ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ನಾವೀಗ ಓಂದು ಉತ್ತಮವಾದ ಚಚೆ೯ಗೆ ಮುಂದಾಗಿದ್ದೇವೆ! ಅದು ಮೀನು ವ್ಯವಹಾರ ಅಂದರೆ ಸಾಗರಗಳಲ್ಲಿ ಮೀನುಗಾರಿಕೆಗೆ ಸಂಬಂಧಪಟ್ಟದ್ದು!
ಭಾರತದ ದಕ್ಷಿಣತುದಿಯಿಂದ ಉತ್ತರಾಭಿಮುಖವಾಗಿ ಖಂಡಿತವಾಗಿಯೂ-ಉತ್ತರದಲ್ಲಿ ಅಲ್ಲ-ಕಾರಣ ಅಲ್ಲಿ ಸಮುದ್ರವಿಲ್ಲ ಪಶ್ಚಿಮದ ಸಾಗರದ ತೀರ,ಪೂವ೯ದ ಸಾಗರದ ತೀರ ಇಲ್ಲಿ ವ್ಯವಸಾಯ,ವ್ಯವಹಾರ ಜತೆಗೆ ದುವ೯ವ್ಯವಹಾರಕ್ಕಾಗಿಯೂ ಮೀನುಗಾರಿಕೆ ನಡೆಯುತ್ತಿರುತ್ತದೆ.
ರೋಚಕವೋ,ಶೋಕವೋ,ಕುಹಕವೋ, ಒಟ್ಟಿನಲ್ಲಿ- ಸಮುದ್ರಕ್ಕೆ ಇಳಿಯುವುದು-ಗಡಿದಾಟುವುದು-ಗುಡಿದಾಟುವುದು-ತಮ್ಮದೇ ಗುರಿಗಾಗಿ-ಗರಿಗಾಗಿ-
ಸೆರೆ-ಸೆರೆ ಬಿಡಿಸಲು ಮೊರೆ,ಕಾರಣಗಳ ಮರೆ,ದೇಶಕ್ಕೆ-ಮನೆಗೆ-ಮಂದಿಗೆ-ಮಂಡೆಗೆ ಹೊರೆ!
ಇದು ಒಂದು ಮುಖ...


ಎರಡನೆಯ ಮುಖ-ಅನ್ಯದೊರೆಗೆ-ದೊರೆಸಾನಿಗೆ ಸರಕಾರದ ಅಹವಾಲು-ಅಳಲು ನಮ್ಮ ದೇಶೀಯ ಮೀನುಗಾರರನ್ನು ಬಿಡಿರಿ-ಬೇಡಿಹಾಕದಿರಿ ಎಂತ!
ಇಲ್ಲಿ ನೋಡಿ ಸ್ವಾರಸ್ಯ-ನಿಖರವಾಗಿ-ಪುರಾಣಯುಗದ-ದಶರಥ,ಅಜು೯ನ ಇತ್ಯಾದಿ ವೀರರು-ಮೇಧಾವಿಗಳು ಕಣ್ಣಿನ ಅಳತೆ, ಕಿವಿಯ ಅಳತೆ ಅವಲಂಬಿಸಿ ಕರಾರುವಾಕ್ಕಾಗಿ ಗುರಿ ಮುಟ್ಟುವುದು-ಮೆಟ್ಟುವುದು-ತಟ್ಟುವುದು-ಮಾಡಿದರು-ಜಯಿಸಿದರು.
ಈಗ ಅತಿ ನಿಖರವಾಗಿ ನಿದಿ೯ಷ್ಟ ಸ್ಥಳ-ಗುರಿ-ಧ್ಯೇಯ-ಉದ್ದೇಶ ಏನೆ ಆಗಿರವಲ್ಲದು ಯಾಕೆ ಅವನ್ನು ಚಕಾರವೆತ್ತದೆ-ನ್ಯೂನತೆಗೆ ಹೊರತಾಗಿ ಸಾಧಿಸಲು ವೈಜ್ಞಾನಿಕವಾಗಿ ಎಲ್ಲ ಸವಲತ್ತುಗಳೂ ಲಭ್ಯವಿವೆ!

