ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್

ಈ ವಿಷಯ ಹೇಳಿಕೊಳ್ಳಲು ಕೊಂಚ ಮುಜುಗರ... ಆದರೂ ಒಬ್ಬಂಟಿಯಾಗಿ ಪ್ರಯಾಣ ಮಾಡುವ ಅದೆಷ್ಟೋ ಹುಡುಗಿಯರು, ಮಹಿಳೆಯರು ಅನುಭವಿಸುವ, ಹಿಂಸೆ ಇದು. ಆಡಲಾಗದ ಅನುಭವಿಸಲಾಗದ ಪರಿಸ್ಥಿತಿಯಲ್ಲಿ ಇಂದು ಹೆಣ್ಣು ಅದೆಷ್ಟೋ ಬಾರಿ ಸಿಲುಕಿಕೊಳ್ಳುತ್ತಾಳೆ. ಅಸಹಾಯಕತೆಯಲ್ಲಿ ಬೆಂದು ಬಳಲುತ್ತಾಳೆ. ಆದರೆ ಅಂತಹ ಅಸಹಾಯಕಥೆಯನ್ನು ಸಹಿಸಿಕೊಳ್ಳುವ ಹುಡುಗಿ ನಾನಲ್ಲ...ಮೊನ್ನೆ ಮೊನ್ನೆ ಕಾಲೇಜಿಗೆ ರಜೆ ಬಂದಾಗ ನಮ್ಮೂರಿಗೆ ಹೋಗಲೆಂದು ಉಜಿರೆಯಿಂದ ಚಾರ್ಮಾಡಿ ಬಳಸಿ ಹಾಸನದೆಡೆಗೆ ಪ್ರಯಾಣ ಮಾಡುತ್ತಿದ್ದೆ.


ಪ್ರಕೃತಿಯ ರಮಣೀಯತೆಯ ಜೊತೆಗೆ ಕೈಯಲ್ಲಿ ಎಸ್ ಎಲ್ ಬೈರಪ್ಪರ ಕವಲು ಕಾದಂಬರಿ. ಏರು ಹೂತ್ತಿನಲ್ಲಿ ಡೊಂಕಾದ ರಸ್ತೆಯಲ್ಲಿ ದಾರಿ ಸವೆಯತ್ತಿದ್ದರೆ ಕಾದಂಬರಿಯ ಕಥಾನಕ ಕವಲೊಡೆದ ಮನಸ್ಸನ್ನು ಹಿಡಿದು ನಿಲ್ಲಿಸಿತ್ತು. ಆ ಹೊತ್ತಿನಿಂದಲೇ ಪ್ರಾರಂಭವಾದದ್ದು ಈ ಪ್ರಾರಬ್ದ ಕಥೆ...

ನಾನು ಬಸ್ ಏರುವಾಗ ನಾಲ್ಕಾರುಮಂದಿಯಷ್ಟೇ. ಅದ್ಯಾವ ಊರಿನಿಂದ ಹತ್ತಿತೂ ಆ ಪ್ರಾರಬ್ದ ಹಡುಗ ತಿಳಿಯಲಿಲ್ಲ. ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ . ಮೊದಲು ಯಾವ ಸಮಸ್ಯೆಯು ಕಾಣಲಿಲ್ಲ. ಆದರೆ ದಾರಿ ಸಾಗುತ್ತಿದಂತೆ ಒಂದೂಂದೆ ಕಿತಾಪತಿ ಶುರು ಮಾಡಿದ. ನಾನು ಗಂಭೀರವಾಗಿ ಪುಸ್ತಕ ಓದುತ್ತಲೇ ಕುಳಿತ್ತಿದ್ದೆ. ಸ್ವಲ್ಪ ಸಮಯದ ಬಳಿಕ ನನ್ನ ದುಪ್ಪಟವನ್ನು ಎಳೆಯಲು ಯತ್ನಿಸುತ್ತಿದ್ದ. ಅವನ ಮುಖವನೊಮ್ಮೆ ದಿಟ್ಟಿಸಿದ ನಾನು ಸುಮ್ಮನೆ ಕುಳಿತೆ. ಅವನ ಆ ಪ್ರವೃತ್ತಿ ಮುಂದುವರಿದಂತೆ ನನ್ನ ಕೋಪ ನೆತ್ತಿಗೇರತೊಡಗಿತು.

ಆ ಸಮಯದಲ್ಲಿ ಮುಂದೆ ಹೋಗಿ ಕುಳಿತು ಬಿಡುವ... ಇವನ ಕಾಟ ನನಗ್ಯಾಕೆ ಎಂದು ಅನ್ನಿಸಿತು. ಕಂಡೆಕ್ಟರ್ ಹತ್ತಿರ ಹೇಳಿದರೆ ಹೇಗೆ? ಎಂದು ಚಿಂತಿಸಿದೆ. ಆದರೆ ಅವರು ಆ ಹುಡುಗನಿಗೆ ಸ್ವಲ್ಪ ಬೈದು ನನ್ನನ್ನೇ ಬೇರೆ ಕಡೆ ಕೂರಿಸುತ್ತಾರೆಯೇ ಹೊರತು ಮತ್ತೇನೂ ಮಾಡುವುದಿಲ್ಲ ಎಂದು ಅನ್ನಿಸಿತು.

