ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ಸಾಗರ ವರದಿ

ವಿದ್ಯಾರ್ಥಿಗಳು ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ವ್ಯಕ್ತಿತ್ವವಿಕಸನದ ಮೂಲಕ ಸಮಾಜಶುದ್ಧಿಗೆ ನೆರವಾಗುವ ಹಾಗೂ ರಾಷ್ಟ್ರಿಯ ಭಾವೈಕ್ಯವನ್ನು ಮೂಡಿಸುವ ವಿವೇಕದೀಪಿನೀ ಎಂಬ ಮೌಲ್ಯಶಿಕ್ಷಣವನ್ನು ವೇದಾಂತಭಾರತೀ ಸಂಸ್ಥೆಯು ರಾಜ್ಯದ ಎಲ್ಲ ಜಿಲ್ಲೆಗಳ ಪ್ರೌಢಶಾಲೆಗಳಲ್ಲಿ ಈಗಾಗಲೇ ಹಮ್ಮಿಕೊಂಡಿದೆ.ಅಂತೆಯೇ ಸಾಗರ ತಾಲೂಕಿನ ಅನೇಕ ಪ್ರೌಢಶಾಲೆಗಳಲ್ಲಿ ಈಗಾಗಲೇ ಈ ಗ್ರಂಥವನ್ನು ಬೋಧಿಸಲಾಗಿದ್ದು, ಆ ಎಲ್ಲ ಪ್ರೌಢಶಾಲೆಗಳ ವಿದ್ಯಾರ್ಥಿಸಮಾವೇಶವನ್ನು ದಿನಾಂಕ 15-9-2012 ಶನಿವಾರದಂದು ಮಧ್ಯಾಹ್ನ 2ಗಂಟೆಯಿಂದ ಸಾಗರದ
ಗಾಂಧಿಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.


ಪರಮಪೂಜ್ಯ ಶ್ರೀ ಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು ದಿವ್ಯಸಾನ್ನಿಧ್ಯವನ್ನು ನೀಡಲಿದ್ದಾರೆ. ಕರ್ನಾಟಕ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಸಂಸದರಾದ ಬಿ.ವೈ.ರಾಘವೇಂದ್ರ, ಶಾಸಕರಾದ ಬೇಳೂರು ಗೋಪಾಲಕೃಷ್ಣ ಹಾಗೂ ನಗರಸಭಾಧ್ಯಕ್ಷರಾದ ರಾಧಾಕೃಷ್ಣನಾಯಕ ಬೇಂಗ್ರೆ ಇವರು ಅಭ್ಯಾಗತರಾಗಿ ಆಗಮಿಸಲಿದ್ದಾರೆ.

0 comments:

Post a Comment