ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ಹೊಸಪೇಟೆ ವರದಿ

ಕರ್ನಾಟಕದ ಕಲಾಭಿಮಾನಿ ಸಂಘದ ವತಿಯಿಂದ ಪಂಪ ಕಲಾಮಂದಿರದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಿತು.ಸಂಘದ ಗೌರವಾಧ್ಯಕ್ಷರಾದ ದೀಪಕ್ ಕುಮಾರ್ ಸಿಂಗ್ ಚೆಂಡೆ ಬಾರಿಸಿ ಉದ್ಘಾಟಿಸಿದರು. ರಂಗ ಕಲಾವಿದ ಶೀನಾ ನಾಡೋಳಿ ಅವರನ್ನು ಸನ್ಮಾನಿಸಲಾಯಿತು.


ಸಂಘದ ಕಾರ್ಯದರ್ಶಿ ಡಾ. ಮೋಹನ ಕುಂಟಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಶೀನಾ ನಾಡೋಳಿ ಕಲಾಭಿಮಾನಿ ಸಂಘದ ಸ್ನೇಹಿತರ ಕಳೆದ ಎರಡು ವರ್ಷಗಳ ಕಲಾ ಚಟುವಟಿಕೆಗಳನ್ನು ಹತ್ತಿರದಿಂದ ಬಲ್ಲ ನನಗೆ ಈ ಸನ್ಮಾನ ಅತ್ಯಂತ ಸಂತೋಷವನ್ನುಂಟು ಮಾಡಿದೆ. ಇದರಿಂದ ಹೆಚ್ಚು ಕೆಲಸವನ್ನು ಮಾಡುವ ಹೊಣೆಗಾರಿಕೆಯ ಎಚ್ಚರಿಕೆಯನ್ನು ನನಗೆ ನೀಡಿದ್ದಾರೆ. ಅದನ್ನು ಶಿರಬಾಗಿ ಸ್ವೀಕರಿಸಿದ್ದೇನೆ ಎಂದು ಪ್ರತಿಕ್ರಿಯಿಸಿದರು. ಡಾ. ಬಿ.ವಿ.ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು. ಲತಾ ಗೋಪಿನಾಥ್ ಹಾಗೂ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಸಂಚಾಲಕರಾದ ಗೋವಿಂದ ಭಟ್ ಮುಖ್ಯ ಅತಿಥಿಗಳಾಗಿದ್ದರು. ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಯಕ್ಷಗಾನೀಯ ಶೈಲಿಯ ಪ್ರಾರ್ಥನೆ ಹಾಡಿದರು. ಸಂಘದ ಉಪಾಧ್ಯಕ್ಷರಾದ ಗುರುರಾಜ ಭಟ್ ಸ್ವಾಗತಿಸಿದರು.

ಸಂಘದ ಕೋಶಾಧಿಕಾರಿಯಾದ ಪಿ.ಸುಂದರನ್ ಅವರು ವಂದನಾರ್ಪಣೆ ಮಾಡಿದರು. ಸವಿತಾ ಯಾಜಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ, ಧರ್ಮಸ್ಥಳ ಇವರಿಂದ ನರಕಾಸುರ ಮೋಕ್ಷ ಎಂಬ ಯಕ್ಷಗಾನ ಪ್ರಸಂಗ ನಡೆಯಿತು.

2 comments:

Hampi Yaji said...

ಗೆಳೆಯರಾದ ಶ್ರೀ ಶೀನಾ ನಾಡೋಳಿ ಅವರಿಗೆ ಹೊಸಪೇಟೆಯಲ್ಲಿ ನಡೆದ ಸನ್ಮಾನದ ಛಾಯಾಚಿತ್ರ ಮತ್ತು ನಿಡ್ಲೆ ಶ್ರೀ ಗೋವಿಂದ ಭಟ್ ಅವರ ತಂಡದ ಯಕ್ಷಗಾನದ ಚಿತ್ರಗಳನ್ನು ತಮ್ಮ ಈ.ಕನಸು.ಕಾಂನಲ್ಲಿ ಪ್ರಕಟಿಸಿದ್ದಕ್ಕೆ ಧನ್ಯವಾದಗಳು.
ಹಂಪಿ ಯಾಜಿ
9449922800

Hampi Yaji said...

ತಮ್ಮ ಈ.ಕನಸು ಪುಟದಲ್ಲಿ ಹೊಸಪೇಟೆಯಲ್ಲಿ ನಡೆದ ಶ್ರೀ ಶೀನಾ ನಾಡೋಳಿ ಅವರಿಗೆ ನೀಡಿದ ಸನ್ಮಾನ ಕಾರ್ಯಕ್ರಮದ ಛಾಯಾಚಿತ್ರ ಹಾಗು ಯಕ್ಷಗಾನದ ಚಿತ್ರಗಳನ್ನು ಪ್ರಕಟಿಸಿದ್ದಕ್ಕೆ ಧನ್ಯವಾದಗಳು.
ಹಂಪಿಯಾಜಿ
9449922800

Post a Comment