ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೈನಂದಿನ ಕಾದಂಬರಿ - ಭಾಗ 22
ಅನು ಬೆಳ್ಳೆ.

ಇಲ್ಲಮ್ಮಾ... ನಾನು ವಿಷಯ ಹೇಳಲೇ ಇಲ್ಲ. ನಮ್ಮ ವೆಂಕಟರಮಣನ ಆಣೆಗೂ... ಅಂದು ಅರ್ಧ ಕುಡಿದಿದ್ದ ಲೋಟ ಕೆಳಗಿಟ್ಟ.
ಯಾಕೆ ಹೇಳ್ಲೆ ಇಲ್ಲಾಂತ ಸಾಧಿಸ್ತೀರಾ? ನಾನು ಸಾಕ್ಷಿ ಸಮೇತ ನಿಮ್ಮ ಎದುರು ತಂದು ನಿಲ್ಲಿಸ್ಲಾ? ಅಂದಾಗ ಭಾಮಿನಿಯವರಿಗೆ ಇವಳು ಯಾತಕ್ಕೆ ಈ ರೀತಿ ಅವನನ್ನು ಪ್ರಶ್ನಿಸುತ್ತಿದ್ದಾಳೊ ಅನಿಸದಿರಲಿಲ್ಲ.
ನರಸಿಂಹನಿಗೂ ಯಾತಕ್ಕಾದರೂ ಇಲ್ಲಿಗೆ ಬಂದೆನೊ ಅನಿಸಿತು. ಮನಸ್ವಿತಾ ಎಚ್ಚರಿಕೆಯ ಮಾತು ಹೇಳುವಂತೆ, ನೋಡಿ, ಇದೇ ಕೊನೆ ಯಾವ ಹುಡುಗಿಯರನ್ನು ಹಗುರವಾಗಿ ಮಾತಾಡಬೇಡಿ. ಅವರವರಿಗೆ ಅವರವರದ್ದೇ ಕೆಲವು ಗುರಿಗಳಿರುತ್ತವೆ. ನಿಮಗೆ ವ್ಯವಾಹಾರ ಕುದುರಲಿಲ್ಲಾಂತ ಅಸಂಬದ್ದ ಮಾತಾಡ್ಬೇಡಿ ಅಂದವಳೇ ತಾನೇ ಎದ್ದು ಒಳಗೆ ಬಂದಾಗ ಇಂಗು ತಿಂದ ಮಂಗನಂತೆ ಮುಖ ಮಾಡಿ ತನ್ನ ದಾರಿ ಹಿಡಿದ ನರಸಿಂಹ ಮತ್ತೆಂದೂ ಆ ಮನೆಯ ಕಡೆ ಮುಖ ಹಾಕಬಾರದೆಂದು ಹೊರಟ.


