ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ : ಪದ್ಮಾ ಭಟ್.

ಅದೆಷ್ಟೋ ಕನಸುಗಳು ತುಂಬಿರುವ ನನ್ನ ಮನವು ನಿನ್ನೆಡೆಗೆ ಮುಖಮಾಡಿ ನಿನ್ನೇ ಪ್ರೀತಿಸುತ್ತಿವೆ. ನಿನ್ನ ಜೊತೆ ಎಂದೂ ಮಾತನಾಡೋ ಆಸೆಯ ಮನಸು ನಂದು. ಬೆಳಿಗ್ಗೆ ಎದ್ದ ತಕ್ಷಣ ಅನ್ನೋದಕ್ಕಿಂತ ರಾತ್ರಿಯ ಕನಸುಗಳೂ , ಕನವರಿಕೆಗಳೂ ಎಲ್ಲವೂ ನಿನ್ನದೇ ಆಗಿರುತ್ತೆ. ನನ್ನೊಳಗಿನ ಅಂತರಾತ್ಮಕ್ಕೆ ನಿನ್ನ ಬಿಟ್ಟು ಬೇರೇ ಜಗತ್ತೆಂಬುದೇ ತಿಳೀದಿಲ್ಲ. ಯಾವಾಗಲೂ ನಿನ್ನ ಬಗೆಗೆ ಯೋಚಿಸುವ ಮನಸ್ಸು. ಪ್ರತೀ ಘಳಿಗೆಯಲ್ಲೂ ನಿನಗಾಗಿ, ನಿನ್ನ ಜೊತೆ ಮಾತನಾಡಲು ಹಂಬಲಿಸುವ ಹೃದಯಕ್ಕೆ ನೀನು ಎಷ್ಟು ಏನೇ ಕೆಲಸವಿದೆಯೆಂದು ಹೇಳಿದರೂ ಅರ್ಥವಾಗಲ್ಲ.


ನೀ ಜೊತೆಗಿರೋದೊಂದೇ ಮುಖ್ಯ.. ಬೇರೇ ಎಲ್ಲವೂ ಗೌಣವಾಗಿ ಗೋಚರಿಸುತ್ತೆ.. ಕಣ್ಣು ಬಿಡಲಾಗದಷ್ಟು ನಿದ್ರೆ ನಿನಗೆ ಬಂದಿದ್ದರೂ ಈ ನನ್ನ ಮನಕ್ಕೆ ಅರ್ಥವಾಗಬೇಕಲ್ಲ.ಅದು ಒಂದೇ ಸಮನೆ ನಿನ್ನ ಜೊತೆಗೆ ಮಾತನಾಡಬೇಕೆಂಬುದೊಂದೇ ಹಠ ಮಾಡುತ್ತೆ..ನಾನೇನು ಮಾಡಲಿ ಗೆಳೆಯಾ.. ಈ ಹೃದಯಕ್ಕೆ ನಿನ್ನ ಬಿಟ್ಟು ಒಂದು ಕ್ಷಣವೂ ಬದುಕೋ ಶಕ್ತಿ ಇಲ್ಲ. ಆಂತರಿಕವಾಗಿ ಅದರಲ್ಲಿರುವ ಭಾವನೆಗಳು ಅಳಲಾರಂಭಿಸಿಬಿಡುತ್ತೆ..ನಾನೊಬ್ಬ ಅತಿಯಾದ ಭಾವನೆಯ ಹುಚ್ಚಿಯೆಂದು ನಿನಗೆ ಅನ್ನಿಸುತ್ತಿದೆಯೇ?

ಹೌದು ಅತಿಯಾದ ಭಾವನೆಯ ಮನಸ್ಸು ನಂದು.. ನಿನ್ನ ಬಗೆಗಿನ ನನ್ನ ಪ್ರೀತಿಗೆ ಪದಗಳೇ ಸಿಗುತ್ತಿಲ್ಲ ವರ್ಣಿಸಲು..ಮನಸೆಂಬ ಕ್ಯಾಮರಾದಲ್ಲಿ ನಿನ್ನ ಚಿತ್ರವ ತೆಗೆದು ಕಟ್ಟಿಸಿಟ್ಟುಬಿಟ್ಟಿದ್ದೇನೆ..ನಿನ್ನ ಬಗೆಗೆ ನನ್ನ ಭಾವನೆ ಕಡಿಮೆಯಾಗಬೇಕೆಂದರೆ ಹೇಗೆ ಸಾಧ್ಯ.ನಾ ಬದುಕಿರೋವರೆಗೂ ನನ್ನ ಜೀವದ ಪ್ರತೀ ಕಣ ಕಣದಲ್ಲಿಯೂ ನೀನಿದ್ದೆ ಇದ್ದೀಯಾ..ಎಂದು ನಾನೇ ಇಲ್ಲವಾಗುತ್ತೇನೋ ಆಗ ಮಾತ್ರ ನನ್ನ ಭಾವನೆಯೂ ಬಹುಶಃ ಸಾಯಲಿಕ್ಕಿಲ್ಲ..ಏಕೆಂದರೆ ಅದು ನಿನ್ನನ್ನು ಎಷ್ಟು ಪ್ರೀತಿಸುತ್ತವೆಯೆಂದರೆ..ನಿನಗಾಗಿ ಜೀವವನ್ನೆ ಕೊಡುವಷ್ಟು..ನಾ ನನ್ನ ಬಗೆಗೆ ಒಂದು ಕ್ಷಣವಾದರೂ ಯೋಚಿಸುತ್ತೇನೋ ಗೊತ್ತಿಲ್ಲ ಆದರೆ ನಾ ಯೋಚಿಸಲು ಹೊರಟ ಕ್ಷಣವೆಲ್ಲವೂ ನಿನ್ನದೇ ಆಗಿರುತ್ತದೆ..

