ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಯುವಾ

ಎರಡು ವರುಷಗಳ ಹಿಂದಿನ ಮಾತು. ಪಿ.ಯು.ಸಿ ಮುಗಿಸಿ ಆಗ ತಾನೇ ಗೊತ್ತಿರದ ಊರಲ್ಲಿ ಕಾಲೇಜಿಗೆ ಅಡ್ಮಿಷನ್ ಪಡೆದಿದ್ದೆ. ನನ್ನ ಇಷ್ಟದ ಮೇರೆಗೋ ಅಪ್ಪ ಅಮ್ಮನ ಒತ್ತಾಯದ ಮೇರೆಗೋ ದೂರದ ಊರಿಗೆ ಹೋಗುವ ಸಂಭವ ಬಂದಿತು. ಇನ್ನೇನು ಕಾಲೇಜು ಶುರುವಾಗುವ ದಿನವೂ ಹತ್ತಿರ ಬರುತ್ತಿದ್ದಂತೆ ಮನದಲ್ಲಿ ಸಾವಿರ ಪ್ರಶ್ನೆಗಳು ನನ್ನನ್ನು ಕಾಡತೊಡಗಿದ್ದವು. ಇಷ್ಟು ದಿನ ಇದ್ದ ಪ್ರೆಂಡ್ಸ್ ಎಲ್ಲಾ ಅವರವರ ಅಭಿರುಚಿಗೆ ಅವಕಾಶಕ್ಕೆ ತಕ್ಕಂತೆ ಬೇರೆ ಬೇರೆ ಕಾಲೇಜಿಗೆ ಹೋಗಿದ್ದರು.ಒಬ್ಬಂಟಿಯಂತೆ ನಾನು ಡಿಗ್ರಿಯ ಮೊದಲ ವರುಷಕ್ಕೆ ಕಾಲಿಟ್ಟಿದ್ದೆ. ನಾಳೆ ಕಾಲೇಜು ಶುರುವಾಗೋದು ಅಂತ ಒಂದು ದಿನ ಮುಂಚೆಯೇ ನಿದ್ರೆ ಯು ಬರದೇ ಕಣ್ಣು ಮುಚ್ಚಿದರೆ ಸಾಕು ನಾಳೆ ಕಾಲೇಜಿನಲ್ಲಿ ಏನು ಆಗಬಹುದು ಎಂಬುದೇ ದೊಡ್ಡ ಭಯವಾಗಿ ಕಾಡತೊಡಗಿತ್ತು. ಏಕೆಂದರೆ ನನಗೆ ರ್ಯಾಂಗಿಂಗ್ ಮಾಡಿದರೆ ಎಂಬ ಭಯ ಇತ್ತು...


ಹೇಗೋ ಬಂದುಬಿಟ್ಟೆ ಸುತ್ತಲೂ ಜನಸ್ತೋಮವು ಹರಿದಾಡುತ್ತಿರುವ ಕಾಲೇಜಿನಲ್ಲಿ ಅರೆರೆ ನಂಗೆ ರ್ಯಾಂಗಿಂಗ್ ಮಾಡಲೇ ನಿಂತಿರಬಹುದೇ ಎಂದು ಯೋಚಿಸಿದೆ..ಆದರೆ ನನ್ನ ಊಹೆ ತಪ್ಪಾಗಿತ್ತು..ಎಲ್ಲರೂ ಅವರವರ ಕೆಲಸದಲ್ಲಿ ತೊಡಗಿಕೊಂಡಿದ್ದರು..ಅಲ್ಲದೇ ಗೊತ್ತಿರದ ವಿಷಯಕ್ಕೆ ಸರಿಯಾದ ಮಾಹಿತಿಯನ್ನು ಕೊಡುತ್ತಿದ್ದರು. ಆಗ ನನಗಾದ ಖುಷಿ ಹೇಳತೀರದು. ಪ್ರಥಮ ವರುಷದ ಡಿಗ್ರಿಯವರಿಗೆ ಓರಿಯಂಟೇಶನ್ ಪ್ರೋಗ್ರಾಮ್ ಏರ್ಪಡಿಸಿದ್ದಾರೆ ಎಂದು ಹೇಳಿ ನನ್ನನ್ನು ಆ ಕಾರ್ಯಕ್ರಮ ನಡೆಯುವ ಜಾಗಕ್ಕೆ ಕಳುಹಿಸಿಕೊಟ್ಟರು.

ಸೀನಿಯರ್ಸ್ ಅಂತೂ ರ್ಯಾಗಿಂಗ್ ಬದಲು ವೆಲ್ ಕಮ್ ಪ್ರೋಗ್ರಾಂ ಇಟ್ಟುಕೊಂಡಿದ್ದರು.ನಾವೆಲ್ಲ ಒಂದೇ ಬಳ್ಳಿಯ ಹೂವುಗಳು ಎಂಬ ಮಾತಿಗೆ ನಾವೆಲ್ಲರೂ ಕೈಜೋಡಿಸಿದೆವು. ನನ್ನ ಭಯವನ್ನೆಲ್ಲಾ ಕೆಲವೇ ಕ್ಷಣದಲ್ಲಿ ಹೊರಟು ಹೋಗಿದ್ದವು. ಒಂದೇ ಕುಟುಂಬದ ಜನರು ನಾವು ಎಂದು ಪತ್ರಿಕೋದ್ಯಮ ವಿದ್ಯಾರ್ಥಿಗಳು ನಮ್ಮಲ್ಲಿ ಹೇಳಿದಾಗ ಅವರ ದೊಡ್ಡ ಗುಣ ಎಂದೆನಿಸದೇ ಇರಲಿಲ್ಲ.

ಬರಹ: ಪದ್ಮಾ ಭಟ್
ಎಸ್.ಡಿ.ಎಂ ಕಾಲೇಜ್ ಉಜಿರೆ.

0 comments:

Post a Comment