ನಾನು ಅಸಹಾಯಕಳಲ್ಲ ನಾನೇಕೆ ಉಪಕಾರ ಬಯಸಬೇಕು ನನ್ನ ಸಮಸ್ಯಗೆ ಪರಿಹಾರ ಕಂಡುಕೊಳ್ಳುತ್ತೇನೆಂದು ಮನಸ್ಸಿಗೆ ಧೈರ್ಯ ತಂದುಕೊಂಡೆ. ಪುನಃ ಅವನ ಕೈ ದುಪಟ್ಟದೆಡೆಗೆ ಬಂದದ್ದೇ ತಡ. ಅವನ ಕೈಯನ್ನು ಬಿಗಿಯಾಗಿ ಹಿಡಿದು ಪೆನ್ನಿನ ಚೂಪಾದ ತುದಿಯಿಂದ ಚುಚ್ಚತೂಡಗಿದೆ ಅವನಿಗೂ ಅಸಹಾಯಕಥೆ, ಬೊಬ್ಬಿಟ್ಟರೆ ತನ್ನ ಮಾನವೇ ಹೋಗುತ್ತದೆಂಬ ಭಯ!

ಮತ್ತೂಂದು ದಿನ ಇನ್ನೊಂದು ಹುಡುಗಿಯ ದುಪ್ಪಟವನ್ನು ಮುಟ್ಟುವಾಗೆಲ್ಲ ಇದರ ನೆನಪಾಗುವಷ್ಟು ಚುಚ್ಚಿದೆ ಆ ವೇಳೆಗಾಗಲೇ ಬಸ್ ಹಾಸನ ತಲುಪಿತು. ಇಳಿಯುವಾಗ ಆತ ಹೊರಗೆ ಬಾ ನೋಡಿಕೊಳ್ಳುತ್ತೇನೆ ಎಂದ.ಇಳಿದು ನೋಡಿದರೆ ವ್ಯಕ್ತಿಯ ಪತ್ತೆ ಇಲ್ಲ. ಯಾಕೆಂದರೆ ನಾ ಕೊಟ್ಟ ಬಹುಮಾನವೇ ಸಾಕಾಗಿತ್ತು!

ಸ್ನೇಹಿತರೇ ಇದು ನನ್ನ ಅನುಭವಕ್ಕೆ ಬಂದ ಒಂದು ಪುಟ್ಟ ಘಟನೆಯಷ್ಟೆ. ಅದೆಷ್ಟೋ ಮುಗ್ದ ಹೆಣ್ಣು ಮಕ್ಕಳು ಇಂತಹ ಕೃತ್ಯವನ್ನನುಭವಿಸಿರುತ್ತಾರೆ. ರೈಲಿನಲ್ಲಿ ಹುಡುಗಿಯರ ಮಾನಹರಣವಾಗುತ್ತಿದೆ.ಅಷ್ಟೇ ಅಲ್ಲದೆ ಬೆಳಗ್ಗಿನ ಸಮಯದಲ್ಲೂ ಹೆಣ್ಣೊಬ್ಬಳು ನಿರ್ಭೀತಿಯಿಂದ ನಡೆದಾಡಲು ಸಾದ್ಯವಾಗುತ್ತಿಲ್ಲ. ದಿನ ಬೆಳಗಾದರೆ ಮಾದ್ಯಮದಲ್ಲಿ ಹೆಣ್ಣಿನ ಮಾನಾಪಹರಣದ ಬಗ್ಗೆ ಸುದ್ದಿಕಾಣುತ್ತೇವೆ.ಇದಕ್ಕೆಲ್ಲ ಪರಿಹಾರ ಎಂದು ?

- ಸ್ಮಿತಾ ಮಲ್ಲಿಪಟ್ಟಣ

3 comments:

ಮೌನರಾಗ said...

Really proud of you.....

ಮೌನರಾಗ said...

Really proud of you.....

Manoranjan Noorithaya said...

ಬೆಂಗಳೂರಿನ ಸಿಟಿ ಬಸ್ ಗಳೇನು ಇದಕ್ಕೆ ಹೊರತಾಗಿಲ್ಲ, 'ಪುಷ್ಪಕ್' ಮಾದರಿಯ ಬಸ್ ನ ಒಳ ವಿನ್ಯಾಸದ ರೀತಿ ಯಾರನ್ನ ಮೆಚ್ಚಿಸಲಿಕ್ಕೆ ಅನ್ನೋದು ಗೊತ್ತಿಲ್ಲ. ಸೀಟಿನ ಎರಡು ವಿಭಾಗಗಳ ನಡುವೆ ಇರುವ ಕಿರಿದಾದ ಜಾಗ ಕಾಮಣ್ಣರಿಗೆ ಹೇಳಿ ಮಾಡಿಸಿದಂತಿದೆ.
ಪತ್ರಕರ್ತರು ತಮ್ಮ ಬರವಣಿಗೆಯಲ್ಲಿ ಪೆನ್ನನ್ನ ಖಡ್ಗವಾಗಿ ಉಪಯೋಗಿಸುತ್ತಾರೆ ಅಂತಾರೆ, ಪತ್ರಕರ್ತ ವಿದ್ಯಾರ್ಥಿನಿಯಾಗಿದಕ್ಕೆ ನೀನು, ಖಡ್ಗದ(ಪೆನ್)ನ ಮಲ್ಟಿ ಪರ್ಪಸ್ ವಿಶೇಷತೆಯನ್ನ ತಿಳಿಸಿ ಕೊಟ್ಟಿದ್ದೀಯ Thanks and Congartulations

Post a Comment