ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ಬೆಂಗಳೂರು ವರದಿ

ಹವ್ಯಕ ಭಾಷೆಯ ಉಳಿವು ಮತ್ತು ಏಳಿಗೆಗೆ ಶ್ರಮಿಸುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಪ್ರಕಟಿಸಿರುವ ’ಒಪ್ಪಣ್ಣ ಒಪ್ಪಂಗೊ- ಒಂದೆಲಗ’ ಮತ್ತು ’ಹದಿನಾರು ಸಂಸ್ಕಾರಂಗೊ’ ಪುಸ್ತಕಗಳನ್ನು ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಲೋಕಾರ್ಪಣೆ ಮಾಡಿದರು.
ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದಲ್ಲಿ ಚಾತುರ್ಮಾಸ್ಯ ವ್ರತ ಆಚರಿಸುತ್ತಿರುವ ಸ್ವಾಮೀಜಿ ಹವ್ಯಕ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿರುವ ಈ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಇದಕ್ಕೂ ಮುನ್ನ, ಪ್ರತಿಷ್ಠಾನದ ಲಾಂಛನವನ್ನು ಸ್ವಾಮೀಜಿ ಬಿಡುಗಡೆ ಮಾಡಿದರು.



ಪುಸ್ತಕ ಬಿಡುಗಡೆ ಬಳಿಕ ಪ್ರತಿಷ್ಠಾನದ ಸದಸ್ಯರೊಂದಿಗೆ ಸಂವಾದ ನಡೆಸಿದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ, ಹವ್ಯಕ ಭಾಷೆ, ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗಾಗಿ ಪ್ರತಿಷ್ಠಾನ ನಡೆಸುತ್ತಿರುವ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿದೆ. ಮುಂದಿನ ದಿನಗಳಲ್ಲೂ ಈ ಕೆಲಸಗಳನ್ನು ಇನ್ನಷ್ಟು ಉತ್ತಮವಾಗಿ ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು. ಪ್ರತಿಷ್ಠಾನ ಪುಸ್ತಕಗಳ ಪ್ರಕಟಣೆಗೆ ಮುಂದಾಗಿರುವುದನ್ನು ಶ್ಲಾಘಿಸಿದ ಅವರು, ಹವ್ಯಕ ಸಾರಸ್ವತ ಲೋಕಕ್ಕೆ ಇಂತಹ ಪುಸ್ತಕಗಳ ಅವಶ್ಯಕತೆ ಇದ್ದು, ಇನ್ನಷ್ಟು ಪುಸ್ತಕಗಳು, ಮತ್ತಷ್ಟು ಹವ್ಯಕ ಸಾಹಿತಿಗಳು ಪ್ರವರ್ಧಮಾನಕ್ಕೆ ಬರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀಕೃಷ್ಣ ಶರ್ಮ ಹಳೆಮನೆ, ಒಪ್ಪಣ್ಣನ ಒಪ್ಪಂಗೊ-ಒಂದೆಲಗ ಪುಸ್ತಕದ ಲೇಖಕ ಮಹೇಶ ಎಳ್ಯಡ್ಕ, ಹದಿನಾರು ಸಂಸ್ಕಾರಂಗೊ ಪುಸ್ತಕ ಬರೆದ ರಾಮಕೃಷ್ಣ ಭಟ್‌ ಚೆನ್ನೈ, ಪ್ರತಿಷ್ಠಾನದ ಟ್ರಸ್ಟಿಗಳು, ಸದಸ್ಯರು ಹಾಜರಿದ್ದರು.

1 comments:

Anonymous said...

ವರದಿ ಚೆನ್ನಾಗಿ ಬ೦ದಿದೆ. ಅದು "ಹವಿಗನ್ನಡ" ಭಾಷೆ ಇರಬೇಕು, ಹವ್ಯಕ ಭಾಷೆ ಅಲ್ಲ. ನನ್ನ ಹವ್ಯಕ ಮಿತ್ರನೊಬ್ಬನಿ೦ದ ಕೇಳಿ ಧೃಡಪಡಿಸಿಕೊ೦ಡೆ.
ತಿಳಿದವರೇ ಹೀಗೆ ಬರೆದರೆ ಹೇಗೆ?

Post a Comment