ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಸುಖಕ್ಕೆ ಸಂಕಟಗಳೇ ಪೀಠಿಕೆ, ನಮಗುಂಟಾಗುವ ಪ್ರತಿ ನೋವೂ ಒಳ್ಳೆಯದನ್ನೇ ಮಾಡುತ್ತದೆ ಎಂದು ಪರಮಪೂಜ್ಯ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆಯುತ್ತಿರುವ ರಾಮಕಥೆಯ ಮೊದಲದಿನದ ಪ್ರವಚನದಲ್ಲಿ ನುಡಿದರು.


ಶ್ರೀಗಳವರು ನಗರದಲ್ಲಿ ನಡೆಸುತ್ತಿರುವ ಶ್ರೀ ರಾಮಕಥೆಯ ೨ನೇ ಪರ್ವ ಮಲ್ಲೇಶ್ವರದ ಸರ್ಕಾರಿ ಪದವಿಪೂರ್ವಕಾಲೇಕಿನ ಆವರಣದಲ್ಲಿ ವಿದ್ಯುಕ್ತವಾಗಿ ರಾಮಾಯಣದ ಹೊತ್ತಗೆಗಳಿಗೆ ಪೂಜೆ ನಡೆಸುವ ಮೂಲಕ ಪ್ರಾರಂಭವಾಯಿತು.

ಮೊದಲಿಗೆ ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ವಾನ್ ಜಗದೀಶ ಶರ್ಮಾ ಬದುಕಿನ ವ್ಯಥೆಗಳನ್ನು ಕಳೆಯಲು ನಮ್ಮ ಪರಂಪರೆ ಕಂಡುಕೊಂಡ ಸಾಧನ ಕಥೆಗಳು. ಅದನ್ನು ವೇಗದ ಕಾಲಕ್ಕೆ, ಮನೋವೃತ್ತಿಗೆ ತಕ್ಕಂತೆ ಗೀತ, ನೃತ್ಯ, ಚಿತ್ರಗಳೊಂದಿಗೆ ರಾಮಕಥೆಯಲ್ಲಿ ಅಳವಡಿಸಲಾಗಿದೆ ಎಂದರು.ಪ್ರವಚನದಲ್ಲಿ ಶ್ರೀಗಳವರು, 'ರಾವಣನಿಲ್ಲದಿದ್ದರೆ ರಾಮಾವತಾರವಿರುತ್ತಿರಲಿಲ್ಲ. ಮಹಾವಿಷ್ಣುವನ್ನು ವೈಕುಂಠದಿಂದ ಅಯೋಧ್ಯೆಗೆ, ಅಲ್ಲಿಂದ ಪಂಚವಟಿ, ಕಿಷ್ಕಿಂದೆ, ಲಂಕೆ ಹೀಗೆ ತನ್ನ ಮನೆಬಾಗಿಲಿಗೆ ರಾವಣ ಕರೆಸಿಕೊಂಡ. ಜಗಕ್ಕೆ ರಾವಣನಿತ್ತ ಪೀಡೆ ರಾಮಾವತಾರಕ್ಕೆ ಕಾರಣವಾಯಿತು. ಹೀಗಾಗಿ ರಾಮಾಯಣಕ್ಕೆ ರಾವಣನೇ ಪೀಠಿಕೆ' ಎಂದು ನುಡಿದರು. ಜಯ-ವಿಜಯರನ್ನು ಭೂಮಿಗೆ ಕಳಿಸಿ ರಾಮಾವತಾರದ ಮೂಲಕ ಅವರೊಟ್ಟಿಗೆ ಅಸಂಖ್ಯಜೀವಗಳನ್ನು ತನ್ನ ಬಳಿ ಕರೆಸಿಕೊಂಡ, ಇಂದಿಗೂ ಕರೆಸಿಕೊಳ್ಳುತ್ತಿರುವ ಭಗವಂತನ ಕರುಣೆ ವರ್ಣಿಸಲಸದಳ ಎಂದು ಶ್ರೀಗಳವರು ಬಣ್ಣಿಸಿದರು.

ಶ್ರೀಗಳವರ ಪ್ರವಚನದೊಟ್ಟಿಗೆ ಶ್ರೀರಾಮಕಥೆಯಲ್ಲಿ ಪ್ರೇಮಲತಾ ದಿವಾಕರ್ ತಂಡದ ಸಂಗೀತ, ರಾಘವೇಂದ್ರ ಹೆಗಡೆಯವರ ಮರಳು ಚಿತ್ರ, ನೀರ್ನಳ್ಳಿ ಗಣಪತಿಯವರ ಆಶುಚಿತ್ರ ರಾಮಕಥೆಗೆ ಮೆರಗು ಕೊಟ್ಟವು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಯಕ್ಷಗಾನದ ಮೇರುನಟ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ರಾವಣನಾಗಿ ಅಭಿನಯಿಸಿದ ರೊಪಕ ಜನಮನಸೂರೆಗೊಂಡಿತು. ಅಂತ್ಯದಲ್ಲಿ ರಾಮಕಥೆಯ ವಿಶೇಷ ಆನಂದನರ್ತನದಲ್ಲಿ ಸೇರಿದ ಎಲ್ಲರೂ ರಾಮಭಜನೆಗೆ ಹೆಜ್ಜೆ ಹಾಕಿದರು. ಕಾರ್ಯಕ್ರಮದಲ್ಲಿ ಶಾಸಕ ಡಾ.ಸಿ.ಎನ್. ಆಶ್ವಥ್ ನಾರಾಯಣ, ಡಾ.ಕಸ್ತೂರಿ ರಂಗನ್ ಮತ್ತಿತರರು ಉಪಸ್ಥಿತರಿದ್ದರು.

ವರದಿ: ವಿನಯ್
ಚಿತ್ರ: ಗೌತಮ್

0 comments:

Post a Comment