ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ದೈನಂದಿನ ಕಾದಂಬರಿ : ಭಾಗ - 18

ಅಧ್ಯಾಯ 6

ವಿಷಯ ಬಹಳ ಮುಖ್ಯವಾದುದನ್ಸುತ್ತೆ ಪೂರ್ತಿಯಾಗಿ ನಿಮ್ಮನ್ನು ನೀವು ಇನ್ವಾಲ್ವ್ ಮಾಡಿಕೊಂಡಂತೆ ಇತ್ತು. ಟೈಂ ನೋಡಿದ್ರಾ... ಮೀಟಿಂಗ್ಗೆ ಬೇಕಿರೋದೆಲ್ಲಾ ಆರೆಂಜ್ ಆಗಿದೆ ತಾನೆ?
ಅವನ ಮಾತುಗಳು ಎತ್ತಿ ಒಗೆದಂತಾಯಿತು. ಎದ್ದು ನಿಂತು ರಾಮರಾಜನತ್ತ ನೋಡಿದಳು. ಎಲ್ಲವೂ ಸಿದ್ಧವಾಗಿದೆ ಅನ್ನುವಂತೆ ತಲೆಯಾಡಿಸಿದ ಬಳಿಕ, ರೆಡಿಯಾಗಿದೆ ಸಾರ್ ಅಂದಳು.


ಸರಿ ನಡೆಯಿರಿ ಆತ ಮೀಟಿಂಗ್ ಹಾಲ್ಗೆ ನಡೆದಾಗ ಸಂಬಂಧಪಟ್ಟ ಫೈಲುಗಳ ಜೊತೆಗೆ ಶೀಲಾ, ಮನಸ್ವಿತಾಳ ಹತ್ತಿರ ಬಂದು ನಿಂತಾಗ ಮೇಲ್ ಬಾಕ್ಸ್ನ್ನು ಕ್ಲೋಸ್ ಮಾಡಿ ಮೀಟಿಂಗ್ ರೂಂಗೆ ನಡೆದಳು.
ಆಗಲೇ ಎಲ್ಲಾ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ಗಳು ಸೇರಿದಂತೆ ಐದಾರು ಮಂದಿ ಕುಳಿತಿರುವುದು ಮತ್ತು ನಿಖಿಲ್ ಅವರನ್ನುದ್ದೇಶಿಸಿ ಮಾತನಾಡುವುದು ತಿಳಿಯಿತು.

ಶೀಲಾ ಲ್ಯಾಪ್ ಟಾಪ್ ತೆರೆದು ಮೀಟಿಂಗ್ನ ವಿಷಯಗಳನ್ನು ಕಂಪ್ಯೂಟರ್ಗೆ ಸೇರಿಸಲು ತಯಾರಾಗಿದ್ದಳು. ಫೈಲುಗಳೆನ್ನೆಲ್ಲಾ ನಿಖಿಲ್ನ ಎದುರು ಇರಿಸಿ ಕುಳಿತಾಗ, ನಿಮಗೆಲ್ಲಾ ವಿಷಯ ತಿಳಿದಿರಬೇಕಲ್ವ? ಪೀಠಿಕೆಯೆಂಬಂತೆ ಹೇಳಿದಾಗ ಮನಸ್ವಿತಾಳಿಗೆ ತಿಳಿದಿರಲಿಲ್ಲ. ತಲೆಯಾಡಿಸುವುದು ಸೌಜನ್ಯವಲ್ಲವೆಂದು ತಿಳಿಯಿತು.
ಮಾರ್ಕೆಟಿಂಗ್ ಎಗ್ಸಿಕ್ಯೂಟಿವ್ ರಾಜೇಂದ್ರ ಟೈಯನ್ನು ಸರಿಪಡಿಸಿಕೊಂಡು,ಈಗ ಸಿಕ್ಕಿರೊ ಈ ಒಪ್ಪಂದ ನಮ್ಮ ಕಂಪೆನಿಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಬಹುದಲ್ಲವೆ? ಅಂದಾಗ ನಿಖಿಲ್ನ ಮುಖದಲ್ಲಿ ಗಂಭೀರತೆ ಮಾಯವಾಗಿ ನಗು ಮೂಡಿತು.

ಮಿಸ್ಟರ್ ರಾಜೇಂದ್ರ, ಎತ್ತರಕ್ಕೆ ಎರೋದು ಬಾವುಟ, ನಿಖಿಲ್ ಎಂಟರ್ಪ್ರೈಸೆಸ್ನ ಪತಾಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಪತಾಕೆಯನ್ನು ಹಾರಿಸಿದೆಯಲ್ಲವೆ? ಇನ್ನು ಉಳಿದಿರುವುದು ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಗ್ರಾಸ್ಪ್ ಮಾಡೋದು ಅಷ್ಟೆ ಮಾತಿನ ಕೊನೆಗೆ ಮೊದಲಿನ ಗಂಭೀರತೆ ಬಂದಾಗ ಮನಸ್ವಿತಾ ನಿಖಿಲ್ನ ಮುಖ ನೋಡಿದಳು.

