ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ : ನಾಡೋಡಿ.

ಕನ್ನಡ ಪತ್ರಿಕೋದ್ಯಮದ ಇತಿಹಾಸ ಪ್ರಾರಂಭವಾಗುವುದು 1843ರಲ್ಲಿ ಪ್ರಾರಂಭಗೊಂಡ ಮಂಗಳೂರು ಸಮಾಚಾರ ಪತ್ರಿಕೆಯೊಂದಿಗೆ.ಇದುವೇ ಕನ್ನಡದ ಮೊದಲ ಪತ್ರಿಕೆಯೆಂದು ದಾಖಲಾಯಿತು.


ಇದನ್ನು ಪ್ರಾರಂಭಿಸಿದವರು ಹರ್ಮನ್ ಮೊಗ್ಲಿಂಗ್. 21ನೇ ಶತಮಾನದ ಪತ್ರಿಕೆಗಳ ಪೈಕಿ ಸಂಯುಕ್ತ ಕರ್ನಾಟಕ,ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ, ವಿಜಯ ಕರ್ನಾಟಕ ಪ್ರಮುಖ ಎನಿಸಿಕೊಂಡವು. ಆದರೆ ಈ ಇತಿಹಾಸಕ್ಕೇ ಸವಾಲು ಹಾಕುವಂತಹ ಒಂದು ಮಾಹಿತಿ ಇದೀಗ ಲಭ್ಯವಾಗಿದೆ. 170 ವರುಷದ ಕನ್ನಡ ಪತ್ರಿಕೋದ್ಯಮ ಇತಿಹಾಸಕ್ಕೇ ಇದೊಂದು ಸವಾಲು!!!1651 ರಂದು ಕನ್ನಡದ ಮೊಟ್ಟಮೊದಲ ಪತ್ರಿಕೆ ಹುಟ್ಟಿಕೊಂಡಿತೇ...? ಇದೀಗ ಈ ಸಂದೇಹ ಉಂಟಾಗದಿರದು.
ಕಾರಣ ವಿಶ್ವಭಾರತೀ ಪ್ರಕಟನಾಲಯ ಹುಬ್ಬಳ್ಳಿ ಇವರ " ಕನ್ನಡಿಗ " ಪತ್ರಿಕೆ ಈ ಸಂದೇಹಕ್ಕೆಡೆಮಾಡಿದೆ. ವಾಣಿಜ್ಯ ಉದ್ಯಮ ಒಕ್ಕಲು ತನಕ್ಕೆ ಮೀಸಲಾದ ವಾರಪತ್ರಿಕೆ ಕನ್ನಡಿಗ. ಇದರ 26ನೆಯ ಸಂಪುಟದ 19ನೆಯ ಸಂಚಿಕೆಯನ್ನು ನೋಡಿದರೆ ಕನ್ನಡ ಪತ್ರಿಕೋದ್ಯಮದ ಇತಿಹಾಸ ಕೇವಲ 170ವರುಷಕ್ಕೆ ಸೀಮಿತವಾಗಿಲ್ಲ ಬದಲಾಗಿ 361 ವರುಷಗಳ ಇತಿಹಾಸ ವಿದೆ ಎಂಬಂತಾಗಿದೆ!.

ಇದಕ್ಕೆ ಕಾರಣ ಕನ್ನಡಿಗ 12 - 9 - 1677 ಪ್ರತಿ.ಹೌದು. ಕನ್ನಡಿಗ ಪತ್ರಿಕೆಯ ಶೀರ್ಷಿಕೆ (ಮಾಸ್ಟರ್ ಹೆಡ್ )ನ ವಿವರಗಳಲ್ಲಿ ಈ ಸತ್ಯದ ಅನಾವರಣವಾಗಿದೆ. ಆದರೆ ಒಳ ಪುಟ ಹಾಗೂ ಕೊನೆಯ ಪುಟದಲ್ಲಿ ಈ ತಾರೀಕು ಬದಲಾಗಿದ್ದು ಅಚ್ಚರಿ ಮೂಡಿಸುತ್ತಿದೆ. 12 - 9 - 1977 ಎಂಬುದು ಉಳಿದ ಮೂರು ಪುಟಗಳಲ್ಲಿ ದಾಖಲಾದ ವಿವರ.

ಆದರೆ ಮುಖಪುಟದಲ್ಲಿ 1677, ಉಳಿದಂತೆ ಇತರ ಪುಟಗಳಲ್ಲಿ 1977 ಎಂದು ದಾಖಲಾಗಿದ್ದು ಏತಕ್ಕಾಗಿ...? ಹುಬ್ಬಳ್ಳಿ, ಸೋಮವಾರ,
ಬರಹಗಳನ್ನು ನೋಡಿದರೆ ಪತ್ರಿಕೆ 1677ರದ್ದಂತೂ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕರ್ನಾಟಕದ ರಾಜಕೀಯ ಸಮೀಕ್ಷೆಯ ಲೇಖನವೊಂದನ್ನೇ ಅವಲೋಕಿಸಿದಾಗ ಅದು ಸ್ಪಷ್ಟವಾಗುತ್ತದೆ.

1 comments:

Ravi said...

ಇದು 20ನೇ ಶತಮಾನದ್ದೇ ಇರಬೇಕು. ಗಾಂಧೀಜಿಯವರ ಶುಭ ನುಡಿಯೊಂದು ಪತ್ರಿಕೆಯ ಶೀರ್ಷಿಕೆಯ ಕೆಳಭಾಗದಲ್ಲಿದೆ. !!!

Post a Comment