ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ನವದೆಹಲಿ/ ಬೆಂಗಳೂರು:ದೇಶಕ್ಕೆ ವಿದ್ಯುತ್ ಪೂರೈಸುವ ವಿದ್ಯುತ್ ಜಾಲಗಳ (ಗ್ರಿಡ್)ಲ್ಲಿ ಉಂಟಾಗಿರುವ ತೀವ್ರ ತೊಂದರೆಯಿಂದಾಗಿ ಭಾರತದ ಅರ್ಧದಷ್ಟು ಪ್ರದೇಶ ವಿದ್ಯುತ್ ಅಭಾವದಿಂದ ತತ್ತರಿಸಿತ್ತು. ಇದಾಗಿ ಹಲವು ಗಂಟೆಗಳ ನಂತರ ಇದೀಗ ತೊಂದರೆಗೊಳಗಾದ 3ಪ್ರಮುಖ ಪವರ್ ಗ್ರಿಡ್ ಗಳು ಕಾರ್ಯಾರಂಭಿಸಿದೆ. ವಿದ್ಯುತ್ ಸ್ಥಗಿತದಿಂದಾಗಿ ತತ್ತರಿಸಿಹೋಗಿದ್ದ ಜನ ಇದೀಗ ನಿಟ್ಟುಸಿರು ಬಿಡುವಂತಾಗಿದೆ.ವಿದ್ಯುತ್ ಕ್ಷಾಮದಿಂದಾಗಿ ದೇಶದ ಅರ್ಧ ಭಾಗದಲ್ಲಿ ತೀವ್ರ ತೊಂದರೆಗಳುಂಟಾಗಿದ್ದವು. ಪ್ರಮುಖ ಸೇವೆಗಳು ಸಹ ಇದರಿಂದಾಗಿ ಸ್ಥಗಿತಗೊಂಡಿದ್ದವು. ಹಲವಾರು ರೈಲ್ವೇ ಸೇವೆಗಳು ರದ್ದಾಗಿದ್ದವು. ಇದೀಗ ಮರಳಿ ವಿದ್ಯುತ್ ಪೂರೈಕೆಯಾಗುವುದರೊಂದಿಗೆ ಜನ ಜೀವನ ಸಹಜ ಸ್ಥಿತಿಗೆ ಬಂದಿದೆ.


ದೆಹಲಿ, ಉತ್ತರಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಒರಿಸ್ಸಾ, ಪಂಜಾಬ್, ಜಾರ್ಖಂಡ್, ಬಿಹಾರ, ಹರ್ಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರಾಂಚಲ ರಾಜ್ಯಗಳಲ್ಲಿ ವಿದ್ಯುತ್ ಕ್ಷಾಮ ತಲೆದೋರಿತ್ತು. ಹಲವು ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಪರಿಸ್ಥಿತಿ ತಿಳಿಯಾಗಿದೆ.
ಚಿತ್ರಕೃಪೆ :ಪಿಟಿಐ

0 comments:

Post a Comment