ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೈನಂದಿನ ಕಾದಂಬರಿ : ಭಾಗ - 6

ಬ್ಯಾಂಕ್ಗೆ ಒಂದು ಲೆಟರ್ ತಯಾರು ಮಾಡಿ. ಎರಡು ಸಿಗ್ನೇಚರ್ಗಳು ತುಂಬಾ ಸೇಫ್ ಅನ್ಸುತ್ತೆ ಅವನ ಮಾತುಗಳು ಅರ್ಥವಾಗದೆ ತಲೆಯೆತ್ತಿದಳು.
ಆಡಿಟರ್ಸ್ ಬೇರೆ ಅಬ್ಚೆಕ್ಷನ್ ಹಾಕಿದ್ದಾರೆ. ಸಂಸ್ಥೆ ಬೆಳೆಯುತ್ತಿರುವಾಗ ಈ ರೀತಿ ಮಾಡೋದು ಒಳ್ಳೆಯದಲ್ವಾ?ಚೆಕ್ ಸಿಗ್ನೇಚರಿಯಲ್ಲಿ ನಿಮ್ಮದೂ ಇರಲಿ.ನೋ... ಬೇಡಾನ್ಸುತ್ತೆ ತಲೆ ತಗ್ಗಿಸಿಯೇ ನಿಂತಿದ್ದಳು.ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ತಂತ್ರವೇ? ನಿಮ್ಮ ಮೇಲೆ ಸಂಪೂರ್ಣ ಭರವಸೆಯಿದೆ. ಸುಲೇಖಳನ್ನು ಕರೆದು ಡಿಕ್ಟೇಟ್ ಮಾಡಿ. ಇವತ್ತೆ ಲೆಟರ್ ಬ್ಯಾಂಕಿಗೆ ಹೋಗ್ಲಿ.


ಒಪ್ಪಿಗೆಯಿತ್ತು ಹೊರಗೆ ಬರುವಾಗ ಬೆವತು ಹೋಗಿದ್ದಳು. `ಅರವಿಂದ'ನೆನ್ನುವ ಹಿಮದ ಪರದೆಯಂತಹ ನೆನಪು ಆವರಿಸಿಕೊಂಡ ಪರಿ, ಕೆಲಸದ ಕಡೆಗೆ ಗಮನವಿಟ್ಟಾಗ ಆ ವಿಷಯದ ಬಗ್ಗೆ ತಲೆ ಕೆಡಿಸಿಕೊಂಡಿರುವುದು ಕ್ಷುಲಕವೆನಿಸಿತು. ಯಾರೋ ಕುಚೋದ್ಯಕ್ಕೆ ಕಳುಹಿಸಿದ ಇ-ಮೇಲ್ ಅನಿಸಿತು. ಆವತ್ತೇ ಅದು ಡಿಲೀಟ್ ಆಗಿ ಹೋದರೂ ಮನಸಿನಲ್ಲೇಕೆ ಅಳಿಯದಂತೆ ಕುಳಿತಿದೆ ಅನಿಸದಿರಲಿಲ್ಲ.

***
ತುಂತುರು ಮಳೆ ನಿಂತು ಅದೆಷ್ಟೊ ಹೊತ್ತಾಗಿತ್ತು. ಭಾಮಿನಿಯವರು ಬಟ್ಟೆ ತಂದು ಮುಂದೆ ಹಿಡಿದಾಗ ಅವರತ್ತ ತಿರುಗಿಯೂ ನೋಡದೆ ಕೋಣೆ ಸೇರಿಕೊಂಡ ಮನಸ್ವಿತಾಳಿಗೆ ಅತ್ತು ಬಿಡಬೇಕೆನಿಸಿತು.
ಇನ್ನೂ ಹಳೆಯ ಕಾಲದವರಂತೆ ಸಂಪ್ರದಾಯ ಆಚರಣೆಗಳನ್ನು ಪಾಲಿಸಿಕೊಂಡು ಬರುತ್ತಿರುವ ತನ್ನ ಮನೆಯವರ ಮೇಲೆ ತಿರಸ್ಕಾರ ಮೂಡುತ್ತಿತ್ತು. ಅಂಗಡಿಯಿಂದ ಆದಾಯವಿಲ್ಲವೆಂದು ತಿಳಿದ ನಂತರವೂ ಅನಗತ್ಯ ಬಾಡಿಗೆ ಕೊಟ್ಟು ಅಲ್ಲಿ ಸಮಯ ಹಾಳು ಮಾಡುವುದನ್ನು ಒಪ್ಪಳು. ಅದರ ಬದಲಿಗೆ ಮನೆಯ ಸುತ್ತ ಮುತ್ತ ಇರುವ ನಾಲ್ಕೆದು ಗಿಡಗಳನ್ನು ಆರೈಕೆ ಮಾಡಿದರೆ ಪ್ರಯೋಜನವಾದರೂ ಆದೀತು ಅನ್ನುವ ಆಸೆ.