ಅಂಗಡಿಯ ಹತ್ತಿರ ಬರುವಾಗ ಶ್ರೀನಿವಾಸನವರು ಕರೆದರೂ ಕೇಳಿಸಿಕೊಳ್ಳದಂತೆ ದಾಪುಗಾಲು ಹಾಕುತ್ತಾ ಮನೆಯತ್ತ ನಡೆದ. ಭಾಮಿನಿಯವರಿಗಾದರೂ ನರಸಿಂಹ ಒಳ್ಳೆಯ ಸಂಬಂಧ ಹುಡುಕಿ ತಂದನೆನ್ನುವ ಹೆಮ್ಮೆಯಿತ್ತು. ಅದು ನೆರವೇರುವ ಮೊದಲೇ ಸಂಚಕಾರ ತಂದಿಟ್ಟ ಮಗಳ ಮೇಲೆ ಬೇಸರ ಮೂಡಿತು. ಅವಳು ತಮ್ಮ ಕೈ ಮೀರಿ ಹೋಗುತ್ತಾಳೆನ್ನುವ ಆತಂಕ ಕೂಡ ತಪ್ಪಲಿಲ್ಲ. ಗಂಡ ಮನೆಗೆ ಬಂದಾಗ ಎಲ್ಲವನ್ನೂ ಹೇಳಿ ಬಿಡಬೇಕೆಂದುಕೊಂಡರು. ಆದರೆ ಅದರಿಂದ ಏನೂ ಉಪಯೋಗವಿಲ್ಲವೆನ್ನುವುದು ಗೊತ್ತು. ಗೋರ್ಕಲ್ಲ ಮೇಲೆ ನೀರು ಸುರಿದಂತೆ ಎಲ್ಲಾ ವ್ಯರ್ಥವೆಂದು ತಿಳಿದಿದ್ದರೂ ಸಂಕಟವನ್ನು ಗಂಡನ ಜೊತೆಗೆ ಹಂಚಿಕೊಂಡರು.
ಅವಳಿಗೆ ನಮ್ಮ ಮೇಲೆ ಯಾವ ಜನ್ಮದ ಸಿಟ್ಟೊ ಏನೊ? ಹಗೆತನ ಸಾಧಿಸ್ತಾ ಇದ್ದಾಳೆ. ಇದ್ದ ಒಬ್ಬಳೇ ಮಗಳೂಂತ ಸ್ವಲ್ಪ ಸಡಿಲ ಬಿಟ್ರೆ ಮಿತಿ ಮೀರ್ತಾಳೆ. ಕಂಟ್ರೋಲ್ ಮಾಡೋಣವೆಂದ್ರೆ ಪ್ರಾಯಕ್ಕೆ ಬಂದವಳು ತಮ್ಮ ಅಳಲನ್ನು ಮಡದಿಯ ಮುಂದೆ ತೋಡಿಕೊಂಡರು ಶ್ರೀನಿವಾಸನವರು.
ಮನಸ್ವಿತಾ ಈಗ ಒಂದು ರೀತಿಯ ಮೌನಕ್ಕೆ ತನ್ನನ್ನು ಹೊಂದಿಸಿಕೊಂಡ ಬಳಿಕ ಮನೆಯಲ್ಲಿ ಏನೂ ಮಾತುಕತೆ ನಡೆದರೂ ಮಾತನಾಡಲಾರಳು. ನರಸಿಂಹರಿಗೆ ತಾನು ಆಡಿದ ಮಾತುಗಳ ಬಗ್ಗೆ ಅಪ್ಪಯ್ಯ ತನ್ನ ಮೇಲೆ ಸಿಟ್ಟಾಗುತ್ತಾರೆಂದು ತಿಳಿದಿದ್ದು ಸುಳ್ಳಾಯಿತು. ಅವರು ಆ ವಿಷಯವನ್ನು ಪ್ರಸ್ತಾಪಿಸದೆ ಸುಮ್ಮನೆ ಕುಳಿತರು.

ತಾನು ಲ್ಯಾಪ್ ಟಾಪ್ನ್ನು ಹಾಗೇ ಬಿಟ್ಟು ಬಂದಿರುವುದು ತಿಳಿಯಿತು. ಕೂಡಲೇ ಒಳಗೆ ಹೋಗಿ ಅದನ್ನು ಮುಚ್ಚಿಡಬೇಕೆಂದುಕೊಂಡಾಗ ಮೇಲ್ ಬಂದಿರುವುದು ತಿಳಿಯಿತು. ತೆರೆದು ನೋಡಿದಳು. 'ಅರವಿಂದ್ನ' ಮೇಲ್ ಕಾಣಿಸಿತು. ನಾಲ್ಕೇ ನಾಲ್ಕು ವಾಕ್ಯಗಳಿದ್ದವು. ಸಂದರ್ಭ ಬಂದಾಗ ನನ್ನ ಬಗ್ಗೆ ಬರಿತೀನಿ. ಅಲ್ಲಿಯವರೆಗೂ ಇ-ಮೇಲ್ ಬರುತ್ತಲೇ ಇರುತ್ತದೆ. ಇಷ್ಟವಾಗದಿದ್ದರೆ ಡಿಲೀಟ್ ಮಾಡಿಬಿಡಿ.
ಮೇಲ್ ಓದಿಕೊಂಡ ಬಳಿಕ ನಿಖಿಲ್ ಮೇಲೆ ಸಂಶಯ ಮೂಡಿತು. ಬೆಳಿಗ್ಗೆ ಮೀಟಿಂಗ್ನಲ್ಲಿ ಆತ ಹೇಳಿದ ಮಾತುಗಳು ನೆನಪಾದವು. ಒಂದೊಂದೆ ಮಾತನ್ನು ಮೆಲುಕು ಹಾಕಿ ಕೊಳ್ಳುತ್ತಾ ಮೇಲ್ ಬಾಕ್ಸ್ ಮುಚ್ಚಿ ಲ್ಯಾಪ್ ಟಾಪನ್ನು ಆಫ್ ಮಾಡಿ ಬ್ಯಾಗ್ಗೆ ಸೇರಿಸಿದಳು.
ಅವಳಲ್ಲಿ ಇನ್ನಷ್ಟು ಗೊಂದಲ ಹುಟ್ಟಿಸಿದ 'ಅರವಿಂದ' ನನ್ನು ಶೋಧಿಸಲೇ ಬೇಕೆನ್ನುವ ಹಠ ಮೂಡಿತು. ಅದಕ್ಕಾಗಿ ಏನಾದರೊಂದು ಮಾಡಲೇ ಬೇಕೆನಿಸಿತು. ಅವಳು ಒಂದು ಪೆನ್ನು ಪ್ಯಾಡ್ ತೆಗೆದುಕೊಂಡು ತನ್ನಲ್ಲಿರುವ ಮತ್ತು ತನಗೆ ತಿಳಿದಿರುವ ಎಲ್ಲರ ಈ ಮೇಲ್ ವಿಳಾಸ ಬರೆದುಕೊಂಡಳು.

