ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ದೈನಂದಿನ ಕಾದಂಬರಿ : ಭಾಗ - 8


ಮಮ್ಮಿ, ಬೇಗ ಬಂದು ಬಿಟ್ಟೆ ಮನಸ್ಸಲ್ಲಿದ್ದುದನ್ನು ಓದಿದವನಂತೆ ಮಗನ ಬಾಯಿಯಿಂದ ಮಾತುಗಳನ್ನು ಕೇಳಿದಾಗ ಮುಗುಳ್ನಕ್ಕರು.
ಹೆಂಡತಿಯನ್ನು ಮರ್ತು ಬಿಟ್ಯಾ ಅಂದರು.ಕ್ಷಣ ಹೊತ್ತು ಅವಕ್ಕಾಗಿ ನಿಂತು ಅವರತ್ತಲೇ ನೋಡಿದ. ಇಂದ್ರಸೇನ್ ಹೊರಗೆ ಬಂದವರಿಗೂ ಅವನ ಆತಂಕ ಗೊಂದಲ ಸೃಷ್ಟಿಸಿತು.ಯಾಕೆ ಹಾಗೆ ನಿಂತು ಬಿಟ್ಯಾ? ಪ್ರಶ್ನಿಸಿದರು. ಅವನಿಗೆ ಅರಗಿಸಿಕೊಳ್ಳುವುದಕ್ಕೆ ಕೆಲ ನಿಮಿಷಗಳೇ ಹಿಡಿದವು.


ಮಮ್ಮಿ ಯಾರ ಬಗ್ಗೇನೊ ಕೇಳಿದ್ಲು... ವಿಚಿತ್ರ ಅನಿಸಿತು. ಯಾವತ್ತೂ ನಿಮ್ಮನ್ನು ಮೀರಿ ಹೋಗೋನಲ್ಲ. ಹಾಗಿರುವಾಗ ಈ ಹೆಂಡತಿ ಎಲ್ಲಿಂದ ಬರ್ಬೇಕು? ಅಷ್ಟು ಧೈರ್ಯವಾಗಿ ಹೇಳುವಾಗಲೂ ಎದುರಿಗೆ ಗೋಚರಿಸಿದ್ದು ಮನಸ್ವಿತಾಳ ಬಿಂಬ. ಅವಳನ್ನೇಕೆ ನೆನಪಿಸಿಕೊಂಡೆ? ಅಹಂಕಾರ, ಗರ್ವಗಳಿಲ್ಲದ ಸಾಮಾನ್ಯ ಹುಡುಗಿ ಅನಿಸಿತು.


ಮತ್ತಿನ್ನೇನು, ರಾತ್ರಿ ಹತ್ತು ಹನ್ನೊಂದು ಗಂಟೆಯಾದ್ರೂ ನಿನ್ನ ಕಾರು ಆಫೀಸಿನಿಂದ ಹೊರಡೋದಿಲ್ಲ. ಹಾಗಿರುವಾಗ ಈಗ ಏಳು ಗಂಟೆನೂ ಆಗಿಲ್ಲ ವಾಚ್ನತ್ತ ನೋಡಿಕೊಂಡ ಇಂದ್ರಸೇನ್ ನುಡಿದಾಗ ಪರಿಸ್ಥಿಯ ಅರಿವಾಗಿತ್ತು. ನಕ್ಕನಷ್ಟೆ. ವಾಣಿಶ್ರೀ ಮಗನ ಬೆನ್ನ ಮೇಲೆ ಮುದ್ದಿನಿಂದ ಗುದ್ದಿದರು.
ಅಷ್ಟರಲ್ಲಿಯೇ ಅಡುಗೆಯ ರವಿಯಣ್ಣ ತಿಂಡಿ ತಂದು ಊಟದ ಮೇಜಿನ ಮೇಲೆ ಜೋಡಿಸಿದಾಗ ಇಂದ್ರಸೇನ್ ಮಾತಿಲ್ಲದೆ ಬಂದು ಕುಳಿತರು. ನಿಖಿಲ್ ಕಟ್ಟಾ ಸಂಪ್ರದಾಯ, ರೀತಿ ರಿವಾಜುಗಳನ್ನು ಪಾಲಿಸುವವರಂತೆ ಪ್ರತಿಯೊಂದನ್ನೂ ಶಿಸ್ತಿನಿಂದಲೇ ಮಾಡಿಕೊಂಡು ಬರುತ್ತಿದ್ದ. ಇಂದ್ರಸೇನ್ ಮಾತ್ರವಲ್ಲ ವಾಣಿಶ್ರೀಯವರು ಕೆಲವೊಂದನ್ನು ಲೈಕ್ ಮಾಡರು.

