ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ :ಆರ್.ಎಂ.ಶರ್ಮಾ ಮಂಗಳೂರು

ಮೇಧಾ-ಮೇಧ್ಯ ಇವು ಖಂಡಿತವಾಗಿಯೂ-ಬುದ್ಧಿಗೇ ಸಂಬಂಧಪಟ್ಟದ್ದು!
ಆದರೂ-ಅಮೇಧ್ಯ ಎಂದರೆ-ಖಂಡಿತವಾಗಿಯೂ ಚಾಲತಿಯಲ್ಲಿ-"ಮಲ-ಕೊಳಕು-ಅಗ್ರಾಹ್ಯ ವಿಷೇಷವಾಗಿಯೂ-ದುಗ್ರಾ೯ಹ್ಯ ಎಂತಲೇ ವ್ಯಾಖ್ಹ್ಯಾನಿಸುವುದು ಸತ್ಯಾತ್ ಸತ್ಯವು!ಇರಲಿ, ನೇರವಾಗಿ ವಿಷಯಕ್ಕೇ ಬರೋಣ!
ಈಗಂತೂ-ಎಲ್ಲೆಲ್ಲೂ-ಯಾವ ರೀತಿಯ-ದಬ್ಬಾಳಿಕೆ-ದುಬ೯ಳಕೆ ಇವಕ್ಕೆಲ್ಲಾ ರಾಮಬಣವೆಂದರೆ-ಸತ್ಯಾಗ್ರಹ-ಧರಣಿ-ಉಪವಾಸ-ಜೈಲುಭರೋ ಇತ್ಯಾದಿಗಳೇ-ಮಕುಟಮಣಿ!ಹೀಗಿದ್ದರೂ-ಸಾಮಾಜಿಕ ಅವಸ್ಥೆ-ಅವ್ಯವಸ್ಥೆ-ದುರವಸ್ಥೆ-ದುರಸ್ತಿ ಲ ಅನನ್ಯವಾದ ಅಂತಗ೯ತಹಿತರಕ್ಷಣೆಯೇ-
ಮನುಷ್ಯವಗ೯ದವರು-ಮಲವನ್ನು ತಲೆಯಮೆಲೆ ಹೊರುತ್ತರೆ,ಅಥವ ತತ್ಸಂಬಂಧಿತ ಕೆಲಸಗಳಲ್ಲಿ ತಮ್ಮ ಜಿವನೋಪಾಯವನ್ನು-ಕಾಣುತ್ತರೆ ಎಂಬ ಗದ್ದಲವೇ ಗದ್ದುಗೆಗೆ ಏರಿ-ಗದ್ದುಗೆಯನ್ನು-ಅಳ್ಲಾಡಿಸುತ್ತಿದೆ ಎಂಬುದೂ-
ಸತ್ಯಾತ್ ಸತ್ಯವಲ್ಲವೇನು?

ಹಾಗಾದರೆ-ಪಿಡುಗು-ಗುಡುಗು-ತೊಡಗೂ ಎಲ್ಲ ಸುಸ್ಪಷ್ಟ!
ಹಾಗಿದ್ದರೂ-ಮತ್ತೇಕೆ ಕಷ್ಟವು?
ಇಲ್ಲೇ-ಅಂತಗ೯ತ-ಸತ್ಸಂಗವಿದೆ!
ಮೈಮೇಲೆ ಮಲಹಾಕಿಕೊಂಡು ಜಳಕದ-ಪುಳಕ ಎಂತ ಕಿಲಕಿಲನಗು-ನೋವಿಗೆ ನೂರುಪಟ್ಟು ಪಟ್ಟದ ಪಾರಿತೋಷಕವೇ-ಆವೇಶ-ವೇಶ-ಸಂದೇಶ!
ಜನರು-ಸಮಾಜ-ಇತರ ಮನುಷ್ಯವಗ೯ದವರು ಬಲಾತ್ಕಾರವಾಗಿ ಈ ಹೊಲಸಿನ ಹೇರನ್ನು-ತೇರಾಗಿಸಿದೆ ಎಂತ-ಬಿಂಬಿಸಿ-ನಂಬಿಸಿ-ಚುಂಬಿಸಿ-ಬಿಸಿಮಾಡಿ-
"ಮೋಸ ಮಾಡುವ -ಏಕೈಕ ಹುನ್ನಾರವೇ-
ಈ ಹುಣ್ಣಿನ-ಹಣ್ಣು!

