ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ಭಾರತದ ಕೃಷಿ-ಖುಶಿಯೆ ಎಂದರೆ ಏಕಲ್ಲಾ ಎಂತಲೂ-ಖಂಡಿತ ಇಲ್ಲಎಂತಲೂ ಹೇಳದೇಇರಲಾಗದು!
ಕೃಷಿ-ವ್ಯವಹಾರ-ವ್ಯಾಪಾರ-ದುರಾಚಾರ-ದುಃಖಚರ ಹೀಗೆ ಅನೇಕ ಅವತಾರಗಳು-ಅವಾಂತರಗಳು ಅದಕ್ಕೆ!
ಭಾರತದ ಅರ್ಥವ್ಯವಸ್ಥೆ-ಕೃಷಿಪ್ರಧಾನ ಎಂತಲೂ-"ಅಗ್ರೇರಿಯನ್-ಆಂಗ್ಲಭಾಷಾಮೆರಗು ಅದಕೆ!",
ಅರ್ಥವ್ಯವಸ್ಥೆಯ ಬೆನ್ನೆಲಬು ತೆರಿಗೆ ಇದು ಕೃಷಿಗೆ ಬಂದರೆ ಅಲ್ಲಿ ಅದಕೆ ಕಸಬರಿಗೆಯೇ ಪಾರಿತೋಷಕ!ಮನೆಗೆಕಸಬು ಆಯಿತು-ಹೋಯಿತು,
ಪರದೇಶಕ್ಕೆ ಉತ್ಪನ್ನಗಳ ಭಾರಿಪ್ರಮಾಣದ ರವಾನೆ-ರಫ್ತು
ಜೀವನವಿಧಾನವಲ್ಲ-ವ್ಯಾಪರವೇ ವಿಧಾನ,
ಹಣ-ಹೇರಳಹಣ-ಪರದೇಶದಹಣ-ದಾಲರ್-ಡಿಯರರ್ ಅದೇ ಈಗ ಈಕಸಬಿನ ಕಸುವು!
ಹೆಚ್ಚು ಸಂಪಾದನೆಯೇ ಮಂತ್ರ-ಅದಕ್ಕೇ ವ್ಯಾಪಾರಿ-ಕಮರ್ಷಿಯಲ್ ಉತ್ಪನ್ನ,

ಹೆಚ್ಚು ಇಳುವರಿ,
ಕಡಿಮೆಸಮಯದ-ಶೀಘ್ರ ಫಸಲು ಕೈಗೆ ಸಿಗುವ ಉಪಾಯ-ಉಪಾಸನೆ
ಅಂಗೈಅಗಲದಲ್ಲಿ-ಆಕಾಶದೆತ್ತರದ ಧನದಬವಣೆ,
ಹೀಗಾಗಿ-ಮಣ್ಣನ್ನು ನುಣ್ಣಗೆ-ತಣ್ಣಗೆ-ಮಣ್ಣು ಗೋರಿಗೆ-ಆದರೆ ಮಣ್ಣಿನಗೋರಿ ಅದಕ್ಕೆ ಇಂಬು-ಕೊಂಬು-ಬಲವಾದ ಗೊಬ್ಬರ,
ಅದಕ್ಕಾಗಿಯೇ ಹೇಳಿಮಾಡಿಸಿದ ಹೈರಾಣವಾಗಿಸುವ ರಾಸಾಯನಿಕಗಳಸಮೃದ್ಧ ಸಂಪತ್ತು-ರಾಸಾಯನಿಕ ಗೊಬ್ಬರ ತಂದಿದೆ ಆಪತ್ತು-ಹಾಗಾಗಿ ಆಪ್ತ-ಅಸ್ತ-ನಿಸ್ಶಸ್ತ್ರ!

