ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
5:48 PM

ಆ ಸಂಬಂಧ

Posted by ekanasu

ಯುವಾ...

ನಿನ್ನೊಳಗಿನ ನಾನು
ನನ್ನೊಳಗಿನ ನೀನು
ಬದುಕು ಸಾಗುವುದು ನಾವಾಗಿ
ನಮ್ಮದೇ ಜಗತ್ತು
ಮುಗ್ಧ ಭಾವಗಳು

ಪ್ರೀತಿ ಎಲ್ಲವೂ ಸೇರಿ ಮನದಲ್ಲಿ ಮನವಾಗಿ
ಒಂದು ಕ್ಷಣವೂ ಬಿಟ್ಟಿರಲಾಗದ ನಂಟನ್ನು
ಹೇಗೆ ಅರ್ಥೈಸಲಿ ಈ ಸಂಬಂಧವ
ಗಂಡ ಹೆಂಡತಿ ಎಂಬ
ಅದ್ಭುತ ಬಾಂಧವ್ಯವ

ದಿನದಿಂದ ದಿನಕ್ಕೂ ಗಟ್ಟಿಯಾಗಿ
ಮತ್ತಷ್ಟು, ಇನ್ನಷ್ಟು ಹೇಳಲಾಗದಷ್ಟು ಬೆಸೆಯುವ
ಸಂಬಂಧವೇ..
ಒಬ್ಬರಿಗೊಬ್ಬರು ಪ್ರೀತಿಸುವ
ಕಾಳಜಿಯ ಹಪಹಪಿ
ನಿನಗೆ ನಾನು

ನನಗೆ ನೀನು ಎಂಬುವುದರಲ್ಲಿ
ನಾವಾಗಿ ಸಾಗುವುದು ಬದುಕಿನ ಕೊನೆಯವರೆಗೆ
ಕೈ ಹಿಡಿದು
ಒಬ್ಬರಿಗೊಬ್ಬರು ಆಸರೆಯಾಗಿ .

ಬರಹ:ಪದ್ಮಾ ಭಟ್ ಎಸ್.ಡಿ.ಎಂ ಕಾಲೇಜ್ ಉಜಿರೆ

0 comments:

Post a Comment