ಭಾರತದ-ನೆಲದ ಉದ್ದಗಲಕ್ಕೂ ರಸ್ತೆ-ಗಲ್ಲಿ ರಾಜಮಾಗ೯-ಬೀಜಮಾಗ೯
ಇಲ್ಲೆಲ್ಲಾ ಮುಹೂತ೯ ನೋಡದ-ನೋಡದೇ-ನಿತ್ಯಜೀವನಕ್ಕೇ ಸಂಚಕಾರವಾದ ಸಂಕೋಲೆಗಳಿಗೆ ಕೊನೆಯುಂಟೇ?
ಹಾಗಿದ್ದರೆ-ಮಲಹೊರುವವರ ಹಿತಕ್ಕೆ-ಮತಕ್ಕೆ ಒದಗುವ-ಬಡಬಡಿಸುವ-ಜನಕ್ಕೆ-ಜಾಣತನಕ್ಕೆ-ಮತ್ತೇಕೆ-ಈ ಮೌಢ್ಯ?
ಕನ್ನಡದ ಗಾದೆ-ಗದೆ-ಗಾದಿ(ಸಿಂಹಾಸನ) ಆಗದೇನು-
ಈ ಪಿಡುಗನ್ನೇ ಭಂಡವಾಳ ಮಾಡಿಕೊಂಡರೆ-ಭಂಡರು ಎಂತ ಅಲವತ್ತುಕೊಳ್ಳುತ್ತಾ-ತಮ್ಮಸಂಪತ್ತನ್ನುಕೊಳ್ಳುವ-
ಮಾಗ೯-ದಶ೯ನ-ದಪ೯ಣ!

ಇದೇ-ಈ ಮೇಧಾ-ವಿದ್ಯೆಯ-ಒಡಲು-ಒಲವು-ಬಲವು!
ಸರಕಾರಗಳನ್ನು,ಸಂಸ್ಥೆಗಳನ್ನು,ಸಂಘಗಳನ್ನು-ಸಂಘಟೆಗಳನ್ನು ಮೂಲೋತ್ಪಾದೆನಮಾಡಲು-ಮಾಡಿಸಲು-ಶಕ್ಯ-ಯೋಗ್ಯ-ಭಾಗ್ಯದ ಜನಬಲ-ಇಲ್ಲಿ-ಜಂಘಾಬಲವನ್ನುಕಳೆದುಕೊಂಡಿತೇ-ಬೇಕಂತಲೇ-ಕಾಲೆಳದರೆ?
ಇದನ್ನೇ ಚಿಂತಿಸಲು-ಚಚಿ೯ಸಲು-ಚಿಂತನೆ ನಡೆಸಲು ನಾವು ಈ ಸಂಗತಿಯನ್ನು ನಮ್ಮ ಈ ಲೇಖನದ-
ಸಂಗತಿಯನ್ನಾಗಿ ಮಾಡಿಕೊಂಡದ್ದು!

ಬನ್ನಿರಿ ನೀವು-ಒಡುಗರು-ಸಹೃದಯಿಗಳು-ಸಮಚಿತ್ತದವರು-ಚಿತ್ತಿಲ್ಲಿದವರು- ಚಿತ್ತಾಗದವರು-ಚಿತ್ರವಾಗಲೀ-ವಿಚಿತ್ರವಾಗಲೀ-ಅಲ್ಲದ-ಒಲ್ಲದ-ಬಲ್ಲ-ಬಲವುಳ್ಳ-ಬೆಲ್ಲದ-ಮೆಲ್ಲದ ಐಶ್ವಯ೯ದಪ್ರಭುಗಳು!
ಮಲದ ಸೋಗಿನಲ್ಲಿ-ಮಲಿನ ಎಂಬಸೆರಗಿನಾಡಿಯಲ್ಲಿ-ಕುಲೀನಕ್ಕೆ-ಲಗ್ಗೆಯಿಟ್ಟಮುಖ-ಮುಖ್ಯರೇ-ಇಲ್ಲಿ-
ಆಧ್ಯರು-ಆದ್ಯರು-ಅಧ್ವಯು೯ಗಳು!

0 comments:

Post a Comment