ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ಇದು ಅನ್ನದ ಮುಖ - ಈಗ ಖಿನ್ನದ ಮುಖ ನೋಡೋಣ!

ದೇವಸ್ಥಾನ-ಪರಾತ್ಪರದ ಆಢ್ಯ-ಆದ್ಯ ತಾಣ!
ಅಲ್ಲಿ ತಲ್ಲಣ!
ಕ್ರಿಸ್ಚಿಯನ್ನರು, ಅನ್ಯ ಜಾತಿಯವರು,ಮೈಲಿಗೆಯವರು ಹೀಗೆ ಹತ್ತು ಹಲವು ಬಗೆಯಲ್ಲಿ ಪರಮಾತ್ಮನ ಒಡಲನ್ನೇ ಬಗೆದು ಒಗೆಯುವ-
ಆಳುವ,ಅಚಿ೯ಸುವ ಗುಂಪು!

ಉತ್ತಮ ಆರೋಗ್ಯ,ವಿದ್ಯೆ,ವಿನಯ,ಸಂಪತ್ತು,ಅಧಿಕಾರ ಇವೆಲ್ಲಾ ಅಂಧಕಾರಕ್ಕೆ-ಕಂದಾಚಾರಕ್ಕೆ ತುತ್ತಾಗಿ,ತೊತ್ತಾಗಿ,ಕೊನೆಗೆ ಸುಸ್ತಾಗಿ ಮಸಣಕ್ಕೆ!
ಎಲ್ಲರ ಹೃದಯದಲ್ಲಿ ತಾನಿದ್ದೇನೆಂದರೂ-ಪರಮಾತ್ಮನಿಗೇ ಸವಾಲು ಹಾಕಿ-ಭಕ್ತರನ್ನು ಸಾಗು ಹಾಕುವ-ಈ ಸೊಗಿನ-ಸೊಗಸಿನ-ಹೊಲಸಿನ ವ್ಯವಸ್ಥೆಗೆ ಸೊಂಟಮುರಿಯುವ ಆಳುವ ಪ್ರಭು ಇಲ್ಲದಿರುವುದೇ,
ದೇವಸ್ಥಾನಕ್ಕೆ ಸಲ್ಲದ-ಸಲ್ಲಿಸಲ್ಪಡದ-ಸರಿಯಾಗಿಸಲ್ಪಡದ ಈ ಸೃಷ್ಟಿಯ ಚಿತ್ತು-ಚಿತ್ತವು.
ಇದು ಚಿತ್ರವೇ-ವಿಚಿತ್ರವೇ?
ಉಣ್ಣಲು ತಯಾರಿಗೇ ಮೀಸಲಾದ ಕೈಗಳಿಗೆ-ಇಲ್ಲಿ ಕೈಕೊಟ್ಟವಕ್ಕೆ-ಕೈಕಟ್ಟುವ ಕೆಲಸಕ್ಕೆ ಜಗದೀಶನಕೈಗಳನ್ನೆ-ಎರವಲು ಪಡೆಯಬೇಕಷ್ಟೆ!

********************
ಇದೇ ರೋದನ-ವೇದನ-ಅರಣ್ಯ ರೋದನ-ಹಿರಣ್ಯ (ರೊಕ್ಕದ) ರೋದನ!
ಇನ್ನೆಲ್ಲೂ ಸಲ್ಲಲು ಸರಕಾರಕ್ಕೆ ನಿಲ್ಲದ ನಿಲ್ಲಿಸದ ಉಮೇದು!
ಆದರೆ ಸಕಲಕಲಾವಲ್ಲಭರಾದ ದೈವ ಬಯಸುವ ಜತೆಗೆ ದೈವವೂ ಬಯಸುವ-ಜನಕ್ಕೆ-ಮನಕ್ಕೆ-ಮುಕ್ಕು!
ಹಕ್ಕು ಎಂದರೂ-ದಕ್ಕದ "ಈ ಪಕ್ವಕ್ಕೆ-ತತ್ವಕ್ಕೆ-ತಥ್ಯಕ್ಕೆ"
ಯಾರು ಯಾವಾಗ ವಕ್ರವಾಗದೇ-ವ್ಯಗ್ರವಾಗದೇ ಒದಗುತ್ತಾರೆ ಎಂತ ಕಾಯುವುದೇ ಈಗ ಉಳಿದಿರುವ ಆಸ್ತಿ!
ಅಸ್ಥಿ ಇರುವವರೆಗೆ-ಅಂತಸ್ಥವಾದ ಪರಮಾತ್ಮನಿಗೂ ಬೇಸರವಾಗದೇನು ಈ ಕೊಳಕು?

**********************
ಇವರಿಗಾಗಿ ವರವಾಗುವ-ಬರವಾಗದ-ಬಲವಾದ-ವಾದವೇ ಅಲ್ಲವೇ ಈಗ ಆಗಬೇಕಾದ-
"ನಾದ-ಸುನಾದ-ನಿನಾದ"?
**********************
ಅದೇ ಅಲ್ಲವೇನು ದೇವತಾ ಪೂಜಾ ಪ್ರಾರಂಭದ ಘಂಟಾ ನಾದದ ಮಂತ್ರ-
"ಆಗಮಾಥ೯ತಂತು ದೇವಾನಾಂ, ಗಮನಾಥ೯ತಂತು ರಕ್ಷಸಾಂ"
"ಘಂಟಾ ನಾದಂ ಕೃತ್ವಾ-------" ಎಂಬ-ಶೃತಿ ವಾಕ್?

- ಆರ್.ಎಂ.ಶಮ೯.,ಮಂಗಳೂರು.

0 comments:

Post a Comment