ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ನಾವೀಗ ಜಿಜ್ಞಾಸೆಗೆ ತೆಗೆದುಕೊಂಡಿರುವ ಸಂಗತಿಯು ಪರಮ ಉತ್ಕೃಷ್ಟವಾದ ಇಡೀಭಾರತಕ್ಕೇ ಅನ್ವಯಿಸುವ ಅನನ್ಯವಾದದು.
ರಕ್ಷಣೆಗೆಂದೇ ನಿಯೋಜಿತವಾದ, ರಕ್ಷಣೆಯೇ ಏಕೈಕ ಕೈಂಕರ್ಯವಾದ ಪೋಲಿಸ್ ವ್ಯವಸ್ಥೆ ಆಗಾಗ-ಅಲ್ಲಲ್ಲಿ ನಡೆಯುವ-ನಡೆಯಿಸಲ್ಪಡುವ-
ಉತ್ಸವ, ಜಾತ್ರೆ,ಪರಿಷೆ,ಸಮ್ಮೇಳನ, ಸನ್ಮಾನ ಹೀಗೆ ಎಲ್ಲೆಲ್ಲಿ ಅಸಂಖ್ಯ ಜನಸೇರುತ್ತದೋ-ಸೇರಿಸಲ್ಪಡುತ್ತದೋ ಅಲ್ಲೆಲ್ಲ ಅವರವರ ಆಸ್ತಿ-ಆಸ್ಥೆ-ನಗ-ನಗದು ,ಜೀವ,ಜೀವನ ಇವಕ್ಕೆಲ್ಲಾ ಅವರವರೇ ಬಾಧ್ಯರು-ಸಂಪನ್ನರು-ಸುಶೀಲರು ಎಂತೆಲ್ಲಾ ಸಾರಿ ತಾನು ದಾರಿಬಿಟ್ಟು ತನ್ನದಾರಿಹಿಡಿದು-ಅದನ್ನೇ ಹಿರಿದು ಮಾಡಿಕೊಂಡು-ಉಳಿದವನ್ನು ಹರಿದುಕೊಂಡು ಉಳಿದದ್ದು ಏನಾದರೂ ಇದ್ದರೆ-ಇರಿಸಲ್ಪಟ್ಟರೆ-ಅವನ್ನೆಲ್ಲಾ,
ಹರಿಚಿತ್ತ-ಹರಚಿತ್ತ ಎಂತ ಎಲ್ಲರನ್ನೂ ಚಿತ್ತುಮಾಡಿಸುವುದು ಹೊಸತೇನಲ್ಲವು.
ಇರಲಿ-ವ್ಯವಸ್ಥೆಗೆ-ನಿರ್ದೇಶನ-ದಿವ್ಯದರ್ಶನ ಇವಕ್ಕೆ ಅವರವರೇ-ಆಗಾಗಲೇ ಜವಾಬ್ದಾರರು ಎಂದಾದಮೇಲೆ-
ಅನ್ನಕ್ಕೆ-ತಿನ್ನುವ ಕೂಳಿಗೆ-ತಿನ್ನಲುಕೊಡುವ ಕೂಳಿಗೆ ಈ ತರ್ಕ ಬೇಡವೇ-ಬಾಡಿತೇ?
ಈಗ ನೋಡಿ-ಎಗ್ಗಿಲ್ಲದೇ ಮಗ್ಗಲು ಮುರಿಯುವ ಅನ್ಯಾದೃಶ ಜನಕ್ಕೆ-ಸಂಖ್ಯೆಗೆ-ಕೂಳಿಗೆ ಭದ್ರತೆ!

ಸಾರ್ವಜನಿಕಹಣವನ್ನು ಸಲ್ಲದ ರೀತಿಯಲ್ಲಿ ಖರ್ಚುಮಾಡಿದರೆ -ಕೆಂಗಣ್ಣಾಗುವಮಂದಿ ಕೋಟಿಜನಕ್ಕೆ ಕೂಳು-ಅದೂ-ಕಾಲಬದ್ಧವಾಗಿ-ಖಾತರಿಯಾದ ಆಹಾರಭದ್ರತೆ ಎಂಬ ಕಾಯಿದೆ-ಕಾನೂನು ಇದಕ್ಕೆ ಅಗ್ರತಾಂಬೂಲ-ಹಂಬಲ-ಸರ್ವಬಲ.
ಇದುಬೇಕೆ? ಯಾರಿಗೆಬೇಕು? ಯಾಕೆಬೇಕು?

