ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ಲೇಖನಿ ಖಡ್ಗಕ್ಕಿಂತ ಹರಿತ. ಪೆಟ್ರೋಲ್ ಇಲ್ಲದೆಯೇ ಸಮಾಜದಲ್ಲಿ ಬೆಂಕಿ ಹಚ್ಚುವ ಶಕ್ತಿ ಲೇಖಕನ ಲೇಖನಿಗಿದೆ. ನೀರಿಲ್ಲದೆಯೇ ಆ ಬೆಂಕಿಯನ್ನು ಶಮನ ಮಾಡುವ ಶಕ್ತಿಯೂ ಲೇಖನಿಗಿದೆ. ನಮ್ಮ ಸುತ್ತ ಮುತ್ತ ಪ್ರತಿ ಕ್ಷಣ ಪ್ರತಿ ದಿನ ಹಿತ ಮತ್ತು ಅಹಿತಕರ ಘಟಣೆಗಳನ್ನು ನಾವು ನೋಡುತ್ತಿದ್ದೇವೆ,ಕೇಳುತ್ತಿದ್ದೇನೆ. ಅನ್ಯಾಯ ತಾಂಡವವಾಡುತ್ತಿದೆ. ಎಲ್ಲ ರಂಗಗಳಲ್ಲೂ ಅಧಿಕಾರದ ಮತ್ತು ಹಣದ ದುರ್ಬಳಕೆ ವ್ಯಾಪಕವಾಗಿದೆ. ಸತ್ಯ ಹೆದರಿಕೊಂಡು ಎಂದೋ ಎಲ್ಲೋ ಹೋಗಿ ಮರದ ರಂಬೆಯ ಮೇಲೆ ಕೂತು ತಮಾಷೆ ನೋಡುತ್ತಿರಬಹುದೇನೋ ಎಂದು ಭಾಸವಾಗುತ್ತಿದೆ.


ಪ್ರಪಂಚದಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳ ಮುಖವಾಡ ತೆರೆಯಲು ಸಾಧ್ಯವೇ ಇಲ್ಲವೆ? ಅನ್ಯಾಯದ ಸೊಕ್ಕು ಮುರಿಯಲು ಯಾವ ಸಾಧನವೂ ನಮ್ಮ ಬಳಿ ಇಲ್ಲವೆ? ಇದೆ. "ಕಾನೂನು". ಆದರೆ ಬೇಲಿಯೇ ಎದ್ದು ಹೊಲವನ್ನು ಮೇಯ್ದರೆ ...? ಇಂದಿನ ಪರಿಸ್ಥಿತಿಯೇ ಹಾಗಾಗಿದೆ.

ಸಮಾಜದಲ್ಲಿ ಒಬ್ಬಂಟಿಗ ಹೋರಾಡಲಾರ. ಆದರೆ ಒಂದು ಲೇಖನಿ ಸಾವಿರಾರು ಜನರನ್ನು ಜಾಗೃತಗೊಳಿಸಬಲ್ಲದು. ಕ್ರಾಂತಿಯ ಕಿಡಿಯನ್ನು ಹಚ್ಚಬಹುದು. ಆ ಶಕ್ತಿ ಲೇಖಕಕನಿಗಿದೆ ಲೇಖನಿಗಿದೆ. ಅದರ ಸದ್ಬಳಕೆ ಅಥವಾ ದುರ್ಬಳಕೆ ಆತನಿಗೆ ಬಿಟ್ಟ ವಿಚಾರ. ಇಂದು ಕೆಲವರು ತಮ್ಮ ಲೇಖನಿಗಳನ್ನು ಮಾರಿಕೊಳ್ಳುತ್ತಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಸುದ್ದಿಗಳು ಸೃಷ್ಠಿಗೊಳ್ಳುತ್ತಿವೆ. ಸುಳ್ಳನ್ನು ಸತ್ಯವೂ ನಾಚಬೇಕು ಅಷ್ಟು ನಿಖರವಾಗಿ ಬರೆಯತೊಡಗಿದ್ದಾರೆ,ತೋರಿಸತೊಡಗಿದ್ದಾರೆ. ಮುಗ್ಧ ಜನರು ಸತ್ಯ ಯಾವುದು ಸುಳ್ಯಾವುದು ಎಂದು ತಿಳಿದುಕೊಳ್ಳುವಷ್ಟರಲ್ಲೇ ಅನಾಹುತಗಳು ನಡೆದು ಹೋಗಿರುತ್ತವೆ.

ಜನರನ್ನು ದಾರಿ ತಪ್ಪಿಸುವ ಲೇಖಕರೂ ಇದ್ದಾರೆ. ಜನರನ್ನು ಜಾಗೃತಗೊಳಿಸುವ ಲೇಖಕರೂ ಇದೇ ಸಮಾಜದಲ್ಲಿದ್ದಾರೆ. ಸತ್ಯವಾದಿ ಲೇಖಕ ಹಚ್ಚುವ ಸತ್ಯದ ಕಿಡಿ ಒಂದಲ್ಲ ಒಂದಿನ ಪ್ರಕಾಶಿಸದೆ ಇರದು.

- ಜಬೀವುಲ್ಲಾ ಖಾನ್

0 comments:

Post a Comment