ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:45 PM

ಓ ದೇವರೇ...!

Posted by ekanasu

ಸಾಹಿತ್ಯ : ಜಬೀವುಲ್ಲಾ ಖಾನ್

ನಿನ್ನೊಂದಿಗಲ್ಲದೆ ಯಾರಲ್ಲಿ ಅಪೇಕ್ಷಿಸಲಿ
ನೀನೆ ತಾನೇ ಈ ಪ್ರಪಂಚ ಸೃಷ್ಠಿಸಿದ್ದು
ನಿನಗೆ ಜನರೆನ್ನುವರು ಕರುಣಾಳು ದಯಾಮಯಿ
ನಾನು ನಂಬಿಬಿಟ್ಟೆ ಅದು ಪಾಪವೇನು?

ಜೀವನ ಪಥದಿ ನಡೆನಡೆದು
ಹೆಜ್ಜೆ ಹೆಜ್ಜೆಗೂ ಸೋತಿರುವೆ
ಈಗ ನೀನೇ ಏನಾದರೊಂದು ದಾರಿ ತೋರು
ಇದು ನಿನ್ನ ಪ್ರಪಂಚ ನನ್ನದಲ್ಲ ಕೇಳು

ನಿನಗೆ ಪ್ರಪಂಚದ ಸೃಷ್ಠಿ ಸುಲಭವೆನಿಸಿರಬಹುದು
ಒಂದು ದಿನ ಸಂಸಾರ ನಡೆಸಿ ನೋಡು

ಸ್ವರ್ಗ ನರಕ ಇದ್ದೇ ಇದೆ
ಈಗ ಸದ್ಯಕ್ಕೆ ನನ್ನ ಗೋಳು ಕೇಳು
ಯಾರಿಗೆ ಬೇಕು ನಿನ್ನ ಸ್ವರ್ಗ
ಬರೀ ಹೊಟ್ಟೇಲಿ ಮಲಗಿದ್ದೇನೆ ನೋಡು

ನನ್ನ ಪ್ರಾರ್ಥನೆಗಳಿಗೆ ರೆಕ್ಕೆಪುಕ್ಕಗಳಿಲ್ಲ
ಹೇಗೆ ತಾನೇ ನೀ ನನ್ನ ಮೊರೆ ಕೇಳುವೆ
ಛೇ ! ಈ ಪ್ರಪಂಚ
ಸ್ವಲ್ಪ ದಿನ ತಾಳು ನಿನ್ನಲ್ಲಿಗೇ ಬಂದು
ಪ್ರಶ್ನೆಗಳ ಸುರಿಮಳೆಗೈಯ್ಯುವೆ
ಆದರೆ ನಾಳೆ ಎಂಬ ಭರವಸೆ ಇನ್ನೂ
ಕೈಬಿಡುತ್ತಿಲ್ಲ ನೋಡು.

0 comments:

Post a Comment