ಸಾಮಾಜಿಕ ಹಿತವಲ್ಲದ-ಸಾಮಾಜಿಕ ಒಲವಿಲ್ಲದ ಯಾವುದೋ ಕಾರಣಕ್ಕೆ ಯಾರಿಗೋ ಹುಟ್ಟಿದ-ಯಾರಿಂದಲೋ ಹುಟ್ಟಿಸಲ್ಪಟ್ಟಸಂತಾನಕ್ಕೆ ಸಾಂತ್ವನಕ್ಕೆ-ಕೊನೆಗೆ ಅಧಿಕಾರಮತ್ತ-ಅದಿಕಾರಪ್ರಯುಕ್ತ ಜೀವನನಿರ್ವಹಣೆಗೆ-ಅಪಾರ ಹಣದ ಅಪಮೌಲ್ಯ ಆಪ್ಯಾಯಮಾನವಾಯಿತು.
ಮಾನವಿಲ್ಲ-ಮೇನವಿಲ್ಲ-ಎಲ್ಲ ದಿವ್ಯಮೌನ.

ಅವರವರ ಸಂಸಾರಕ್ಕೆ ಅವರವರೇ ಬಾಧ್ಯರು-ಬದ್ಧರು-ಒಳ್ಳೆಯದಕ್ಕೆ-ಕೆಟ್ಟದಕ್ಕೆ ಎಂದಮೇಲೆ ಸರಕಾರಕ್ಕೆ ಸಾರ್ವಜನಿಕವಾಗಿ ದಿನಾಉತಣಮಾಡಲು-ಮಾಡಿಸಲು ನೈತಿಕತೆ ಇದೆಯೇ?
ಹಾಗೊಮ್ಮೆ ಇಲ್ಲಿ ಜನಹಿತವಿದೆ-ಜನಮತವಿದೆ ಎಂದರೆ ಅದೇ ತರ್ಕದಲ್ಲಿ ಕಾಣಸಿಗುವ ಅನುದಿನದ ಜನಜೀವನದ ಎಲ್ಲಾ ಅಗತ್ಯೆಗಳಿಗೂ ಸರಕಾರ ಕಟಿಬದ್ಧತೆಯಿಂದ ಹಣದ ಹೊಳೆಹರಿಸಲು ಸಮ್ಮತಿಸುವುದೇ?
ಉತ್ತರ ಇಲ್ಲ.

ಕಾರಣಾಲ್ಲಿ ಅದಕ್ಕೆ ಅಗತ್ಯವೇ ಕಾಣಿಸುವುದಿಲ್ಲ!
ಇರಲಿ ಜನಸಂಖ್ಯೆ ಬೆಳದಂತೆ-ಬೆಳಸಲ್ಪಟ್ಟಂತೆ ಅವಕ್ಕೆಲ್ಲ-ಅಲ್ಲೆಲ್ಲ-ಆಗಾಗಲೇ ಸ್ಪಂದಿಸುತ್ತದೇನು?
ಇದು ಯಕ್ಷಪ್ರಶ್ನೆಯೆ-ಶೇಷಪ್ರಶ್ನೆಯೆ-
ಒಟ್ಟಿನಲ್ಲಿ ಶ್ರೇಷ್ಟಪ್ರಶ್ನೆಯಂತೂ ಸರಿಯೇ ಸರಿ.

ಇರಲಿ ಮಹಾನ್ ಭಾರತದ ಉದ್ದಗಲಕ್ಕೂ ಹೆಚ್ಚು ವರಮಾನವಿಲ್ಲದಿದ್ದರೂ-ಹೆಚ್ಚುಮಾನ-ಸನ್ಮಾನಪಡೆಯದಿದ್ದರೂ-ತರ್ಕಶ್ರೀಮಂತರು ಇಲ್ಲವೇನು?
ಅವರೆಲ್ಲಾಚರ್ಚಿಸಲಿ-
ಆಗ ಮೊಸರು ಕಡೆದಾಗ ನವನೀತ ಬರುವಂತೆ-ನವನೀತಿ-ರೀತಿ-ಪ್ರೀತಿ ಆವಿರ್ಭಾವವಾಗದೇನು?
ಹಾಗಾಗಿ ಜನರಮುಂದೆ-ಜನಸಾಮನ್ಯರಮುಂದೆ-ಮಾನ್ಯರಮುಂದೆ ಅಖಂಡಚರ್ಚೆಗೆ ನಾವಿದನ್ನು ಇಡುತ್ತಿದ್ದೇವೆ!
ಫಲಶೃತಿಯು-ಅಪಶೃತಿಯೇ-ಅಪ್ರತಿಮಶೃತಿಯೇ ಎಂಬುದನ್ನು ಕಣ್ಣುಗಳನ್ನು ಸ್ಪಷ್ಟವಾಗಿ ತೆರೆದುಕೊಂದು ನೋಡಲು-ನೋಡಿಸಲು ಕಾಯೋಣ
ತಾಳಿದವನು-ಬಾಳಿಯ್ತಾನು,
ತಿಳಿದವನು-ಬೆಳ್ಳಿಯಾದಾನು!
"ಓಂ ಅನ್ನಂ ತದ್ವ್ರತಂ"

- ಆರ್.ಎಂ.ಶರ್ಮ,ಮಂಗಳೂರು.

0 comments:

Post a Comment