ಶ್ರೀನಿವಾಸರು ಅದಕ್ಕೆ ಒಪ್ಪರು. ಅಂಗಡಿಯಲ್ಲಿ ಕುಳಿತರೆ ನಾಲ್ಕೈದು ಜನ ಬಂದು ಸುಖ ದುಃಖ ಹೇಳಿಕೊಂಡು ದಿನ ಕಳೆಯಬಹುದೆನ್ನುವ ವಾದ ಅವರದ್ದು. ಅಷ್ಟಕ್ಕೆ ಮಾತು ನಿಲ್ಲಿಸಿ ಬಿಟ್ಟಿದ್ದಳು.ಮನೆಯಲ್ಲಿ ಎಲ್ಲಾ ಅನುಕೂಲತೆಗಳಿದ್ದೂ ಇನ್ನು ಕಟ್ಟಿಗೆಯ ಒಲೆಯ ಮುಂದೆ ಕುಳಿತು ಹೊಗೆ ನುಂಗುತ್ತಾ ಬದುಕುವುದನ್ನು ನೆಚ್ಚಿಕೊಂಡ ಭಾಮಿನಿಯವರೂ ಬದಲಾಗರು. ಇದ್ದ ಮನೆಯನ್ನು ಮಾರಿ ಸಿಟಿಯಲ್ಲಿ ಸೆಟಲ್ ಆಗುವುದನ್ನಂತೂ ಒಪ್ಪುವುದಿಲ್ಲ.

ಈ ಮನೆ ಉಳಿಸಿಕೊಳ್ಳುವುದಕ್ಕೆ ಎಷ್ಟು ಹೋರಾಡಿದ್ದೀವಿಂತ ನಿನಗೆ ಗೊತ್ತಿಲ್ಲ ತಮ್ಮದೇ ವಾದ ಮುಂದಿಟ್ಟಾಗ ಪಾಸ್ಟ್ ಈಸ್ ದ ಪಾಸ್ಟ್. ಈಗ ಒಳ್ಳೆಯ ಹುದ್ದೆಯಿದೆ. ತಂದೆ ತಾಯಿಯರನ್ನು ಸಾಕುವ ತಾಕತ್ತಿದೆ. ಆದರೆ ಬದಲಾಗಬಾರದೇಕೆ? ಅನಿಸಿತು. ಆ ಯೋಚನೆಯನ್ನು ಕೈ ಬಿಟ್ಟು ಅವರೊಂದಿಗೆ ಹೊಂದಿಕೊಂಡು ಹೋಗುವಾಗ ಸಂಬಂಧವೊಂದು ಹುಡುಕಿಕೊಂಡು ಬಂತು.

ಹುಡುಗನ ಕಡೆಯವರು ತುಂಬಾ ಶ್ರೀಮಂತರು. ನೀವೇನೂ ಖರ್ಚು ಮಾಡ್ಬೇಕಾಗಿಲ್ಲ. ಮಗಳನ್ನು ಧಾರೆ ಎರೆದು ಕೊಟ್ರೆ ಸಾಕು. ನೀವು ಆಲೋಚಿಸಬೇಕೂಂತನೂ ಇಲ್ಲ ಗಿಳಿಪಾಠದಂತೆ ದಲ್ಲಾಳಿ ನರಸಿಂಹ ಬಂದು ಹೇಳಿದಾಗ ಒಳಗೆ ಕುಳಿತಿದ್ದ ಮನಸ್ವಿತಾಳಿಗೆ ಕುದಿದು ಹೋಯಿತು. ಇದೇನು ಇನ್ನೂ ಹತ್ತೊಂಬನೆ ಶತಮಾನದಲ್ಲಿರುವುದೆ? ಈ ರೀತಿಯ ಸಂಬಂಧಗಳು ಬೇಡವೇ ಬೇಡ ಅನ್ನುವ ಹೊತ್ತಿಗೆ ಅವರುಗಳು ಮನೆಗೆ ಬಂದಿದ್ದರು.

ಮನೆಯೊಳಗಿನ ಮನಸ್ಸುಗಳನ್ನು ಅಳೆಯುವ ಬದಲು ಹೊಗೆ ಹಿಡಿದು, ಜೇಡರ ಬಲೆ ತುಂಬಿದ ಮನೆಯನ್ನು ಅಳೆವ ಅವರ ಶ್ರೀಮಂತಿಕೆ ಸಾಧನ, ಮನುಷ್ಯನಿಗೆ ಇಷ್ಟೊಂದು ಬಡತನ ಇರಬಾರದು ಅನ್ನುವ ಕನಿಕರದ ಮಾತನ್ನು ಕೇಳಿದ್ದೇ ಕಟ್ಟಿ ಕೊಂಡಿದ್ದ ಆಶಾಗೋಪುರವೇ ಮುರಿದು ಬಿದ್ದಂತಾಗಿತ್ತು.

- ಅನು ಬೆಳ್ಳೆ.


ನಾಳೆಗೆ...

0 comments:

Post a Comment