ಯುವಾ
ನಿನ್ನ ನೋಟದಲಿ ನನ್ನ ಕನಸುಗಳು
ಸೇರಿವೆ
ನನ್ನ ನನಸೆಂಬ ನಂಟಿಗೆ
ನಿನ್ನ ಭಾವನೆ ಬದುಕಾಗಿದೆ
ಹೂವಿನಂತ ಮನಕೆ
ನಿನ್ನ ಪ್ರೀತಿಯು ದುಂಬಿಯಾಗಿ
ಝೇಂಕರಿಸಿದೆ
ಸವಿನುಡಿಯ ಮಾತಿಗೆ
ಚಿತ್ರಗಳು ಮೂಡಿ
ನಿನೇ ನನ್ನ ಬದುಕಿನ ಬಣ್ಣವಾಗಿ
ಗೋಚರಿಸುತಿದೆ
ಸೋಲಿಲ್ಲದ ಈ ಜೀವವು
ನಿನ್ನ ಹೃದಯಕೆ ಸೋತು ಪ್ರೀತಿಯಲ್ಲಿ
ತೇಲುತ್ತಿವೆ
ಮೋಡದಲ್ಲಿ ನಿನ್ನ ಹೆಸರು ಬರೆದು
ಮಳೆಯು ಬರುವಂತೆ
ಮಾಡಿದೆ ನಾ
ಆ ಜಿಟಿ ಜಿಟಿ ಮಳೆಯಲಿ
ಒಂದೇ ಚತ್ರಿಯಲ್ಲಿ ಇಬ್ಬರೂ
ಸೇರಿ ಹೋಗುವ ಕನಸೀಗ ನನಸಾಗಿದೆ
ಬರಹ: ಪದ್ಮಾ ಭಟ್
ಎಸ್.ಡಿ.ಎಂ ಕಾಲೆಜ್, ಉಜಿರೆ.
Subscribe to:
Post Comments (Atom)
Video
3 comments:
ಪ್ರೀತಿಯ ಹೆಸರು ಮೋಡದಿ ಮೂಡಿದರೆ ಮಳೆಯಾಗುವುದು ಮನದಲೂ ಸಹ.
ಸುಂದರ ಕವನ
chandada kavana..
ಈ ಪ್ರೀತಿಗೂ ಮಳೆಗೂ ಅದೇನೋ ಅವಿನಾಭಾವ ಸಂಬಂಧ!
ಮುಂಗಾರು ಮಳೆ ಬಂದರಂತು ನವಿರಾದ ಭಾವನೆಗಳದೇ ಸಾಮ್ರಾಜ್ಯ ಮನದಲ್ಲಿ
ಮಳೆಯಲ್ಲಿ ಮನದೊಡೆಯನ ಮುದ ನೀಡುವ ಸ್ಪರ್ಶಕ್ಕೆ ಹಂಬಲಿಸುವ ಹೃದಯ
ಮಳೆ ಬಂದಾಗ ಸದಾ ಜೊತೆಗಿರಲಿ ಚತ್ರಿ ಎಂದು ಆಶಿಸುವೆ ಗೆಳತಿ :)
Post a Comment