ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ಮೂಡಬಿದಿರೆ ವರದಿ
ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ(ರಿ.) ಮಂಗಳೂರು ಮತ್ತು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಮೂಡಬಿದಿರೆ ಇದರ ಸಂಯುಕ್ತಾಶ್ರಯದಲ್ಲಿ 19ನೇ ವರುಷದ ಮಕ್ಕಳ ಧ್ವನಿ - 2012 ಮಕ್ಕಳ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಮ್ಮೇಳನ ವಿದ್ಯಾಗಿರಿಯ ಶಿವರಾಮ ಕಾರಂತ ವೇದಿಕೆಯಲ್ಲಿ ಪ್ರಾರಂಭಗೊಂಡಿತು.ಎರಡು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಮಹಾಲಕ್ಷ್ಮೀ ಉಪ್ಪಿನ ಕುದ್ರು ವಹಿಸಿದ್ದರು.ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖಾ ಸಚಿವ ಅಪ್ಪಚ್ಚು ರಂಜನ್ ಭಾಗವಹಿಸಿದ್ದರು.


ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿಯ ಕುರಿತಾದ ಜ್ಞಾನ ಪ್ರತಿಯೊಬ್ಬರಿಗೂ ಇರಬೇಕು.ವಿದ್ಯಾರ್ಥಿಗಳು ಈ ದಿಸೆಯಲ್ಲಿ ಚಿಂತಿಸುವ ಅನಿವಾರ್ಯತೆ ಇಂದಿದೆ ಎಂದರು. ಭಾಷಾಭಿಮಾನ ಮುಖ್ಯ ಎಂದ ಆಳ್ವರು ವಿದ್ಯಾರ್ಥಿಗಳಲ್ಲಿ ಭಾಷೆ, ಸಾಹಿತ್ಯದ ಕುರಿತಾದ ಆಸಕ್ತಿ ಉಂಟಾಗುವಂತೆ ಮಾಡುವತ್ತ ಎಲ್ಲರು ಚಿಂತಿಸಬೇಕಾಗಿದೆ ಎಂದರು.

ಧರ್ಮದರ್ಶಿ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಗಳಾಗಿದ್ದರು. ಮಕ್ಕಳ ಸಾಹಿತ್ಯ ಸಂಗಮದ ಕಾರ್ಯದರ್ಶಿ ಬಿ.ಶ್ರೀನಿವಾಸ್ ರಾವ್, ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಪ್ರೊ.ಅನಂತ ಪದ್ಮನಾಭ ರಾವ್ ಉಪಸ್ಥಿತರಿದ್ದರು.

ಪ್ರದೀಪ್ ಜಿ.ಬಿ ಸ್ವಾಗತಿಸಿದರು. ಅನನ್ಯ ಬಳಂತಿಮೊಗರು ಕಾರ್ಯಕ್ರಮ ನಿರ್ವಹಿಸಿದರು.ಸಂಗೀತ ಎನ್.ಶೆಟ್ಟಿ ವಂದಿಸಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು. ಕಥೆ ಹೇಳುವುದು ಮತ್ತು ಅಭಿನಯ ಗೀತೆ, ಜನಪದ ಗೀತ ಗಾಯನ, ಭಾವಗೀತೆ ಮತ್ತು ಗಾಯನ, ರಸಪ್ರಶ್ನೆ, ಆಶುಭಾಷಣ, ಆಶು ನಟನೆ ಸ್ಪರ್ಧೆಗಳು ನಡೆದವು.

ನಾಳೆ ಸಮಾರೋಪ: ಎರಡು ದಿನಗಳ ಮಕ್ಕಳ ಧ್ವನಿ - 2012ರ ಸಮಾರೋಪ ಸಮಾರಂಭ ನಾಳೆ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕಲ್ಕೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

0 comments:

Post a Comment