ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ- ಉಡುಪಿ ವರದಿ


ಶ್ರೀ ವಿಶ್ವೋತ್ತಮತೀರ್ಥರ ಆರಾಧನೆಯು ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀಪಾದರಾದ ಶ್ರೀಶ್ರೀವಿಶ್ವವಲ್ಲಭ ತೀರ್ಥ ಮತು ವಿದ್ಯಾಸಾಗರ ತೀರ್ಥ ಶ್ರೀಪಾದರು ಕೃಷ್ಣಾಪುರ ಮಠ ಇವರ ನೇತೃತ್ವದಲ್ಲಿ ಬಹು ವಿಜೃಂಬಣೆಯಿಂದ ನಡೆಯಿತು.


ಬೆಳಿಗ್ಗೆ ವಿದ್ವಾಂಸರಿಂದ ವೇದ, ವೃಂದಾವನಾಖ್ಯಾನ ಪಾರಾಯಣ ಮಧ್ಯಾಹ್ನ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮವು ಜರುಗಿ ಸಂಜೆ ಶ್ರೀವಿಶ್ವೋತ್ತಮತೀರ್ಥರ ಭಾವಚಿತ್ರದ ಮೆರವಣಿಗೆಯು ರಥಬೀದಿಯಲ್ಲಿ ಸಾಗಿ ಬಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿಶೇಷ ಧಾರ್ಮಿಕ ಪ್ರವಚನಗಳು ವಿದ್ವಾಂಸರಿಂದ ನಡೆಯಿತು.


ಶ್ರೀ ಕೃಷ್ಣಾಪುರ ಮಠದ ಶ್ರೀಪಾದರು ವಿಶ್ವೋತ್ತಮರ ತತ್ವಜ್ಞಾನ ಮತ್ತು ಸಾತ್ವಿಕ ಸ್ವಭಾವ ಹಾಗೂ ವಾದಿರಾಜರ ಋಜುತ್ವದ ಬಗ್ಗೆ ಅವರ ವಿಶೇಷ ಅಭಿಮಾನವನ್ನು ಸ್ಮರಿಸಿದರು. ಪರ್ಯಾಯ ಶ್ರೀಪಾದರಾದ ಶ್ರೀಶ್ರೀವಿಶ್ವವಲ್ಲಭ ತೀರ್ಥರು ಗುರುಗಳ ಸರಳತೆ ವಾದಿರಾಜರ ಮೇಲಿನ ಅಚಲ ನಂಬಿಕೆ ಹಾಗೂ ಅವರ ಮುಗ್ದತೆಯನ್ನು ಕೊಂಡಾಡಿದರು.


ಅವರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು ಬನ್ನಂಜೆ ಗೋಪಾಲಕೃಷ್ಣ ಉಪಾಧ್ಯಾಯರ ಸ್ವಾಗತದಿಂದ ಪ್ರಾರಂಭದ ಕಾರ್ಯಕ್ರಮ ಉದಯ ಕುಮಾರ್ ಸರಳಯತ್ತಾಯ ರವರಿಂದ ಧನ್ಯವಾದ ದೊಂದಿಗೆ ಮುಕ್ತಾಯಗೊಂಡಿತು.
ರಾತ್ರಿ ಶೇಷಗಿರಿದಾಸ್ ರಾಯಚೂರು ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು

0 comments:

Post a Comment