ಒಪ್ಪಂದ ಆಗಿರೋದು ನವ್ಯಕುಮಾರ್ ಮತ್ತು ನಿಖಿಲ್ ಸಂಸ್ಥೆಗೆ. ಇದರಿಂದ ನಮ್ಮ ಆಹಾರೋದ್ಯಮದಕ್ಕೆ ಇನ್ನಷ್ಟು ಬೆಲೆ ಬರಲಿದೆ. ಅವರು ಹೇಳೋ ಪ್ರಕಾರ ಭಾರತದ ಎಲ್ಲಾ ಡ್ರೈಪ್ರುಟ್ಸ್ಗಳ ರಫ್ತನ್ನು ನಾವೇ ಮಾಡಬೇಕಾಗುತ್ತದೆ. ಆದ್ದರಿಂದ ಈಗ ನಮ್ಮಲಿರೊ ಕೊಬ್ಬರಿ ಮತ್ತು ಗೋಡಂಬಿಗಳ ಜೊತೆಗೆ ದ್ರಾಕ್ಷಿ, ಖರ್ಜೂರ ಮತ್ತು ಅಂಜೂರಗಳನ್ನು ನಾವು ತರಿಸಿಕೊಂಡು ಅವುಗಳ ಸಂಸ್ಕರಣೆ ಮತ್ತು ಪ್ಯಾಕಿಂಗ್ ನಮ್ಮಲ್ಲೇ ಆಗುವುದನ್ನು ನೋಡಿಕೊಳ್ಳಬೇಕು. ಖರ್ಜೂರಕ್ಕಾಗಿ ಈಗಾಗಲೇ ಕೊಲ್ಕತ್ತಾದ ಒಂದು ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಒಡಂಬಡಿಕೆಗಾಗಿ ಕೇಳಿಕೊಂಡಿದ್ದೇವೆ. ಇನ್ನು ದ್ರಾಕ್ಷಿ ನಮ್ಮಲ್ಲೇ ಬೆಳೆಯುವುದರಿಂದ ಮುಂದಿನ ವಾರ ಹಾಸನದ ಒಂದು ಸಂಸ್ಥೆಯನ್ನು ಭೇಟಿಯಾಗಬೇಕಾಗಿದೆ. ಹಾಗೇ ಅಂಜೂರ ಕೂಡ ನಮ್ಮಲ್ಲಿಯೇ ಬೆಳೆಯುವುದರಿಂದ ಅದನ್ನು ಪಡೆಯೋದು ಸುಲಭ.

ಸಾರ್, ಈಗಾಗ್ಲೆ ನಾವು ದ್ರಾಕ್ಷಿ ಮತ್ತು ಅಂಜೂರಗಳನ್ನು ನೇರವಾಗಿ ಕೃಷಿಕರಿಂದ ಖರೀದಿಸುವ ಪ್ಲಾನ್ ಹಾಕಿಕೊಂಡಿದೇವಲ್ಲವೆ? ಅದಕ್ಕೆ ಬೇಕಾದ ಪ್ರೊಜೆಕ್ಟನ್ನು ಸಿದ್ಧ ಪಡಿಸಿದ್ದೇವೆ. ನಮಗೆ ಇಂಪ್ಲಿಮೆಂಟ್ ಮಾಡುವುದಕ್ಕೆ ಐದಾರು ಮಂದಿಯನ್ನು ನಿಯುಕ್ತಿಗೊಳಿಸಲು ತಯಾರಿ ನಡೆಸಿದ್ದೇವಲ್ಲವೆ? ಪರ್ಸನೆಲ್ ಡಿಪಾರ್ಟ್ ಮೆಂಟ್ ನ ಶರ್ಮಾ ಪ್ರೊಜೆಕ್ಟ್ನ ಅಭಿವೃದ್ಧಿಯ ಬಗ್ಗೆ ಹೇಳಿದಾಗ ನಿಖಿಲ್ ಹೌದೆನ್ನುವಂತೆ ತಲೆಯಾಡಿಸಿ, ಮನಸ್ವಿತಾ, ನಾವು ಇವನ್ನೆಲ್ಲಾ ಬೇರೆ ಕಡೆಯೂ ಅಳವಡಿಸುವುದು ಒಳ್ಳೆಯದಲ್ಲವೇ ಎಂದು ಕೇಳಿದ.

ಸರ್, ಈಗಾಗಲೇ ಅದನ್ನು ಬಜೆಟ್ನಲ್ಲಿ ಸೇರಿಸಿದ್ದೇವೆ. ಆದರೆ ಅದನ್ನು ಯಾವ ಪ್ರಾಜೆಕ್ಟ್ಗೆ ಎಷ್ಟೊಂದು ವ್ಯಯಿಸಬೇಕೆನ್ನುವುದು ಸ್ಪಷ್ಟವಾಗಿ ನಮೂದಿಸಿಲ್ಲ. ಅದಲ್ಲದೆ ಆದಿತ್ಯ ಗ್ರೂಪ್ಸ್ ಜೊತೆಗೆ ನಮ್ಮ ವ್ಯವಹಾರ ಬಗ್ಗೆ ಸೇಲ್ಸ್ ಇನ್ಕಂ ಅನ್ನು ತೋರಿಸಿದ್ದೆವೆಲ್ಲಾ? ಅದು ನಮ್ಮ ಆದಾಯವನ್ನು ಕಡಿಮೆಗೊಳಿಸಿದಂತಾಗುವುದಿಲ್ಲವೆ?

