ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಿನೆಮಾ - ಮೂಡಬಿದಿರೆ (Moodabidri) ವರದಿ
ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದ ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಅಭ್ರ ಕ್ರಿಯೇಷನ್ಸ್ ಪ್ರಸ್ತುತಿಯ ಸ್ವಯಂ ಚಿತ್ರಕ್ಕೆ ಸೆ.23ರಂದು ಮುಹೂರ್ತ. ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ , ಆಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ 2.30ಕ್ಕೆ ಕ್ಲಾಪ್ ಮಾಡುವುದರೊಂದಿಗೆ ಚಿತ್ರಕ್ಕೆ ಚಾಲನೆ ದೊರಕಲಿದೆ. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಈಶ್ವರ ಭಟ್ ಶುಭನುಡಿಗಳನ್ನಾಡಲಿದ್ದಾರೆ.


ಚಿತ್ರದ ಸಂಭಾಷಣೆ, ನಿರ್ದೇಶನದ ಜವಾಬ್ದಾರಿ ನಾಗರಾಜ್ ಹಾಗೂ ರೇಣು ಡಿ'ಸೋಜ. ಹರೀಶ್ ಕೆ.ಆದೂರು ಛಾಯಾಗ್ರಹಣ, ಸಂಕಲನ, ರಾಜ್ ದೀಪ್, ಕೀರ್ತನಾ ಭೋಪಣ್ಣ, ಪ್ರಣಮ್ಯಾ ಭಟ್ ಮುಖ್ಯ ಪಾತ್ರದಲ್ಲಿ. ಮೌಲ್ಯ ಜೀವನ್, ಜಯಶ್ರೀ ಬಿ, ಡಾ.ಧನಂಜಯ ಕುಂಬ್ಳೆ, ಆದಿತ್ಯ ಭಟ್, ಪೂಜಾ ಶೆಟ್ಟಿ, ಶ್ರೀ ಗೌರಿ, ದರ್ಶನ್, ಬಿಂದ್ಯಾ ಸಿ.ಕೆ. ತಾರಾಗಣದಲ್ಲಿ. ವಾಸ್ತವ ವಿಚಾರಗಳನ್ನು ಬಿಂಭಿಸುವ ಈ ಚಿತ್ರ ಉತ್ತಮ ರೀತಿಯಲ್ಲಿ ತೆರೆಕಾಣುವ ವಿಶ್ವಾಸ ತಂಡದ್ದು.

0 comments:

Post a Comment