ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:46 PM

ಓದುಗರ ಪತ್ರ

Posted by ekanasu

ಓದುಗರ ಪತ್ರ :ಆರ್.ಎಂ.ಶಮ೯

ಸನ್ಮಾನ್ಯಕನ್ನಡಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ-ಶ್ರೀ ಪುಂಡಲೀಕ ಹಾಲಂಬಿ ಯವರಿಗೆ,
ಸವ೯ಪ್ರಥಮಕ್ಕೆ ನಮ್ಮ ನಮಸ್ಕಾರಗಳು ನಿಮಗೆ.
ನಾವಿಲ್ಲಿ ನಿಮ್ಮ ಅಗತ್ಯ ಮತ್ತು ಮಿಂಚಿನ ವೇಗದ ಕ್ರಮಗಳಿಗಾಗಿಎರಡು ಮುಖ್ಯ ಸಂಗತಿಗಳಬಗೆಗೆ ಪ್ರಸ್ತಾಪಿಸುತ್ತೇವೆ.ಕನ್ನಡ ನುಡಿ ಮಾಸಿಕ ರಾಜ್ಯದ ಎಲ್ಲ ಜಿಲ್ಲೆ/ಸದಸ್ಯರ ಆಶಯಗಳ ಆಕರವಾಗಿರಬೇಕೇ ವಿನಃ ಕೇವಲ ಕೆಲ ವ್ಯಕ್ತಿಗಳ/ವಿಷಯಗಳ/ಮನಕ್ಕೆ ತೋಚಿದ್ದನ್ನು ಗೀಚಲಿಕ್ಕೆ ಅಲ್ಲ!ಇದು ಪರಮ ಸತ್ಯ್ವಷ್ಟೇ ಅಲ್ಲ ಪರಾತ್ಪರಸತ್ಯವು! ಹಾಗಾಗಿ ದ.ಕ. ಜಿಲ್ಲೆಯ ವಾಸಿಗಳದ ನಾವು ನಮ್ಮ ಜಿಲ್ಲೆಗೆ ಹಾಗೂ ರಾಜ್ಯದ ಮಿಕ್ಕೆಲ್ಲಾ ಜಿಲ್ಲೆಗಳಿಗೂ ಸಂವೈಧಾನಿಕವಾಗಿ ಅವರವರ ಭಾಗದ ಹಿತಕ್ಕಾಗಿ/ವರದಿಗಾಗಿ ದೇಣಿಗೆಗಳಿಗಾಗಿ ಪತ್ರಿಕೆಯ ಪುಟದ ಮೀಸಲನ್ನು ಒದಗಿಸಿ ಆ ಸಂಗತಿಯನ್ನು ತತ್ ತತ್ ಜಿಲ್ಲಾಧ್ಯಕ್ಷರ ಗಮನಕ್ಕೆ ತಂದು ಅವರು ಅವುಗಳ ಪೂಣ೯ಪ್ರಯೋಜನ ಪಡದುಕೊಳ್ಳಲು ಸೂಚಿಸಿರಿ-ಸಿದ್ಧಪಡಿಸಿರಿ ಈ ಬಾಧ್ಯತೆ ನಿಮ್ಮ ಜವಾಬ್ದಾರಿಯೂ ಅಹುದು!ಪ್ರಸ್ತಾಪ-೨


ಪ್ರತಿ ವಷ೯ವೂ ಕನ್ನಡ ಸಾಹಿತ್ಯ ಪರಿಷತ್ ಹಲವು ಮಜಲಿನ ಕನ್ನಡ ಪರೀಕ್ಷೆಗಳನ್ನು ನಡೆಸಿಕೊಂಡು ಬರುತ್ತಿರುವುದು ಸುವೇದ್ಯವು.
ಅದು ಸರಿ.
ಆದರೆ ರಾಜ್ಯದ ಎಲ್ಲಾ ಪರೀಕ್ಷೆಗೆ ಕೂರಲು ಬಯಸುವವರು ಬೆಂಗಳೂರಿಗೇ ಬರಬೇಕೇಕೆ?
ದಯಮಾಡಿ ಆಯಾ ಜಿಲ್ಲಾ ಮುಖ್ಯಸ್ಥರಿಗೆ ಅದರ ಉಸಾಬರಿ ಬಿಡಿರಿ!
ಈಗೆಲ್ಲ ಮಹಾನ್ ಭಾರತದ ಪಂಚಾಯತಿ ರಾಜ್ ವ್ಯವಸ್ಥೆ ಅಡಿಯಲ್ಲಿ ಗ್ರಾಮ ಪಂಚಾಯತಿಗಳೆ ಅವುಗಳ ಭವಿಷ್ಯ ಬರೆದುಕೊಳ್ಳಲು ಸಂವಿಧನದ ಒಪ್ಪಿಗೆ ಇದೆ!.
ಹಾಗಿರುವಾಗ ಜಿಲ್ಲಾ ಕನ್ನದ ಪರಿಷತ್ ಗಳು ಏಕೆ ತಮ್ಮ ಜವಾಬ್ದಾರಿಗೇ ಪರೀಕ್ಷಾ ಸಂಗತಿಗಳನ್ನು ತೆಗೆದುಕೊಳ್ಳಬಾರದೇಕೆ?
ಕನ್ನಡ ಸಾಹಿತ್ಯ ಪರಿಷತ್ ಕಾನೂನು ಬದ್ಧವಗಿ ಕೆಲಸಗಳನ್ನು ಮಾಡುವುದು-ಮಾಡಿಸುವುದು ಇದೇ ಹಿತ-ವ್ರತ-ಮತ.
ಇದಕ್ಕೆ ವಿರುದ್ಧದವೆಲ್ಲ ಪ್ರೇತಗಳೇ!
ನಾವು ಕನ್ನಡ ಸಾಹಿತ್ಯ ಪರಿಷತ್ ನ ಆಜೀವ ಸದಸ್ಯರು,
ಕನ್ನಡದಲ್ಲಿ ಅಭಿಮಾನ-ಸಮಾಧಾನ-ಸಂಮಾನ ಅವೇ ನಮಗೆ ಮಾನ-ದೇದೀಪ್ಯಮಾನವೂ ಕೂಡಾ.
ನಮ್ಮ ಪ್ರಸ್ತಪಗಳು,
ಚಿಂತನೆಗಳು,
ಯೋಚನೆಗಳು
ಯೋಜನೆಗಳು,
ದಡ ಮುಟ್ಟಿದಾಗ-ಮುಟ್ಟಿಸಲ್ಪಟ್ಟಾಗಲೇ ನಾವು ವಿರಮಿಸುವುದು.
ಹಾಗಾಗಿ ಈ ಮಿಂಚಂಚೆ ನಿಮಗೆ ತಲುಪಿದ ಮರುಕ್ಷಣವೇ ನಮಗೆ ಉತ್ತರಗಳನ್ನು ನೀಡಿರಿ
ನಿಮಗೆ ಮತ್ತೆ ವಂದನೆಗಳು.

0 comments:

Post a Comment