ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ಮಂಗಳೂರು ವರದಿ

ಮಂಗಳೂರು ಆಕಾಶವಾಣಿ ಕೇಂದ್ರದ ವಾರದ ಅತಿಥಿ ಕಾರ್ಯಕ್ರಮದಲ್ಲಿ ಅಗಸ್ಟ್ 26ರಂದು ಭಾನುವಾರ ಬೆಳಿಗ್ಗೆ 8.40ಕ್ಕೆ ಹಿರಿಯ ಯಕ್ಷಗಾನ ವಿಮರ್ಶಕ, ಯಕ್ಷಗಾನ ಛಂದೋಂಬುಧಿ ಕರ್ತೃ ಶೀಮಂತೂರು ಡಾ. ಎನ್. ನಾರಾಯಣ ಶೆಟ್ಟಿ ಅವರು ಭಾಗವಹಿಸಲಿದ್ದಾರೆ. ಯಕ್ಷಗಾನದ ಸ್ವರ, ತಾಳ, ಲಯಕ್ಕೆ ಮಾತ್ರಾಗಣ ವಿಶೇಷತೆಯ ಲಾಕ್ಷಣಿಕ ಗ್ರಂಥ ಬರೆದು ಶಾಸ್ತ್ರಬದ್ಧ ಕಲಿಕೆಗೆ ಅನುವು ಮಾಡಿದ ಯಕ್ಷಗಾನ ಛಂದೋಂಬುಧಿ ಬರೆದ ಇವರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯವು ಡಿಲಿಟ್ ಗೌರವ ನೀಡಿದೆ.


ಅಭಿನವ ನಾಗವರ್ಮನೆಂದೇ ಖ್ಯಾತರಾದ ಡಾ. ಶೆಟ್ಟರು ಕವಿ, ವಿಮರ್ಶಕ, ಭಾಷಾ ಶಾಸ್ತ್ರಜ್ಞ, ಭಾಗವತ, ಛಾಂದಸ, ಅದ್ಯಾಪಕ, ಆಯುರ್ವೇದ ಪಂಡಿತ, ಕಸಿಕೃಷಿಕ, ಕಾವ್ಯವಾಚನಕಾರ ಹೀಗೆ ಬಹುಮುಖ ವ್ಯಕ್ತಿತ್ವ ಹೊಂದಿದವರು. ತಮ್ಮ ಖಾಸ್ಬಾತ್ನೊಂದಿಗೆ ಜೀವನದ ಸಾಧನೆಗಳನ್ನು ಈ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇವರನ್ನು ಪ್ರಸಾರ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ.

ಮುಂದಿನ ವಾರದ ಅತಿಥಿಯಾಗಿ ಭಾರತ್ ಕೋ - ಅಪರೇಟಿವ್ ಬ್ಯಾಂಕ್ನ ಮಾಜಿ ಕಾರ್ಯಾಧ್ಯಕ್ಷರು ಹಿರಿಯ ಸಮಾಜ ಸೇವಕ ಜಯ ಸಿ. ಸುವರ್ಣ ಅವರು ಭಾಗವಹಿಸಲಿದ್ದಾರೆ.

0 comments:

Post a Comment