ನೀನೆಲ್ಲೊ ಆರ್ತೊಡೆಕ್ಸ್ ಪ್ಯಾಮಿಲಿಯಲ್ಲಿ ಹುಟ್ಟಬೇಕಿತ್ತು. ತಪ್ಪಿ ಇಲ್ಲಿ ಹುಟ್ಟಿದ್ದೀಯಾ. ಎಲ್ರೂ ಟೇಬಲ್ ಮುಂದೆ ಕುಳಿತಿರುವಾಗ ನೀನು ಬಂದು ಸೇರ್ಬಾದ. ಬಟ್ಟೆಗಳನ್ನು ಆಮೇಲೆ ಬದಲಾಯಿಸ್ಬಾರ್ದ ಪ್ರೀತಿಯ ಆಕ್ಷೇಪವಿತ್ತು.ಮುಖವೆಲ್ಲ ಬೆವರಿ ದಪ್ಪ ದಪ್ಪಗಾಗಿತ್ತು. ತೊಳ್ಕೊಂಡು ಬಂದದ್ರಲ್ಲಿ ತಪ್ಪಿದೆಯಾ? ಪ್ರಶ್ನಿಸಿದಾಗ ಒಪ್ಪಿಕೊಂಡವರಂತೆ ತಲೆದೂಗಿದರು.ವಾಣಿಶ್ರೀ ಮಗನ ಪಕ್ಕವೇ ಕುಳಿತು ತಿಂಡಿಯನ್ನು ಅವನ ತಟ್ಟೆಗೆ ಹಾಕಿದವರೇ, ಏನೋ ಬಲವಾದ ಕಾರಣ ಇರ್ಬೇಕಲ್ಲ. ಈ ಹೊತ್ತು ಯಾವತ್ತೂ ಮನೆಯಲ್ಲಿ ನಿಲ್ಲದೋನು ಇಷ್ಟೊಂದು ಬದಲಾಗಿದ್ದೀಯಾ ಅಂದ್ರೆ... ಅನುಮಾನದ ನೋಟವಿತ್ತು.


ಸರಿಯಾದ ಉತ್ತರ ಕೊಡದೆ ಸುಮ್ಮನೆ ಬಿಡಲಾರರು ಅನಿಸಿತು. ತುತ್ತು ಬಾಯಿಗಿಡುತ್ತಲೇ ಅಶುತೋಶ್ನ ಮೇಲ್ ಬಂತು. ಬಂದು ಹೋಗೊದಿಕ್ಕೆ ಒತ್ತಾಯಿಸಿದ್ದಾನೆ. ಮುಂದಿನವಾರ ಹೋಗಿ ಬರೋ ನಿರ್ಧಾರವಿದೆ ತೇಲಿಸಿ ಹೇಳಿದ ಮಾತಿನಂತಿರಲಿಲ್ಲ. ಮಗನ ಮಾತನ್ನು ಒಪ್ಪಿಕೊಂಡರು.
ಕಾಶ್ಮೀರದ ಕೊರೆಯುವ ಚಳಿಯಲ್ಲಿ ಅಶುತೋಶ್ ದೂರವೇ ಇದ್ದು ಬಿಡುವಾಗ ಅವನ ಮೇಲೆ ಕನಿಕರ ಮೂಡಿದ್ದೂ ಇದೆ. ಆದರೆ ಗೆಳೆಯನ ಮಗನೆಂಬ ಆದರಣೆಯಿಂದ ಬುದ್ಧಿಮಾತು ಹೇಳಿದ್ದು ನಿರರ್ಥಕವೆನಿಸಿತು. ಏನಿದೆಯೋ ಅಲ್ಲಿ? ಸದಾ ಗಲಭೆ, ಹತ್ತಿ ಸಿಡಿಯುವ ಗುಂಡು ಮದ್ದುಗಳದ್ದೆ ಕಾರು ಬಾರು. ಸ್ಫೋಟ, ಭಯೋತ್ಪಾದನೆಗಳ ಸುದ್ದಿ. ಅವನ ವಿಷಯವನ್ನು ಮಾತನಾಡುವುದನ್ನೇ ಬಿಟ್ಟರು. ಹೀಗೆ ಅಪರೂಪಕೊಮ್ಮೆ ಮಗನಿಂದಲೇ ಅವನ ವಿಷಯ ತಿಳಿಯುತ್ತಿತ್ತು.

