ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ - ಮಂಗಳೂರು ವರದಿ

ರಂಗಭಾರತಿ ಸಂಸ್ಥೆಯ 'ಮನೆಮನೆಗೆ ಭರತನಾಟ್ಯ' ಸರಣಿ ಕಾರ್ಯಕ್ರಮದ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಾಲ ಕಲಾವಿದೆ, ವಿ ಗೀತಾ ಸರಳಾಯರ ಶಿಷ್ಯೆ ಕು ಅಯನಾ. ವಿ. ರಮಣ್ ಅವರ ನೃತ್ಯ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಸೆ. 2ರಂದು ಸಂಜೆ 5.30ಕ್ಕೆ ಚೆನ್ನೈಯ ಮೈಲಾಪುರ್ನಲ್ಲಿರುವ ಶ್ರೀನಿವಾಸ ಶಾಸ್ತ್ರೀ ಹಾಲ್ನಲ್ಲಿ ನಡೆಯಲಿದೆ.ಪೇಜಾವರ ಮಠದ ಶ್ರೀ ವಿಶ್ವೇಶ್ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು ಪದ್ಮಶ್ರೀ ಡಾ. ಕದ್ರಿ ಗೋಪಾಲ್ನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.


ಚೆನ್ನೈಯ ನಾರದ ಗಾನ ಸಭಾದ ಕಾರ್ಯದರ್ಶಿ ಆರ್. ಕೃಷ್ಣಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು ಚೆನ್ನೈ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಪಿ. ಆಚಾರ್ಯ, ಧರ್ಮದರ್ಶಿ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕಲ್ಕೂರ, ರಾಜ್ಯ ಪ್ರಶಸ್ತಿ ಪುರಸ್ಕೃತ ನಾಗಸ್ವರ ವಿದ್ವಾನ್ ನಾಗೇಶ್. ಎ. ಬಪ್ಪನಾಡು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕದ್ರಿ ಆರ್ಟ್ ಅಕಾಡೆಮಿಯ ವತಿಯಿಂದ ಈ 190ನೇ ನೃತ್ಯ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಸಂಯೋಜಿಸಲಾಗಿದ್ದು ಕಲ್ಕೂರ ಪ್ರತಿಷ್ಠಾನ ಮತ್ತು ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗಗಳ ವಿಶೇಷ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ. ಆಸಕ್ತರಿಗೆ ಮುಕ್ತ ಪ್ರವೇಶವಿದೆ.ಮಂಗಳೂರಿನ ಮೊಟ್ಟಮೊದಲ ಕನ್ನಡ ಅಂತರ್ಜಾಲ ಸುದ್ದಿ ತಾಣ "ಈ ಕನಸು.ಕಾಂ" ಮಾಧ್ಯಮ ಸಹಭಾಗಿತ್ವ ವಹಿಸಿಕೊಂಡಿದೆ.

0 comments:

Post a Comment