, ಸಂಕೋಚ ಪಡಲಿಲ್ಲ
ಬಹುಕಾಲ ಮನಬಿಚ್ಚಿ ಹಿರಿದಿತ್ತು ಆನಂದದಿಂದ

ಎಲ್ಲ ಕನಸನು
ತನ್ನಲಿಟ್ಟುಕೊಂಡು ಸಾಗಿತೇನೋ
ಆ ಧ್ರುವವ!

ಸಾಗಬೇಕು
ಜೀವನ ದೋಣಿಯಲಿ
ಅರಿಯಬೇಕು ಕಡಲ ಮನಸನ್ನು.

- ಸುಬ್ರಹ್ಮಣ್ಯ ಸಿ.

0 comments:

Post a Comment