ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮೂಡುಬಿದಿರೆ: ಮಕ್ಕಳ ಸಾಹಿತ್ಯ ಸಂಗಮ (ರಿ) ಮಂಗಳೂರು ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಮಕ್ಕಳ ಸಾಹಿತ್ಯ ಸಮ್ಮೇಳನ 'ಮಕ್ಕಳ ಧ್ವನಿ-2012' ಇದರ ಅಧ್ಯಕ್ಫರಾಗಿ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಮಹಾಲಕ್ಷ್ಮಿ ಉಪ್ಪಿನಕುದ್ರು ಆಯ್ಕೆಯಾಗಿದ್ದಾರೆ. ಸಮ್ಮೇಳನವು ಸಪ್ಟಂಬರ 1 ಮತ್ತು 2 ರಂದು ವಿದ್ಯಾಗಿರಿಯ ಶಿವರಾಮಕಾರಂತ ವೇದಿಕೆಯಲ್ಲಿ ನಡೆಯಲಿದೆ.

ಸಮ್ಮೇಳನದಲ್ಲಿ ನಡೆಯಲಿರುವ ಕಥಾಗೋಷ್ಠಿಯ ಅಧ್ಯಕ್ಷರಾಗಿ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತೃಪ್ತಿ ಕೆ.ಆರ್ ಮತ್ತು ಕವಿಗೋಷ್ಠಿ ಅಧ್ಯಕ್ಷರಾಗಿ ಕಟೀಲು ಶ್ರೀದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅನುಜ್ಞಾ ಅಯ್ಕೆಯಾಗಿದ್ದಾರೆ.

ವಿದ್ಯಾಗಿರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ, ಆಶುಭಾಷಣ ಹಾಗೂ ಸಂದರ್ಶನದ ಮೂಲಕ ನಡೆಯಿತು. ಹಿರಿಯ ಸಾಹಿತಿ ಉಮೇಶರಾವ್ ಎಕ್ಕಾರು, ವಿ.ಬಿ ಕುಳಮರ್ವ ಮತ್ತು ವಿಶಾಲಾಕ್ಷಿ ಮಂಗಳೂರು ಇವರು ಮೌಲ್ಯಮಾಪಕರಾಗಿ ಭಾಗವಹಿಸಿದರು. ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಪ್ರೊ. ಎ. ಪಿ. ರಾವ್, ಕಾರ್ಯದರ್ಶಿ ಶ್ರೀನಿವಾಸರಾವ್, ಸಾವಿತ್ರಿ.ಎಸ್.ರಾವ್, ಡಾ.ಧನಂಜಯ ಕುಂಬ್ಳೆ, ಅಧ್ಯಾಪಕ ಶ್ರೀನಿಧಿ ಮೊದಲಾದವರು ಉಪಸ್ಥಿತರಿದ್ದರು.

ಡಾ. ಮೋಹನ್ ಆಳ್ವ ಅಭಿನಂದನೆ: ಸಮ್ಮೇಳನಾಧಕ್ಷೆಯಾಗಿ ಆಯ್ಕೆಗೊಂಡ ಮಹಾಲಕ್ಷ್ಮಿ ಉಪ್ಪಿನಕುದ್ರು ಇವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷರಾದ ಡಾ.ಎಂ. ಮೋಹನ್ ಆಳ್ವ ಇವರು ಅಭಿನಂದಿಸಿದ್ದಾರೆ.

ಮಹಾಲಕ್ಷ್ಮಿ ಉಪ್ಪಿನಕುದ್ರು: ಆಳ್ವಾಸ್ ಕನ್ನಡ ಮಾಧ್ಯಮ ಫ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕುಂದಾಪುರ ಉಪ್ಪಿನಕುದ್ರುವಿನ ಮುರುಗೇಶ ಮಯ್ಯ ಮತ್ತು ವಿಮಲ ಇವರ ಪುತ್ರಿ. ಸಾಹಿತ್ಯರಚನೆ ನಾಟಕ, ನೃತ್ಯ ಮೊದಲಾದ ಸ್ಯಜನಶೀಲ ಕ್ಷೇತ್ರಗಳಲ್ಲಿ ಸದಾ ಮುಂದು. 'ಚಿಂತನ ಮಂಥನ' ಎಂಬ ವೈಚಾರಿಕ ಬರಹಗಳ ಸಂಕಲನ ಪ್ರಕಟಗೊಂಡಿದೆ. ಪ್ರಾಥಮಿಕ ಹಂತದಿಂದಲೇ ಕಥೆ ಹೇಳುವುದು, ಕಂಠಪಾಠ, ಭಾಷಣ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳು ಬಂದಿದೆ. ಪ್ರೌಢಶಾಲಾ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಭಾಷಣ, ಆಶುಭಾಷಣ, ಚರ್ಚಾ ಸ್ವರ್ಧೆಗಳಲ್ಲಿ ಜಿಲ್ಲಾಮಟ್ಟದಲ್ಲಿ ಬಹುಮಾನಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾಳೆ.

0 comments:

Post a Comment