ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಯುವಾ : ಪದ್ಮಾ ಭಟ್

ಹಾದು ಹೋಗುವ ದಾರಿಗಳೆಷ್ಟೋ
ಪಯಣದಲಿ
ಒಂದೊಮ್ಮೆ ಹಿಂತಿರುಗಿ ನೋಡಿದರೆ
ಪಯಣಿಸಿದ ಹೆಜ್ಜೆಗುರುತೂ
ಕಾಣದೇ...


ಪಯಣಿಸಿದ್ದೇ ಸುಳ್ಳೆಂಬಂತೆ
ಹುಡುಕಾಡಲು ಬೇಕು
ಒಂದರೆ ಕ್ಷಣ ಬೆರಗಾಗುವಂತ
ಬದಲಾದ ಕಾಲಗಳು...

ನಮ್ಮ ಭಾವನೆಗಳಿಗೇ ತಿಳಿಸದೇ
ತೋಯ್ದಾಡುವ ಮನಸು
ಮುಸುಕಿದಂತೆ ಭಾಸವಾಗುವ ಮಂಕು ಬುದ್ದಿ
ಏನು ಹೇಳಿದರೂ ನಗಲಾರದ ತುಟಿಯು
ಮಾತನ್ನೂ ಪಿಟುಕಿಸದೇ
ಮೌನದೆಡೆ ಮೊರೆ ಹೊಕ್ಕರೆ
ಮಾತು ಕೇಳಲು ಕಾಯುವವರ, ಹಪಹಪಿಸುವವರ
ಗತಿ ಏನೆಂದು ...

ಮಾತನಾಡದ ಮನಸ್ಸಿಗೇ ಕೇಳಬೇಕು
ನನಗೇನು ಗೊತ್ತು ಇದು ಮನಸಿನ
ವಿಚಾರ!

0 comments:

Post a Comment