ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಆಳ್ವಾಸ್ ನುಡಿಸಿರಿ ಘಟಕ ದಾವಣಗೆರೆ ಇದರ ಉದ್ಘಾಟನಾ ಸಮಾರಂಭ ಮತ್ತು ಆಳ್ವಾಸ್ ಸಾಂಸ್ಕೃತಿಕ ವೈಭವ ದಾವಣೆಗೆರೆ ಬಾಪೂಜಿ ಸಭಾಂಗಣದಲ್ಲಿ ಸೆ.29ರಂದು ಸಂಜೆ 5.30ಕ್ಕೆ ನಡೆಯಲಿದೆ.ಶ್ರೀ ತರಳಬಾಳು ಶಾಖಾ ಮಠ ಸಾಣೇಹಳ್ಳಿ ಇದರ ಪ.ಪೂ.ಶ್ರೀ ಡಾ.ಪಂಡಿತಾಚಾರ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಮೂಡಬಿದಿರೆ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಹಿಸುವರು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ ರವೀಂದ್ರ ನಾಥ್,ಲೋಕಸಭಾ ಸಭಾ ಸದಸ್ಯ ಜಿ.ಎಮ್.ಸಿದ್ಧೇಶ್ವರ , ಸಚೇತಕ ಡಾ.ಶಿವಯೋಗಿ ಸ್ವಾಮಿ,
ಮಾಜಿ ಸಂಸದ ಕೆ.ಆರ್.ಜಯದೇವಪ್ಪ, ಕ.ಸಾ.ಪ. ದಾವಣಗೆರೆ ಜಿಲ್ಲಾಧ್ಯಕ್ಷ ಎ.ಆರ್. ಉಜ್ಜಿನಪ್ಪ ಭಾಗವಹಿಸುವರು.
ಸಂಜೆ 6ಕ್ಕೆ ಸರಿಯಾಗಿ ಸಾಂಸ್ಕೃತಿಕ ವೈಭವ ಪ್ರಾರಂಭಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಎಜುಕೇಷನ್ ಫೌಂಡೇಷನ್ ನ ಮಾಧ್ಯಮ ಸಂಪರ್ಕಾಧಿಕಾರಿ ಹರೀಶ್ ಕೆ.ಆದೂರು, ದಾವಣಗೆರೆ ಆಳ್ವಾಸ್ ನುಡಿಸಿರಿ ಘಟಕದ ಅಧ್ಯಕ್ಷ ಡಾ.ಜಿ.ಎಂ. ಈಶ್ವರಪ್ಪ, ಗೌರವಾಧ್ಯಕ್ಷ ಪ್ರೊ.ಬಿ.ವಿ.ವೀರಭದ್ರಪ್ಪ ಉಪಸ್ಥಿತರಿದ್ದರು.

0 comments:

Post a Comment