ಮನಸ್ವಿತಾ, ಈ ವಿಷಯವಾಗಿ ನಾವು ಇನ್ನೊಮ್ಮೆ ಮೀಟಿಂಗ್ ಕರೆಯುವುದಿದೆ. ಸದ್ಯ ನಾವು ಒಪ್ಪಿಕೊಂಡಿರೊ ಎಲ್ಲಾ ಡ್ರೈ ಪ್ರುಟ್ಸ್ಗಳ ಪ್ರೊಡೆಕ್ಟ್ನ್ನು ಮುಂದುವರಿಸಿ ಒಂದು ತಿಂಗಳೊಳಗಾಗಿ ನಮ್ಮಿಂದಲೇ ರಫ್ತಾಗುವ ಹಾಗೆ ನೋಡಿಕೊಳ್ಳಬೇಕು. ಅಲ್ಲದೆ, ಲೋಕಲ್ ಮಾರುಕಟ್ಟೆಗೂ ನಮ್ಮ ಜಾಲ ವಿಸ್ತರಿಸಬೇಕು ಅವನ ಮಾತಿಗೆ ಅಲ್ಲಿ ಸೂಜಿ ಕೆಳಗೆ ಬಿದ್ದರೂ ಕೇಳಿಸುವಷ್ಟು ಸ್ಪಷ್ಟ ಮೌನ ನೆಲೆಸಿತ್ತು.

ಸರ್, ಒಂದು ಸಣ್ಣ ಕೋರಿಕೆ...
ನಿಖಿಲ್ ಮನಸ್ವಿತಾಳಿಗೆ ಮಾತನ್ನು ಮುಂದುವರಿಸಲು ಅನುಮತಿ ನೀಡಿದ.
ಸರ್, ನಮ್ಮ ನೆರೆ ರಾಜ್ಯ ಕೇರಳದಲ್ಲಿ ಹೈಬ್ರಿಡ್ ಬೆಳೆಯಾಗಿ ಪಪ್ಪಾಯಿಯನ್ನು ಬೆಳೆಸುತ್ತಿದ್ದೇವಲ್ಲವೆ? ಬೇರೆ ಪ್ರದೇಶಗಳಲ್ಲಿ ಈಗ ಅತೀ ಮುಖ್ಯ ಡ್ರೈಪ್ರುಟ್ಸ್ಗಳ ಸಾಲಿಗೆ ಇದನ್ನು ಸೇರಿಸಲಾಗಿದೆ. ಈ ಬಗ್ಗೆ ಇಂಗ್ಲಿಷ್ ನಿಯತಕಾಲಿಕ ಒಂದು ಲೇಖನವನ್ನು ಪ್ರಕಟಿಸಿತ್ತು. ಹೆಚ್ಚಾಗಿ ಹಲ್ವಾ, ಸ್ವೀಟ್ಸ್, ಬ್ರೆಡ್ ಮತ್ತು ಬಟರ್ ಟಿನ್ಗಳಲ್ಲಿ ದ್ರಾಕ್ಷಿ ಗೋಡಂಬಿಗಳ ಜೊತೆಗೆ ಬಣ್ಣ ಬಣ್ಣದ ಈ ಪಪ್ಪಾಯಿಯ ಒಣಗಿದ ತುಂಡುಗಳನ್ನು ಸೇರಿಸಲಾಗುತ್ತದೆ. ನಮ್ಮ ಡ್ರೈಪ್ರುಟ್ಸ್ಗಳಲ್ಲಿಯೂ ಇದಕ್ಕೊಂದು ಸ್ಥಾನ ಸೃಷ್ಟಿಸಿದರೆ ಉತ್ತಮವಲ್ಲವೆ?

ನಿಖಿಲ್ಗೂ ನಿಯತಕಾಲಿಕದಲ್ಲಿ ಆ ವಿಷಯವನ್ನು ಓದಿದ ನೆನಪಿತ್ತು. ಮನಸ್ವಿತಾ ಸರಿಯಾದ ಸಮಯದಲ್ಲಿ ಅದನ್ನು ಪ್ರಸ್ತಾಪಿಸಿದ್ದು ಸಮಂಜಸವಾಗಿತ್ತು. ಕಚ್ಚಾವಸ್ತು ಖರೀದಿಯ ಭಾವನಾಳಿಗೆ ಪಪ್ಪಾಯಿ ಬೆಳೆ ಮತ್ತು ಅವುಗಳ ಖರೀದಿಯ ಬಗ್ಗೆ ತಿಳಿದುಕೊಳ್ಳುವಂತೆ ಸೂಚಿಸಿದ ನಿಖಿಲ್.

- ಅನು ಬೆಳ್ಳೆ.
....... ಮುಂದಿನ ಸಂಚಿಕೆಗೆ........

0 comments:

Post a Comment