ಆರೊಗ್ಯಕ್ಕೆ ಆಹಾರ,
ಆಹರಕ್ಕೆ-ಬೆಳೆ.
ಬೆಳೆಗೆ ಕೃಷಿ.
ಕೃಷಿಗೆ ಐಶ್ವರ್ಯವೇ-ಆಂತರ್ಯ -ಔದಾರ್ಯ!
ಗೊಬ್ಬರಕ್ಕೆ ಹೊಡೆದಾಟ-ಅರೆಚಾಟ-ಕಿತ್ತಾಟ!
ಮಳೆಗೆ ಮುನ್ನವೇ-ಬೀಜ, ಹೇರಳವಾಗಿ ರಸಗೊಬ್ಬರದ-ದಿಬ್ಬಣ.
ಅದಕ್ಕೆ ಪರವಾನಗಿ-ಹತೋಟಿಗೆ-ಚೀಟಿ,ಅದರ ಉಸ್ತುವಾರಿಗೆ ಮಂತ್ರಿ-ಮಾಗಧರ ಗಡಣ.
ಇದು ರಾಜ್ಯದ ಚಿತ್ರವು.

ಇದರಪ್ಪ-ದೊಡ್ಡಪ್ಪ-ಕೇಂದ್ರಸರಕಾರದಲ್ಲಿ-ರಸಗೊಬ್ಬರಕ್ಕೇ ಮಂತ್ರಿ-ಇಲಾಖೆ.
ಕಾರ್ಖಾನೆಗಳ ಸ್ಥಾಪನೆ,
ಹೊರದೇಶಗಳಿಂದ ಆಮದು
ವಿದೇಶಗಳಜತೆ-ಸಂಧಾನ-ಅನುಸಂಧಾನ-ಒಪ್ಪಂದ ಗೊಬ್ಬರಕ್ಕೆ,ಗೊಬ್ಬರದ ಘಟಕಗಳ ಸ್ಥಾಪನೆಗೆ ದುಂಬಾಲು-ಒಲವು!
ಎಲ್ಲರಿಗೂ ಕೂಳು-ಅನ್ನದ ಕೂಗಿನ ಗುಮ್ಮ.

ಹಿಡಿಗಾತ್ರದ ಜಾಗ,ಗಾಡಿಗಾತ್ರದ ಕಾಳು!
ಆಗ ಸಾವಯವವೇ-ಸಾಯುವುದೇ ಪ್ರಶ್ನೆ.
ಉತ್ತರ ಸಂತೆಗೆ ಎಂಟುಮೊಳ ಗಾದೆಯ ಪ್ರತಿರೂಪ ತಿನ್ನಲು ಏನೋ ಕಾಳು.
ಆ ಕ್ಷಣದ ಬದುಕು ಅದುವೇ ಅಮಲ-ಅಮಲು.

ಉತ್ತಮ-ಪರಮೋತ್ತಮ ಆಹಾರಕ್ಕೆ ಸಾವಯವಕೃಷಿ-ಅರಣ್ಯರೋದನ.
ವೇದನದ ಉಪಶಮನ-ಅದೇ ಪ್ರಮಾಣ-ನಿರ್ಮಾಣ -ನೇಮ.
ಉಳಿದದ್ದು-ಕಾಮ,ಅತಿಕಾಮ.

ಒಂದೊಮ್ಮೆ ಸಾವಯವವೇ ಜೀವನ-ಜಾಣತನ-ಜತನ ಇವೇ ಶಿರೋಧರ್ಯವಾದರೆ
ರಸಗೊಬ್ಬರವನ್ನು-ತಲೆಗೆ ತಂದುಕೊಂಡು-ತಲೆಮೇಲೆಏರಿಸಿಕೊಂಡು ಮೆರೆದದ್ದಾದರೂ ಏಕೆ ಅಲ್ಲವೇ?
ದೇಶದ ಜನ ಆಸ್ತಿ-ಬದಕಲು-ಪ್ರಾರಂಭಕ್ಕೆ ನಂತರ ಉತ್ತಮ ಬದುಕಿಗೆ-ಬಳುಕುವ-ತಿಣುಕುವ-ಕುಹಕ!
ಮೊದಲು ಬದುಕೋಣ-ಬದುಕು ಸಹ್ಯವೆನಿಸಿದರೆ-ಉತ್ತಮಕ್ಕೆ ಲಗ್ಗೆ ಹಾಕಿದರೆ ಆಗದೇನು?