ಒಂದೊಂದೇ ಇ-ಮೇಲ್ಗಳನ್ನು ಪರಿಶೀಲಿಸುತ್ತಾ ತನಗೆ ಅರವಿಂದ್ ಹೆಸರಿನಿಂದ ಮೇಲ್ ಕಳುಹಿಸುತ್ತಿರುವವರು ಯಾರು? ಅನ್ನುವುದನ್ನು ಆಲೋಚಿಸುತ್ತಾ ಕುಳಿತಿರುವಾಗ ನಿಖಿಲ್ನ ಮೆಸೇಜ್ ಬಂತು. ಸಂಶಯವೇ ಉಳಿಯಲಿಲ್ಲ. ತಾನು ಮೇಲ್ ನೋಡಿ ಏನೂ ರೆಸ್ಪಾಂಡ್ ಮಾಡದಿರುವುದಕ್ಕೆ ಆತನೆ ಮೆಸೇಜ್ ಕಳುಹಿಸಿ ಪ್ರತಿಕ್ರಿಯೆಗಾಗಿ ಕಾದಿರಬೇಕೆಂದು ತಿಳಿಯಿತು. ತಾನು ಏನೂ ತಿಳಿಯದಂತೆ ವತರ್ಿಸುವುದೇ ಸರಿ ಎಂದುಕೊಂಡವಳು ಅಚಲವಾದ ನಿಧರ್ಾರವನ್ನು ತೆಗೆದುಕೊಂಡಳು.
ಮೊಬೈಲು ತೆಗೆದು ಮೆಸೇಜ್ ಓದಿದವಳಿಗೆ ಆಶ್ಚರ್ಯ. ನಿಖಿಲ್ ಬರೀ ವ್ಯವಹಾರಸ್ಥನಂತೆ ಬೆಳಿಗ್ಗೆ ನಡೆದ ಮೀಟಿಂಗ್ನ ಮೈನೂಟ್ ಕಾಪಿಯನ್ನು ಅಜರ್ೆಂಟಾಗಿ ಮೇಲ್ ಮಾಡುವಂತೆ ಬರೆದಿದ್ದ. ಲ್ಯಾಪ್ ಟಾಪ್ ತೆರೆದು ಶೀಲಾ ತನಗೆ ಪೆನ್ ಡ್ರೈವ್ನಲ್ಲಿ ಹಾಕಿಕೊಟ್ಟ ಫೈಲ್ನ್ನು ಅಟಾಚ್ ಮಾಡಿ ಅವನಿಗೆ ಮೇಲ್ ಮಾಡಿದಳು.
ಹಾಗಾದರೆ ಈ ಅರವಿಂದ್ ಯಾರು? ಪ್ರಶ್ನೆ ಜಟಿಲವಾದಂತೆ ಕಂಡಿತು. ರಾತ್ರಿ ಊಟ ಮುಗಿಸಿ ಸಾಧ್ಯತೆಗಳ ಬಗ್ಗೆ ತುಂಬಾ ಯೋಚಿಸಿದರೂ ಅಷ್ಟೊಂದು ಆತ್ಮೀಯತೆಯಿಂದ ಇರುವವನು ನಿಖಿಲ್ ಬಿಟ್ಟರೆ ಬೇರೆ ಯಾರು ಕಾಣಿಸಲಿಲ್ಲ.
... ಮುಂದುವರಿಯುವುದು...

1 comments:

Anonymous said...

serial stop madiddu yake?

Post a Comment