ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಿರು ತೆರೆ
'ಜೀ ಕನ್ನಡ'ದ ಧಾರಾವಾಹಿ ಚಿ| ಸೌ| ಸಾವಿತ್ರಿಯ ಹೊಸ ಸರಣಿಯನ್ನು ಜುಲೈ 29ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಉದ್ಘಾಟಿಸುತ್ತಿದ್ದಾರೆ.545 ಸಂಚಿಕೆಗಳನ್ನು ಪೂರೈಸಿರೋ ಈ ಧಾರಾವಾಹಿ, ಅನೇಕ ಕಾರಣಗಳಿಂದಾಗಿ ಕರ್ನಾಟಕದ ಮನೆಮಾತು. ನುರಿತ ಜನಪ್ರಿಯ ಕಲಾವಿದರು, ಲಲಿತ್ಮಹಲ್ನಲ್ಲಿ ನಡೆದ ಸಾವಿತ್ರಿ ಮದುವೆ, ಕನ್ನಡ ಕಿರುತೆರೆಯಲ್ಲೇ ಅತಿ ಹೆಚ್ಚು ಸಂಖ್ಯೆಯಲ್ಲಿ ಸ್ಪೆಷಲ್ ದಿನಗಳಿಗೆ ಸ್ಪೆಷಲ್ ಎಪಿಸೋಡ್ಗಳು, ಮೈಸೂರಿನಲ್ಲಿ ನಡೆದ 'ಸಾವಿತ್ರಿ ಜತೆ ಮಾತುಕತೆ', ಬೆಂಗಳೂರಿನ ಹಲವಾರು ಅಂಗಡಿಗಳಲ್ಲಿ ಮಾರಾಟವಾಗತೊಡಗಿದ 'ಸಾವಿತ್ರಿ ಸೀರೆ', 'ಜೀ ಕುಟುಂಬ' ಪ್ರಶಸ್ತಿ ಪ್ರದಾನದಲ್ಲಿ ಅತಿ ಹೆಚ್ಚು ಪ್ರಶಸ್ತಿಗಳು.. ಹೀಗೆ ಚಿ| ಸೌ| ಸಾವಿತ್ರಿ ಯಶೋಗಾಥೆ ದೊಡ್ಡದು ಎನ್ನುತ್ತಾರೆ 'ಜೀ ವಾಹಿನಿ'ಯ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಗೌತಮ್ ಮಾಚಯ್ಯ.


ಈಗ ಹೊಸ ಕತೆ, ಹೊಸ ಕಲಾವಿದರೊಂದಿಗೆ 'ಚಿ.ಸೌ.ಸಾವಿತ್ರಿ'ಯ ಎರಡನೇ ಸರಣಿ ಆರಂಭವಾಗುತ್ತಿದೆ ಪದ್ಮಾವಾಸಂತಿ, ಅನಂತವೇಲು, ಮೈಸೂರು ಬಾಲು, ಉಷಾ ಭಂಡಾರಿ, ನಂದಿನಿಮೂರ್ತಿ, ಸುನಿಲ್ ಸಾಗರ್ ಮೊದಲಾದವರ ತಾರಾಗಣವಿದೆ. ಇಬ್ಬರು ತಂಗಿಯರೊಂದಿಗೆ, ಅಮ್ಮನ ಜತೆ ತಾತನ ಮನೆಯಲ್ಲಿರೋ ಸಾವಿತ್ರಿ, ಎಲ್ಲೋ ಇರುವ ತನಗೆ ಅನುರೂಪನಾದ ಗಂಡನನ್ನು, ಎಲ್ಲೋ ಇರುವ ಅಪ್ಪನನ್ನೂ ಹೇಗೆ ಪಡೆದುಕೊಳ್ಳುತ್ತಾಳೆ ಅನ್ನೋದೇ ಇಲ್ಲಿನ ಕತೆ.


ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ, ಸಾವಿತ್ರಿ-ದೇವಿ-ರಾಜಕುಮಾರಿ ಧಾರಾವಾಹಿಗಳ ಕಲಾವಿದರ ಭರಪೂರ ಮನೋರಂಜನೆಯೊಂದಿಗೆ, ಹೊಸ ಸಾವಿತ್ರಿಯನ್ನು ಪ್ರೇಕ್ಷಕರಿಗೆ ದರ್ಶನ್ ಪರಿಚಯಿಸಿದರು. ಆ ವಿಶೇಷ ಕಾರ್ಯಕ್ರಮ 'ಸಾವಿತ್ರಿಗೆ ದರ್ಶನ ಸೌಭಾಗ್ಯ' ಜುಲೈ 29ರಂದು ಬೆಳಗ್ಗೆ 10ಕ್ಕೆ 'ಜೀ ಕನ್ನಡ'ದಲ್ಲಿ ಪ್ರಸಾರವಾಗಲಿದೆ. ಜುಲೈ 30 ರಿಂದ ಸೋಮವಾರ ದಿಂದ ಶುಕ್ರವಾರದ ವರೆಗೆ ಸಂಜೆ 7 ಗಂಟೆಗೆ 'ಹೊಸ ಚಿ|ಸೌ| ಸಾವಿತ್ರಿ' ಮೂಡಿಬರಲಿದೆ.

0 comments:

Post a Comment