ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:00 PM

"ಶತಾಯ-ಗತಾಯ"

Posted by ekanasu

ವಿಚಾರ

"ಶತಾಯ" ಎಂದರೆ ಶತಕ್ಕೆ ಅಥಾತ್ ನೂರಕ್ಕೆ!
"ಗತಾಯ" ಎಂದರೆ ಹೋದದಕ್ಕೆ ಅಥಾ೯ತ್ ಇಲ್ಲದಕ್ಕೆ,ಕಳೆದು ಹೋದದಕ್ಕೆ,ಕೈಬಿಟ್ಟು ಹೋದದಕ್ಕೆ,ಪಯಾ೯ವಸಾನವಾದುದಕ್ಕೆ ಎಂದರೂ ಆಗದೇನು?
ಇರಲಿ ವ್ಯಾಕರಣಕ್ಕಿಂತ ಜೀವನನಿವ೯ಹಣವೇ ಆದ್ಯ-ಆಢ್ಯ!
ಅದೇ ಇಲ್ಲದಿದ್ದರೆ ಇನ್ನೆಲ್ಲಾ ಮೌಢ್ಯವೇ!

ಈಗ ನೋಡಿರಿ,ಇಡೀ ರಾಷ್ಟ್ರದಲ್ಲಿ ಮಳೆಯ ಕೊರತೆ.
ಇದರ ಒದೆತ-ಹೊಡೆತ ರೈತವಗ೯ಕ್ಕೆ ಅಪಾರ ಕುತ್ತು.
ತುತ್ತಿಗೆ ಬಿತ್ತು ಚಿತ್ತು.

ಸತ್ತು ಸ್ವತ್ತು ತೊತ್ತಾಯಿತು.
ಮಳೆ-ನೀರು ಕುಡಿಯಲು,ಬೆಳೆಗೆ ಇಳೆಗೆ ಕಳೆ.
ಇದೇ ಇಲ್ಲವಾದರೆ ಸಾಮೂಹಿಕ-ಸಾವ೯ತ್ರಿಕ ಕೊಲೆ!

ಹವಾಮಾನ ಎಲ್ಲ ಮಾನ ಕಳೆಯಿತು ಆದರೆ ತತ್ಸಂಬಂಧಿ ಇಲಾಖೆ ತನ್ನದೇ ಮಾನಕ್ಕೆಮೌನವೇ ಮೇಲೆಂದು ಬಗೆದು-ಏನೆಲ್ಲ ಗಣಿತ-ಗುಣಿತ-ಕುಣಿತಗಳನ್ನು ಒಗೆದು ಪರಂಝ್ಹಳವಾಯಿತು.
೧೦೦ ಕೋಟಿಗೂ ಮೀರಿದ ಭಾರತದ ಜನಹಿತಕ್ಕೆ ಅನ್ನದ ಧಣಿ-ಧ್ವನಿ ಅಡಗಿ ಅಡಿಮೇಲಾಗಿ ಬಿದ್ದಿತು.

ರೈತ ವ್ಯವಸಾಯದಲ್ಲಿ ವ್ಯಾಪ್ತನಾಗುವುದು-ತೃಪ್ತನಾಗುವುದು ಅನ್ನದ ಕೂಗಿಗೆ ಓಗೊಡಲು ಅಲ್ಲದೆ ಒಡ್ಡೋಲಗಕ್ಕೇನು?
ಭಾರತಸರಕಾರದ ಕೃಷಿ ಮಂತ್ರಿ ಮೊದಲಿಗೆ ಕಣಜ ತುಂಬಿದೆ ಎಂತ ಬಿಂಬಿಸಿ-ನಂಬಿಸಿ-ರೈತ ಮಳೆ ಇಲ್ಲದಿದ್ದರೂ ಅನ್ನಕ್ಕೆ ಸೊನ್ನೆ ಎಂತ ಮರುಗುವುದು ಸಲ್ಲ ಎಂದರು.

ದಿನಕಳೆಯಿತು-ಕಳೆಇಳಿಯಿತು-ಕಳಪೆ ಮೆತ್ತಿ-ಮುಂದಿನ ದಿನಗಳಲ್ಲಿ-ಮುಂದಿನ ಎರಡು ತಿಂಗಳುಗಳಲ್ಲಿ ಸರಿಯಾಗಿ-ಕಾಲಬದ್ಧವಾಗಿ ಮಳೆ ಸುರಿಯದಿದ್ದರೆ ಭೀಕರ ಎಂದರು!
ಸಾಲದ್ದಕ್ಕೆ ಗ್ರಾಮೀಣ ಜನರಿಗೆ-ನೂರುದಿನಗಳ ಉದ್ಯೋಗ ಖಾತರಿಯೇ ಪರಿಹಾರವೆಂದರು.
ವಷ೯ದ ದಿನಗಳುದ್ದಕ್ಕೂ ಕೆಲಸದಲ್ಲಿ ನಿರತವಾದ ರೈತಾಪಿ ವಗ೯ಕ್ಕೆ ನೂರು ದಿನಗಳ ಖಾಯಂ ಚಾಕರಿಯೇ ಸಾಕೇನು?
ರೈತ ತನಗಷ್ಟೇ ಅಲ್ಲದೆ ಸಮಾಜಕ್ಕೆ-ಜನಹಿತಕ್ಕೆ ಅನ್ನ ನೀಡಲಲ್ಲವೇ ಕೃಷಿ?
ತನ್ನ ನೂರು ದಿನದ ಖುಷಿಯೇನು ಅವನ ಗುರಿ?

