ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:10 PM

ಗುಬ್ಬಚ್ಚಿ

Posted by ekanasu

ಸಾಹಿತ್ಯ
ಹಾರಲೆತ್ನಿಸುವ ಎಳೆಯ ಗುಬ್ಬಚ್ಚಿ
ತಾಯ ರೆಕ್ಕೆಯ ನೆರಳು
ಎಷ್ಟುಕಾಲ...?



ಮರವನಪ್ಪಿದ ಬಳ್ಳಿ
ತಂಪು ನೀಡುವ ಕೊಳದ
ಆಸರೆಯು ನಿನಗೆಷ್ಟು
ದಿನದ ವರೆಗೆ

ಮಿಣುಕು ಹುಳ ರಾತ್ರಿಯಲಿ
ರಾತ್ರಿರಾಣಿಯ ಘಮಲು
ಬೆಚ್ಚನೆಯ ಗೂಡಲ್ಲಿ
ನಿದಿರೆಯಿಂದೆಚ್ಚೆತ್ತು

ಕುಟುಕು ಜೀವವ ಹಿಡಿದು
ಹಾರಲೇ ಬೇಕಲ್ಲ
ಎಳೆಯ ಹಕ್ಕಿ...?

- ಜಯಶ್ರೀ ಬಿ. ಕದ್ರಿ, ಮಂಗಳೂರು.

0 comments:

Post a Comment