ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:10 PM

ಅಲೆಮಾರಿ

Posted by ekanasu

ಸಾಹಿತ್ಯ : ಜಯಶ್ರೀ ಬಿ.ಕದ್ರಿ

ಮನೆಯಿಲ್ಲದ ಅಲೆಮಾರಿಗೆ
ಬಯಲು ಆಲಯದಂತೆ
ಮಂಜು ಸುರಿದಾಗೆಲ್ಲ
ಕಾವಳವು ಕವಿದಾಗೆಲ್ಲ


ಹನಿ ಹನಿಯಾಗಿ ಸೋರಿ
ಹೋಗುವ ಜೀವದ್ರವವು

ಕಾವ್ಯ ಕವನಗಳೆಲ್ಲ
ಕಥೆಯ ಸೊಬಗುಗಳೆಲ್ಲ
ಮಹಲುಗಳ ವೈಭವದಿ

ನಿದ್ರಿಸುತ್ತಿರುವಾಗ
ಪಥಿಕನಿಗೆ ನೆರಳಿಲ್ಲ
ಹಿಡಿಕನಸು ಬೆಳಕಿಲ್ಲ...

0 comments:

Post a Comment