ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:29 PM

ಶನಿವಾರ ಯಕ್ಷಗಾನ

Posted by ekanasu

ಪ್ರಾದೇಶಿಕ ಸುದ್ದಿ : ಹೊಸಪೇಟೆ ವರದಿ
ಕರ್ನಾಟಕ ಕಲಾಭಿಮಾನಿ ಸಂಘ ರಿ. ಪಯಸ್ವಿನಿ ಶಾಂತಿನಗರ ಹೊಸಪೇಟೆ ಇದರ ಆಶ್ರಯದಲ್ಲಿ ಆ.25 ಶನಿವಾರ ಸಂಜೆ 7ರಿಂದ ರಾತ್ರಿ 11.30ರ ತನಕ ಹೊಸಪೇಟೆ ಪಂಪ ಕಲಾ ಮಂದಿರ ಅಮರಾವತಿಯಲ್ಲಿ ನರಕಾಸುರ ಮೋಕ್ಷ ಯಕ್ಷಗಾನ ಪ್ರದರ್ಶನ ನಡೆಯಲಿದೆ.ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ - ಧರ್ಮಸ್ಥಳ ಯಕ್ಷಗಾನ ಪ್ರಸ್ತುತಪಡಿಸಲಿದ್ದಾರೆ.ರಂಗತಜ್ಞ ಶೀನಾ ನಾಡೋಳಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಬಿ.ವಿ.ಭಟ್ ವಹಿಸುವರು. ಅತಿಥಿಗಳಾಗಿ ಹೊಸಪೇಟೆ ನಗರ ಸಭೆಯ ಆಯುಕ್ತ ರಂಗಸ್ವಾಮಿ, ಹೆಚ್ ಶ್ರೀನಿವಾಸ್ ಭಾಗವಹಿಸುವರು ಎಂದು ಸಂಘದ ಕಾರ್ಯದರ್ಶಿ ಡಾ.ಮೋಹನ ಕುಂಟಾರ್ ತಿಳಿಸಿದ್ದಾರೆ.

0 comments:

Post a Comment