ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು: ಪ್ರವಚನ-ಪೂಜನ-ಗಾಯನ-ವಾದನ-ನರ್ತನ-ಚಿತ್ರ-ರೂಪಕಗಳನ್ನೊಳಗೊಂಡ ಅಂತ್ಯಂತ ವಿಶಿಷ್ಟವಾದ ಶ್ರೀ ರಾಮಕಥಾ ಎಂಬ ಸಾಂಸ್ಕೃತಿಕ-ಆಧ್ಯಾತ್ಮಿಕ ಸಂದೇಶಗಳ ಮೊದಲ ಶ್ರೀರಾಮಕಥಾ ಕಾರ್ಯಕ್ರಮವು ಬಾಲಕಿಯರ ಸರ್ಕಾರಿ ಪದವಿಪೂರ್ವವಿದ್ಯಾಲಯದ ಆವರಣ 13ನೆಯ ಅಡ್ಡ ರಸ್ತೆ, 4ನೆಯ ಮುಖ್ಯರಸ್ತೆ ಮಲ್ಲೇಶ್ವರಂ ಇಲ್ಲಿ ಆಗಸ್ಟ್ 05 ರಿಂದ 12ರ ವರೆಗೆ ಸಂಜೆ 6.00 ರಿಂದ 9.00ರ ವರೆಗೆ ನಡೆಯಲಿದೆ.

ಸ್ವತಃ ರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಪರಿಕಲ್ಪಿಸಿ ದಿಗ್ಧರ್ಶಿಸಿದ ಮೂಲ ವಾಲ್ಮೀಕಿ ರಾಮಾಯಣವನ್ನು ಆಧರಿಸಿದ ಕಾರ್ಯಕ್ರಮವಿದು.
ಈ ಕಾರ್ಯಕ್ರಮವು ಈಗಾಗಲೇ ಕೊಲ್ಕತ್ತಾ, ಜೋದ್ಪುರ್, ಮುಂಬೈ, ಮಂಗಳೂರು, ಮೈಸೂರು, ಗೋಕರ್ಣ, ಸಿದ್ದಾಪುರ ಮೊದಲಾದವುದಳಲ್ಲಿ ನಡೆದಿದ್ದು ಅಪಾರ ಜನರ ಲಕ್ಷ್ಯ ಸೆಳೆದಿದೆ. ಈ ಕಾರ್ಯಕ್ರಮಕ್ಕೆ ವಿಶೇಷ ಬಸ್ ಸೌಲಭ್ಯವನ್ನು ಒದಗಿಸಲಾಗಿದೆ.

0 comments:

Post a Comment