ಇಡಿ ಜಗತ್ತಿನಲ್ಲಿ ಭಾರತ ಸರಕಾರದ "ನೂರು ದಿನಗಳ ಜೋರು" ಜಾರಿತೆ-ಜಾರಿಣಿಯೆ-ಅರಿಯೆ ನಾ!
ನೂರು ದಿನಗಳೇ ಸೂರು ಅದೇ ಸವ೯ರಕ್ಷಾ ಕವಚ ಎಂದದು ಕಪಟವಲ್ಲದೇ ಮತ್ತೇನು?
"ನೂರು-ದಾರಿ ಮಾಡಿತೆ-ದೂರು ಮಾಡಿತೆ ಜನತೆಗೆ ಎಂಬುದೇ ಸತ್ಯಾನ್ವೇಷಣೆಯು!
ಇದು ಹಾಗಿರಲಿ,
ಅನ್ನಕ್ಕೆ ಬಿತ್ತು ಸೊನ್ನೆ ಎಂತ ಕೈಗಾರಿಕೆಗಳಲ್ಲಿ,ವ್ಯವಸ್ಥೆಗಳಲ್ಲಿ-ಸಮ್ಸ್ಥೆಗಳಲ್ಲಿ-ಇನ್ನಿತರ ಉದ್ಯೋಗಗಳಲ್ಲಿ ದುಡಿಯುವ ಜೀವಗಳು ಬಡಬಡಿಸುವುದಿಲ್ಲವೇನು?
ಅವನ್ನೇ-ಅದನ್ನೇ ಬಂಡವಾಳ ಮಾಡಿಕೊಂಡು ಸ್ವಪ್ರಥಿಷ್ಟೆಗಳು ಗದ್ದಲ ಮಾದುವುದಿಲ್ಲವೇನು?
ಒಂದೊಮ್ಮೆ ಭಾರತ ಸರಕಾರ ಖಾತರಿಯ ನೂರುದಿನವೇ ಗುಣೋಪೇತ ಎಂದರೆ ಆ ರೀತಿಯಲ್ಲೇ ಇನ್ನಿತರ ಉದ್ಯೋಗದಾತರ ನೂರು ದಿನಗಳೂ ಗುಣಹೀನವೇನು?
ಏಕೆ-ಇಡೀ ಭಾರತದಲ್ಲೆಲ್ಲೂ ನೂರು ದಿನಗಳ ಉದ್ಯೋಗವೂ ಒಂದೊಮ್ಮೆ ಸಂಭವಿಸಿದರೆ-ಸಂಭಾವ್ಯವೆನಿಸಿದರೆ ಮತ್ತೇಕೆ ಸಂಪು-ಗುಂಪು-ಚಳುವಲಿ-ಈ ಬಳುವಳಿಗಳು?
ರಾಷ್ಟ್ರ ಯಾಜಮಾನ್ಯಕ್ಕೆ ಸೈ ಎನಿಸಿದರೆ ಅನ್ಯ ಯಾಜಮಾನ್ಯಕ್ಕೆ ಎಕಾಗಬಾರದು-ಆಗಿಸಬಾರದು?
ಇದೇ ನಮ್ಮ ತಕ೯!
ಜನಹಿತಕ್ಕೆ-ಜನಮತಕ್ಕೆ ಜನತೆಗೆ ಇಲ್ಲವೇ ಅಧಿಕಾರ ಎಲ್ಲವನ್ನೂ ಒರೆ ಹಚ್ಚಿ ನೋಡುವ-ಚಚ್ಚಿ ನೋಡುವ-ಬಿಚ್ಚಿ ನೋಡುವ ಸ್ವಾತಂತ್ರ್ಯ?
ಸ್ವತಂತ್ರ ಭಾರತದಲ್ಲಿ ಮತ್ತೇಕೆ ಅತಂತ್ರ-ಕುತಂತ್ರ?
ಶೃ ತಿ ಸಾರಿತು-"ಕಾಲೇ ವಷ೯ತು ಪಜ೯ನ್ಯಃ"
ಪಜ೯ನ್ಯಕ್ಕೆ ಪಾಂಚಜನ್ಯ-ಅನ್ಯವಲ್ಲ-ಅನನ್ಯವು!
"ಶಿವಶ್ಚ ತೇಧ್ವಾಸ್ತು"

ಆರ್.ಎಂ.ಶಮ೯., ಮಂಗಳೂರು.

0 comments:

Post a Comment