ನೀರಿನ ಮೇಲೆ,ಹಿಮದಮೇಲೆ,ಮರಳಿನಮೇಲೆ ಮೀರಿ ಕೇಳಿದರೆ ಬೆಂಕಿಯಮೇಲೂ,ಗಾಳಿಯ ಮೇಲೂ ಗೆರೆ-ಗುರಿ ಸಾಧಿಸಲು ಬುದ್ಧಿ,ಉಪಕರಣ-ಹಣ ಎಲ್ಲ ಇದೆ!
ಹೀಗಿದ್ದರೂ ವಷ೯ದುದ್ದಕ್ಕೂ ದುಃಖ, ದುಮ್ಮಾನ,ಅನುಮಾನ,ಅವಮಾನ,ಅವಸಾನ ಇವೇ ಪಾಠ-ಪರಿಪಾಟ!
ಮನಸ್ಸಿದ್ದರೆ-ಮಾಗ೯.
ಮಗ್ಗಲು ಮುರಿಯಲು-ಮುರಿಯದಿರಲೂ ಮಾಗ೯ ಇವೇನೂ ಅಪುರೂಪವಲ್ಲ-ಅಸಾಧ್ಯವಲ್ಲ!
ಹಾಗಾದರೆ ಮತ್ತೇಕೆ ಗಡಿದಾಟುವ ಹಠ?

ಯಾರ ಪ್ರೀತಿ-ಯಾರ ಭೀತಿ?
ಆಗದು ಅಲ್ಲ!
ಆಗಬಾರದು ಅಷ್ಟೇ!
ಭರತ ಉದ್ದಗಲಕ್ಕೂ ಚಲನವಲನ-ಅಥಾ೯ತ್ ನಿದಿ೯ಷ್ಟ ಸ್ಥಳ ನಿಗದಿಗೆ-ಮೈಕ್ರೊಚಿಪ್ ಎಂಬ ವೈಞ್ನಾನಿಕ ಪಾಲಕನೆ-ಜಿ.ಪಿ.ಎಸ್ ಎಂಬ ಅಭಿದಾನದಿಂದ ಪ್ರಖ್ಹ್ಯಾತವಿದೆ!
ಹುಲಿಗೆ,ಕಾಳಿಂಗಸಪ೯ಕ್ಕೆ,ಮರಳು ಸಾಗಿಸುವ ವಾಹನಗಳಿಗೆ,ಮುಂದುವರೆದ ರಾಷ್ಟ್ರಗಳಲ್ಲಿ ಸಮಾಜ ಘಾತುಕರಿಗೆ ಮೈಕ್ರೊಚಿಪ್ ನ ಒಡವೆ -ಒಡನಾಟಾ ಅಯಿತು-ಆಗುತ್ತಿದೆ-ಆಗುತ್ತದೆ! ಕಾರಣ ಹತೋಟಿಯೇ ಪರಮ ಲಕ್ಷ್ಯವು!
ಇಲ್ಲಿ ಮೀನು ಹಿಡಿಯುವ ಸೋಗಿನಲ್ಲಿ-ಸೊಗಸಾಗಿ ಮೋಸಮಾಡುವ ಮಾಟ-ಆಟ-ರಂಪಾಟ!
ಏಕೆ ಅಪರೂಪದ ಸಂಪನ್ಮೂಲಗಳಾದ-ಜನಬಲ,ಹಣಬಲ,ಅಧಿಕಾರಬಲ ಕೊನೆಗೆ ಹಿತಚಿಂತಕರ ಒಲವಿಗಾಗಿ,ಬಲವಂತಕ್ಕಾಗಿ ಕ್ಷಮೆ,ಸಂಧಾನ,ಸಂವಿಧಾನ ಎಂತೆಲ್ಲ ಗೊಣಗಾಟ-ಗಲಾಟೆ!