ಇಂದ್ರಸೇನ್ ಊರೂರು ಅಲೆಯುವ ಪ್ರಸಂಗ ಎದುರಾದಾಗ ಬೇಕಿದ್ದ ಅನುಕೂಲತೆಗಳನ್ನೆಲ್ಲಾ ಮಾಡಿ ಕೊಡುತ್ತಿದ್ದುದು ದೇಶಸೇವೆಯ ತುಡಿತ ಬಹಳವಿದ್ದ ಮೇಜರ್ ಆತ್ಮರಾಮ್. ಸೇನೆಯ ಮುಂಚೂಣಿಯಲ್ಲಿದ್ದವ ಸರಕಾರದ ಕಚೇರಿಯೊಂದು ಭಯೊತ್ಪಾದಕರ ಕೈಯಲ್ಲಿ ಸೆರೆಯಾದಾಗ ಕೆಚ್ಚೆದೆಯಿಂದ ಹೋರಾಡಿ ಶತ್ರುಗಳ ನಿರ್ನಾಮ ಮಾಡಿದ ಹೆಮ್ಮೆಯಿದ್ದರೂ ವಿಧಿ ಅವರನ್ನು ಭೂತಾಯಿಯ ರಕ್ಷಣೆಯಲ್ಲಿ ಸೆಳೆದುಕೊಂಡಿದ್ದನ್ನು ಸಹಿಸದಾದರು. ತಾಯಿಯಿಲ್ಲದ ತಬ್ಬಲಿ ಅಶುತೋಶ್ನನ್ನು ಎಷ್ಟು ಕೇಳಿಕೊಂಡರೂ ಕೇಳಿಸಿಕೊಳ್ಳದ ಛಲಗಾರ. ತಂದೆಯಂತೆ ದೇಶದ ರಕ್ಷಣೆಗೆ ಟೊಂಕ ಕಟ್ಟಿ ನಿಂತ. ಮೊದಲ ವರ್ಷವೇ ಕಾಶ್ಮೀರದ ಪಡೆಯಲ್ಲಿ ಪೋಸ್ಟಿಂಗ್ ಆದಾಗ ಬಹಳ ಖುಷಿಯಿಂದಲೇ ತೆರಳಿದ್ದ. ಅಲ್ಲಿಯ ಹವಾಮಾನ, ರಾಜಕೀಯ ವಿಷಯಗಳ ಬಗ್ಗೆ ಆಗಾಗ್ಗೆ ನಿಖಿಲ್ಗೆ ಮೇಲ್ ಕಳುಹಿಸುತ್ತಿದ್ದ.

ಅದೇ ಒಂದು ಕೊಂಡಿ ಮಾತ್ರ ಇನ್ನೂ ಮೇಜರ್ ಆತ್ಮರಾಮ್ನ ನೆನಪಿಸುವ ಕೊಂಡಿಯಾಗಿ ಉಳಿದಿತ್ತು. ಹಾಗಾಗಿ ಮಗನಿಗೆ ಎದುರು ಮಾತನಾಡದೆ ಕಾಶ್ಮೀರದವರೆಗೂ ಹೋಗಿ ಬರುವ ಗ್ರೀನ್ ಸಿಗ್ನಲ್ ನೀಡಿದ್ದರು.ನಿಖಿಲ್ನನ್ನು ಅಶುತೋಶ್ ಎಂದೋ ಒಮ್ಮೆ ಕರೆದಿದ್ದನಷ್ಟೆ. ಡ್ಯಾಡ್ನ ಎದುರು ಕ್ಷುಲಕ ಕಾರಣ ನೀಡಿದ್ದು ನೆಪ ಮಾತ್ರಕ್ಕೆ. ವ್ಯವಹಾರಿಕ ಲೋಕದಲ್ಲಿ ಸಂಪೂರ್ಣ ಮುಳುಗಿದವನಿಗೆ ಸಂಸ್ಥೆಯನ್ನು ಬಿಟ್ಟು ದೂರ ಉಳಿಯುವುದು ಸಾಧ್ಯವಿಲ್ಲದ ಮಾತು.ಮನೆಯಲ್ಲಿಯೇ ಉಳಿಯುವುದು ಪನಿಶ್ಮೆಂಟ್ ಅನಿಸಿತು. ಎದ್ದು ಹೊರಗೆ ಬಂದು ನಿಂತ. ಹೊರಗಿನ ದೃಶ್ಯ ಎಂದೂ ತಾನು ಕಂಡರಿಯದಂತೆ ಶುಭ್ರವಾಗಿ ಕಂಡಿತು. ಕತ್ತಲೆಯಲ್ಲೂ ಅಸ್ಪಷ್ಟ ಆಕೃತಿಗಳನ್ನು ಊಹಿಸಿಕೊಂಡ.


ಚಂದ್ರನ ಮಂದ ಬೆಳಕು ಇನ್ನಷ್ಟು ಮನೋಹರವಾಗಿ ಕಂಡಿತು. ಯಾವುದೋ ಅಚ್ಚಳಿಯದ ಬಿಂಬವೊಂದು ಭಾವನೆಗಳ ಕೂಪಕ್ಕೆ ತಳ್ಳಿದಂತಾಯಿತು. ಮಿಡಿದ ಕಣ್ಣೀರಿನ ಹಿಂದೆ ಏನೋ ನೋವಿರುವುದನ್ನು ಗುರುತಿಸಿತು. ಆದರೆ ಸಹೋದ್ಯೋಗಿಗಳೊಂದಿಗೆ ಸಲುಗೆಯಿಂದ ಇರಲಾರ. ಇಷ್ಟರವರೆಗೆ ಪಡೆದುಕೊಂಡ ಗೌರವ, ಸ್ಥಾನಮಾನಗಳೆಲ್ಲಾ ಎಲ್ಲೋ ಕೊಚ್ಚಿ ಹೋಗುವುದೇನೊ ಅನ್ನುವ ಆತಂಕವಿತ್ತು.ಮನಸ್ಸಿಗೆ ಬಂದ ಮನಸ್ವಿತಾ ಅಲ್ಲಿಯೆ ಉಳಿಯುವಂತೆ ಕಂಡಳು!

- ಅನು ಬೆಳ್ಳೆ.
ಗ್ರಾಫಿಕ್ಸ್ : ಆದೂರು.

0 comments:

Post a Comment