ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:36 PM

ಹೊಯ್ದಾಟ...

Posted by ekanasu

ಸಾಹಿತ್ಯ : ಜಯಶ್ರೀ ಶರ್ಮ

ಭಾವನೆಗಳ ಸರಪಳಿ
ತೂಗುವಂದದಿ ಜೋಕಾಲಿ
ಮುಂದಕ್ಕೆ ಜೋಲಾಡೆ
ಹಿಂದೆಳೆವ ಸಹಜತೆಯುಹಿಂದು ಮುಂದಿನ ಹೊಯ್ದಾಟ
ತಾ ಮುಂದು ತಾ ಮುಂದು
ದುಗುಡತೆಯು ಇಮ್ಮಡಿಸಿ
ಕಂಬನಿಯ ಜೋಕಾಲಿ

ಬೀಸುಗಾಳಿಗೆ ತಾಕಿದ ಅಕ್ಷಿಪಟಲ
ಕೆನ್ನೆ ತಂಪಾಯಿತು
ಕೆಂಪು ರಂಗೇರಿ ಮನದಳಲು
ಭಾರವಾಯಿತು
ಭಾವ, ನಿಂತ ಜೋಕಾಲಿ

0 comments:

Post a Comment