ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ ಸುದ್ದಿ : ಬೆಂಗಳೂರು ವರದಿ
ಇದು ಕೇವಲ ಬತ್ತಿಯಲ್ಲ...ಬದಲಾಗಿ ಭಕ್ತಿ... ಬತ್ತಿ ಸಮರ್ಪಣೆಯೊಂದಿಗೆ ಭಕ್ತಿ ಸಮರ್ಪಣೆಯಾದಂತಾಗಿದೆ. ಈ ಬತ್ತಿಯಿಂದ ಜ್ಯೋತಿ ಪ್ರಜ್ವಲನವಾಗುತ್ತದೆ. ಅದು ರಾಮನ ಮುಖ ಬೆಳಗುವಂತೆ ಮಾಡುತ್ತದೆ. ತನ್ಮೂಲಕ ರಾಮನ ಸೇವೆ ಮಾಡಿದಂತಹ ಕೀರ್ತಿ ಮಾತೆಯರಿಗೆ ಸಲ್ಲುತ್ತದೆ ಎಂದು ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ನುಡಿದರು.

ಗಿರಿನಗರದ ಮಠದಲ್ಲಿ ನಂದನ ಚಾತುರ್ಮಾಸ್ಯ ವೃತಾಚರಣೆಯಲ್ಲಿದ್ದ ಶ್ರೀಗಳು ಭಕ್ತಕೋಟಿಗೆ ಅನುಗ್ರಹ ಆಶೀರ್ವಚನ ನೀಡಿದರು.ಇಂದು ಬತ್ತಿಹೊಸೆಯುವ ಕಾಯಕ ಮರೆಯಾಗುತ್ತಿದೆ. ಪ್ರತೀ ಮನೆ ಮನೆಗಳಲ್ಲಿ ಬತ್ತಿಹೊಸೆಯುವ ಕಾರ್ಯ ನಡೆಯಲಿ ಎಂದು ಆಶಿಸಿದರು.

0 comments:

Post a Comment