ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:24 PM

ನನ್ನ ಕನಸು...

Posted by ekanasu

ಸಾಹಿತ್ಯ : ಪದ್ಮಾ ಭಟ್

ನಾನು ಕನಸು ಕಾಣುವುದೆಲ್ಲವೂ ನಿನ್ನದೇ
ಹಂಬಲಿಸುವ ಹೃದಯಕ್ಕೆ
ನಿನ್ನಯ ಪ್ರೀತಿಯ ಮಾತು ಬೇಕು
ಕಂಡ ಕನಸುಗಳಿಗೆ ನೀನಿದ್ದರೆ...


ಹಾಡುವ ರಾಗದ ಸಾಲುಗಳು
ನಿನ್ನ ಬರೆದಿರಬೇಕು
ರಂಗವಲ್ಲಿಯ ರಂಗಿಗೆ, ನಿನ್ನ ಮುಖವೇ
ಬರೆದಿದ್ದರೆ ನೋಡುವ ನನ್ನ ಕಂಗಳು

ಅದೆಷ್ಟು ಪುಣ್ಯ ಮಾಡಿದ್ದವೋ
ಹುಟ್ಟುವ ಎಲ್ಲ ಕನಸಿನಲ್ಲಿಯೂ ನೀನೇ ಇದ್ದೀಯಲ್ಲ
ಮನಸ್ಸಿಗೆ ನಿನ್ನ ಬಿಟ್ಟು ಬೇರೆ ಲೋಕವೆಂಬುದೇ ತಿಳಿಯದಾಗಿದೆ
ನೀನೇ ಜಗತ್ತೆಂದು ನಿನ್ನೊಳಗೇ ಬಂಧಿಯಾಗಿಬಿಟ್ಟಿದೆ!!!

0 comments:

Post a Comment