ಮೀನುಗಾರಿಕೆಯ ದೋಣಿ-ಸಾಧನ ಇವಕ್ಕೆ ಮೈಕ್ರೊಚಿಪ್ ಅಳವಡಿಸಿ ಗಡಿದಾಟಿದರೆ-ಸಂಕೇತ-ಭಯದ-ಕಾನೂನುಪಾಲನೆಯ ಸಂದೇಶ-ನಿದೇ೯ಶ ನೀಡುವಂತಾದರೆ ಸವ೯ಹಿತವಲ್ಲದೆ-ರಕ್ತಪಾತವೇ-ಪಾತಕವೇ-ಸೂತಕವೇ?
ಮತ್ತೂ ಮುಂದಕ್ಕೆ ಹೋಗಿ, ಒಂದೊಮ್ಮೆ ಅಳವಡಿಸಿದ ಮೈಕ್ರೊಚಿಪ್ ಕೆಲಸಮಾಡದೇ (ಸಂಭಾವ್ಯದ ಸಂಶಯಕ್ಕೆ) ಸ್ಥಗಿತವಾದರೆ, ಮಿನು ಹಿಡಿಯುವ ಜನ ಅನ್ಯರೀತಿಯಲ್ಲಿ ಯಥಾವತ್ತದ-ಎಡವಟ್ಟಿಲ್ಲದ ಸೂಚನೆಗಾಗಿ ಸಂಪಕಿ೯ಸಲು ಸಟೆಲೈಟ್ ಮೊಬೈಲ್ ಟೆಲಿಫೋನ್ಗಳನ್ನು ಪಡೆದು ವ್ಯವಸಾಯಕ್ಕೆ ಇಳಿಯಬಾರದು?

ಇಂತಹ ಉಪಕರಣಗಳನ್ನು-ಆ ಜನಕ್ಕೆ-ಆಡಳಿತದ ಸರಕಾರವೇ-ಅಗ್ಗದ ದರದಲ್ಲಿ-ಸೀಮೀಣ್ಣೆ,ದೀಸಲ್ ಹೀಗೆಲ್ಲ ಸರಕಾರಿ ಸವಲತ್ತುಗಳನ್ನು ನೀಡುವಾಗ ಇದೇಕೆ ಆಗಬಾರದು?
ಇಂತಹ ವ್ಯವಸ್ಥೆನಡೆಯುವ-ನಡೆಯಬಹುದಾದ ಅನಾಹುತ-ಅಪಘಾತಗಳನ್ನು ದೂರಮಾಡವೇನು?
ಹಣದ ಬಾಬಿಗೆ ಬಂದರೆ ಸೆರೆಯಿಂದ ಬಿಡಿಸುವ ಬಾಬಿಗೆ ಆಗುವ ಖಚಿ೯ಗೆ ಇದನ್ನು ಹೋಲಿಸಿ-ತಾಳೆ ಹಾಕಿ ನೋಡಿದರೆ ಸತ್ಯವು ತಿಳಿಯದೇನು?
ಬುದ್ಧಿ-ಬದ್ಧತೆ-ವ್ಯಗ್ರತೆ-ವ್ಯಾಘ್ರತೆಯನ್ನು ಹೊಡೆದೋಡಿಸದೇನು?

ಮೀನುಗಾರರು-ಅವರ ಹಿತಚಿಂತಕರು,ಅವರ ನೆವ ದಲ್ಲಿ ಶಾಂತಿ ಕದಡುವ-ಕೆಡುವುವ ಶಕ್ತಿಗಳು ಹೀಗೆಲ್ಲ ಬಾಲ ಬಡುಕರು-ಹಿಂಬಾಲಕರು-ಮುಂದಾಳುಗಳು- ಮಂದರಾಗದೇ-ಮಂದೆಯಲ್ಲಿಸಾಗದೇ ಮಥಿಸಿ ತೀಮಾ೯ನಕ್ಕೆ ಬಂದು ಅವನ್ನೇ ಆಡಳಿತವು ಒಪ್ಪಿ,ತಪ್ಪಿಲ್ಲದಂತಾದರೆ ಜನಹಿತ-ಜನನಿ ಜನಕ ಹಿತ-ಕನಕಹಿತ ಅಲ್ಲವೇನು?
ಒಳ್ಳೆಯದಕ್ಕೆ ಒತ್ತು,ಒಟ್ಟು, ಒಗ್ಗಟ್ಟು ಇದೇ ಈಗ ಬೇಕಿರುವುದು!
ಅದನ್ನೇ ಈಗ ಮಾಡಬೇಕಿರುವುದು!
" ಓಂ ಮತ್ಸ್ಯಾವತಾರಿಣೇ ನಮಃ"

ಆರ್.ಎಂ.ಶಮ೯,ಮಂಗಳೂರು.

0 comments:

Post a Comment