ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:32 PM

"ನ್ಯಾರಾ"

Posted by ekanasu

ವಿಚಾರ

ಇದೊಂದು ಹಿಂದೀ ಭಾಷೆಯ ಎರವಲುಪದ ನಾವು ಕನ್ನಡದ ಬರವಣಿಗೆಗೆ ಎಳದು ತಂದದ್ದು.
ಎರವಲು ಬೇಕೆ ಎಂದರೆ-ತೆವಲು-ತೆವಳಲು ಮಾಡಿದ್ದೇ ಕಾರಣ ಎಂತಲೇ ಹೇಲಲೇ ಬೇಕು.
ಈಗಂತೂ-ಭಾರತದ ಮೂಲೆಮೂಲೆಯಲ್ಲಿಯೂ
ಆವಾಜ್,ನ್ಯಾರಾ-ಇದೇ ಪ್ಯಾರೀ ಚೀಜ್!
ಆಂಗ್ಲಭಾಷೆಯ "ಸ್ಲೋಗನ್"-ಗನ್ ಆಯಿತು!
ಕೂಗು-ಗದ್ದಲ ಇದರದೇ ಈಗಗದ್ದುಗೆ.
ಅದೇ ಗದೆ-ವಧೆಈಗಂತೂ ಸರಕಾರ ಚಿಕ್ಕದರಿಂದ ಹಿಡಿದು-ಘನದವರೆಗೆ-ನೀರನ್ನು ರಾಷ್ಟ್ರ ನಿಮಾ೯ಣ-ನಿನಾ೯ಮ-ನರಂ ಮಾಡಲು ತಾತ್ವಿಕವಾಗಿ-ತಾಕಿ೯ಕವಾಗಿ-ಸಾಂಘಿಕವಾಗಿ ಮಾಡುವ-ಮಾಡಿಸುವ ನೀತಿಗೆ ಅಡಿಯಿಟ್ಟಿದೆ-ಅಡಿಪಾಯಹಾಕಿದೆ.


"ನೀರು-ಆಪಃ-ಆಪ್ಯಾಯಮಾನವಾದದ್ದು-ಮಾನವಾದದ್ದು-ಮೌನವಾದದ್ದು-ಈಗ
ಅಪಾಯಮಾನ-ಅಪಮಾನ-ಅನುಮಾನದ-ಅವಮಾನದ ಆಸ್ತಿಯಾಗಿದೆ-ಆಗಿಸಲ್ಪಟ್ಟಿದೆ.


ಇದೇ ನೀರು ನೀರಿಳಿಸಿದ ನೀರಸ-ವಿರಸ ಸರಸ-ಸರಸರ ಸರಿದ "ಸರಿತವಾದ" ಅಮೋಘ ಚರಿತ್ರೆ!

ಆಧ್ಯಾತ್ಮಿಕದ ಕೆಲಸಗಳಲ್ಲಿ ಮಂತ್ರಸ್ನಾನ-ನಿರಿಲ್ಲದಿದ್ದರು-ಮಂತ್ರಪೂವ೯ಕ ಆ ಜಳಕದ-ಪುಳಕ!
ಪುನಃ ಪೂಜಾ ಅಥವಾ ಇನ್ನಾವುದೇ ಕಾರಣಕ್ಕೆ-ಮಂತ್ರಪೂವ೯ಕ ಧೂಪ-ದೀಪ-ಮಂಗಳರತಿ-ಎಲ್ಲಕ್ಕೂ ನೀರೇ ಆಗಿತ್ತು-ಈಗ ನೀರೇ ಇಲ್ಲವಾದಮೇಲೆ-ಅವೆಲ್ಲಾ ಸತ್ತಂತೆಯೇ ಅಲ್ಲವೇನು?


ಬದುಕಿನಲ್ಲಿ ಬದುಕಿ ಇನ್ನಿತರರ-ಬದುಕನ್ನು ಕೆದಕಿ-ಕೆಡಿಸಿ-ಹೊಡಿಸಿ ಪ್ರಾಣಬಿತ್ತ ಆಮಾದರಿಯ ಜೀವಕ್ಕೆ ಬೆಂಕಿ ಇಡುವ ಮುನ್ನ-ಬಾಯಿಗೆ ಉದ್ಧಾರಕ್ಕೇ ಹಾಕುತ್ತಿದ್ದ "ಗಂಗಾಜಲವೂ" ಇಲ್ಲದೆ-ಗಂಜಲವನ್ನೇ ಹಾಕಿದರೂ ಸರಿಎನ್ನುವ ಕಾಲ ಬಂದಿತು!


ಅಂದು ಪುರಾಣಯುಗದಲ್ಲಿ ಭಗೀರಥ ಆಕಾಶದಿಂದ ಧರೆಗೆ ಗಂಗೆಯನ್ನು ತಂದ!
ಇಂದು ಗಂಗೆ ಧರೆ ಉರಿಯುತ್ತಿರುವುದನ್ನು ಕಣ್ಣಾರೆ ಕಂಡು,
ಮತ್ತೆ ಆಕಾಶಕ್ಕೇ ಓಡಿದಳು!


"ನಾನ್ಯಃ ಪಂಥಾ ವಿದ್ಯತೇ"

ನೀರಿಲ್ಲದ-ನೀರೊಲ್ಲದ-ನೀರುನಿಲ್ಲದ ಈ ಜೀವ ಯಾರಿಗೆ-ಏತಕ್ಕೆ?
ಇದೇ ಜನದ ಮುಂದೆ ಇರುವ ಇರಿಸಿರುವ ನಮ್ಮ ಚಿಂತೆ ಚಿಂತನೆಯ
ಆಳ-ಅಳಲು-ತೊಳಲು!
**********************
ಪರಾತ್ಪರ "ತೋಯ" ದಿಂದಲೂ ಪೂಜೆ ಸಾಕೆಂದ!
ಆ ತೊಯವೇ ಮಾಯ!
**********************
"ಬ್ರಹ್ಮ ಸತ್ಯ ಜಗನ್ಮಿಥ್ಯ" ಇದೇ ಅಲ್ಲವೇ ನೀರಿನ ಸಾರ?
*************************
"ಆಪಃ" ನೀನು ಮಾಡಿದ ಪಾಪವೇನೂ?
****************************
- ಆರ್. ಎಮ್.ಶಮ೯. ಮಂಗಳೂರು.

0 comments:

Post a Comment