ನಾವು ಕೇಳಿದೆವು-ಓದಿದೆವು-ನೋಡಿದೆವು-ಸಾವಯವದ ಕಥೆ.
ಸಯುವ-ಸಾಯಿಸುವ ವ್ಯಥೆ ನಿತ್ಯ ನೂತನವಾದರೆ-ಹಿಡಿಗಾತ್ರದ ಜನ ಜಗದಗಲ ಗುಲ್ಲು-ಗಲಾಟೆ-ಜಾಗಟೆ ಹಿಡಿದು,
ರಾಸಾಯನಿಕ ಮಾರಕ ಎಂತಲೂ,
ಸಾಮಯಿಕಕ್ಕೆ ಏನೂ ಮಾಡಲಾಗದೆ-ಮಿಕ-ಮಿಕ ನೋಡುವ ಪರಮಾರೋಗ್ಯದ ಹರಿಕಾರರು-ಹಲ್ಲುಕಿರಿಯುವವರು-ಈಚಿತ್ತಶುದ್ದಿಯ ದಿವ್ಯ ಆಹಾರದ ಸರದಾರರು.

ದೇಶವಿದೇಶದ ಅಮಲು-ತುಮಲು-ತೆವಲು ಎಲ್ಲ ಸ್ವಂತ ಮಾಡಿಕೊಂದ ಸ್ವದೇಶಿಗಳಿಗೆ-ಪಕ್ಕಾ ಸತ್ವದ-ಸತ್ಯದ-ಸಾತ್ವಿಕ ಆಹಾರ ಎಂಬ ಈ ಸಾವಯವದ ದೇಣಿಗೆ ವೇದ್ಯ-ಪರಮವೈದ್ಯ!
ನಿಜಕ್ಕೂ ಸಾವಯವವೇ ಸತ್ಯವಾದರೆ-ರಾಸಾಯನಿಕಕ್ಕೆ ಮುಗಿಬೀಳುವ ಎಲ್ಲ ರೀತಿಯ-ಪ್ರೀತಿಯ ಪ್ರಕ್ರಿಯೆಗಳಿಗೂ ಸಂಚಕಾರ ಹಾಕಬಾರದೇಕೆ-ಹಾಕಿಸಬಾರದೇಕೆ?

ಸಾವಯವದ ವಾದಎಂದರೆ -"ಕೋತಿಮೊಸರನ್ನವನ್ನು ತಿಂದು-ಕೈಯನ್ನು-ಮೇಕೆಬಾಯಿಗೆ ಒರಸಿದಂತೆ"
ಸರಕಾರಕ್ಕೆ ತಪ್ಪೆಇಸಲಿಲ್ಲ-ನೆಲದ ಕೆಲಸದವನಿಗೆ ತಪ್ಪೆನಿಸಲಿಲ್ಲ-ನೆಲದ-ಋಣ-ಕೃಷ್ಯುತ್ಪನ್ನ ತಿಂದವನಿಗೆ-ಸಾವಯವೇತರ-ಅನ್ಯ್ವೆನಿಸಲಿಲ್ಲ ಅಲ್ಲ ಅನನ್ಯ ಎನಿಸಿತು.

ಇದೇ ಸಾವಯವದ-ಸವೆದ-ಸವಕಲು ಗಾಥೆ!
ಲೋಕವೇ ಒಂದುಕಡೆಯಾದರೆ-ಶೋಕವೇ ಕಡಲೆಂದು ಹಿಯಿಲೆಬ್ಬಿಸುವ-ಒಕ್ಕಲೆಬ್ಬಿಸುವ-ಈ ಸಾವಯವದ ಗುರಿಕಾರರು-ಗುಡಿಗಾರರು-ಗಾರುಡಿಗಾರರು!
ಜನ ಚರ್ಚಿಸಲಿ-ಇಛ್ಛಿಸಲಿ ಅದುವೇ ದೇಶಕ್ಕೆ-ದೇಶೀಯರಿಗೆ-ಉಪ್ಪರಿಗೆ-ಚಪ್ಪರಿಸಲು-ಒಪ್ಪಿಸಲು!
"ಅನ್ನೇನ ಜಾತಾನಿ ಜೀವಂತಿ"

ಆರ್.ಎಂ.ಶರ್ಮಾ, ಮಂಗಳೂರು.

0 comments:

Post a Comment