ಪುಟ್ಟ ಮಗುವಿನಂತೆ ನೀನೇ ಬೇಕೆಂದು ಹಠ ಮಾಡುವ ಈ ನನ್ನ ಮನಸ್ಸನ್ನು ನಿನ್ನ ಮಗುವಿನಂತೆ ನೋಡಿಕೊಳ್ಳುವೆಯಾ? ಗೆಳೆಯಾ ನನಗಾಗಿ ಸಮಯವನ್ನು ಮೀಸಲಿಡುವೆಯಾ... ನೀ ಬ್ಯೂಸಿಯಾಗಿರೋ ಪ್ರತೀ ಕ್ಷಣವೂ ಈ ನನ್ನ ಅರ್ಥವಾಗದ ಹೃದಯವು ನಿನ್ನ ಜೊತೆಗೆ ಮಾತನಾಡಲು, ಪ್ರೀತಿಯಿಂದ ಹಂಬಲಿಸುತ್ತಿರುತ್ತೆ..ನೀನು ಜೀವನದಲ್ಲಿ ಎಷ್ಟು ಸಾಧಿಸುವೆಯೋ , ಆದರೆ ನಿನ್ನ ಜೊತೆಗೆ ಪ್ರತೀ ಹಂತದಲ್ಲಿಯೂ ನಾನಿದ್ದೀನೆಂಬುದನ್ನು ಮರೆಯದಿರು.

ಹೇ ಈ ಪ್ರೀತಿ ಎಷ್ಟು ನಿನಗಾಗಿ ಬಯಸುತ್ತೆ ಗೊತ್ತಾ..? ಬದುಕಿನ ಪ್ರತೀ ಹಂತದಲ್ಲಿಯೂ ನಿನ್ನ ಒಳಿತನ್ನು, ನಿನ್ನ ಸಂತೋಷವನ್ನೇ ಕಾಣಬೇಕೆನ್ನುತ್ತಿರುತ್ತೆ..ಈ ನನ್ನ ಬದುಕಿನ ಸಾಗರದಿ ನೀನನ್ನ ಬೆಲೆ ಕಟ್ಟಲಾಗದ ಮುತ್ತು ಕಣೋ.. ಅಷ್ಟು ಶುಭ್ರ ನೀನು.. ಬಾಳಬೇಕು ನಿನ್ನ ಜೊತೆಗೆ ನಾ ಬದುಕಿರುವಷ್ಟು ದಿನ..ಅರ್ಥವಾಗದೇ ಈ ನಿನ್ನ ಮನಕ್ಕೆ..ಅರ್ಥವಾಗದೇ ಉಳಿಯಲಾರವು..ಏಕೆಂದರೆ ನಿನ್ನ ಮನದ ಕಣಕಣದಲ್ಲಿಯೂ ಇರುವ ನನಗೆ ಗೊತ್ತು ನೀನು ಎನೆಂದು..ನನಗೂ ತಿಳಿಯುತ್ತೆ..ನಿನ್ನ ಮೇಲೆ ಕೋಪ ಮಾಡಿಕೊಳ್ಳಬಾರದೆಂದು..ಆದರೆ ನನ್ನ ನಿನ್ನ ಬಗೆಗಿನ ಪ್ರೀತಿ ಅಷ್ಟು ಅಟ್ಟಿಯಾದದ್ದು..ಏಕೆಂದರೆ ನಾ ಆ ಪ್ರೀತಿಯನ್ನು ಎಷ್ಟು ಪ್ರೀತಿಸುತ್ತೇನೆಂದರೆ ನನ್ನ ಜೀವಕ್ಕಿಂತ ಹೆಚ್ಚಾಗಿರುವ ನಿನ್ನ ಮೇಲೆಯೇ ಒಂದೊಂದು ಬಾರಿ ತುಸು ಮುಂಗೋಪ ಮಾಡಿಕೊಳ್ಳುತ್ತೇನೆ..ಎಂದಿಗೂ ತಿಳಿಯಬೇಡ... ಈ ಮುಗ್ಧ ಮನಸಿನ ತುಡಿತವ ಪೂರೈಸು ಗೆಳೆಯಾ
ನನಗಾಗಿ ಒಂದಷ್ಟು ಸಮಯವ ಕೊಟ್ಟುಬಿಡು..

0 comments:

Post a Comment