ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ಮಂಗಳೂರು ವರದಿ
ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸೆಪ್ಟೆಂಬರ್ 23 ರಿಂದ ಉಚಿತ ಯೋಗ ತರಬೇತಿ ಶಿಬಿರ ನಡೆಯಲಿದೆ. ಅಂತರ ರಾಷ್ಟ್ರೀಯ ಯೋಗ ತೀರ್ಪುಗಾರ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಶಿಬಿರವನ್ನು ನಡೆಸಲಿರುವರು. ಸೆಪ್ಟೆಂಬರ್ 23 ರಂದು ಸಾಯಂಕಾಲ 5.30 ಕ್ಕೆ ಉದ್ಘಾಟನೆಗೊಂಡು ಪ್ರತಿದಿನ ಸಾಯಂಕಾಲ 5-45 ರಿಂದ 7-00 ರ ವರೆಗೆ 12 ದಿನಗಳ ಕಾಲ ಶಿಬಿರ ನಡೆಯಲಿದೆ. ಸರಳ ಯೋಗ, ಪ್ರಾಣಾಯಾಮ, ಧ್ಯಾನ, ಮುದ್ರೆಗಳು, ಯಾವ ರೋಗಕ್ಕೆ ಯಾವ ಆಸನ ಮುಂತಾದ ವಿಚಾರಗಳನ್ನು ಕಲಿಸಿ ಕೊಡುವರು. ಆಸಕ್ತರು ಶ್ರೀ ಕ್ಷೇತ್ರದ ಕಚೇರಿಯಲ್ಲಿ ಸೆಪ್ಟೆಂಬರ್ 20 ರ ಮೊದಲು ಕೃಷ್ಣಕುಮಾರ್ ಆಡಳಿತಾಧಿಕಾರಿ 0824-2231252 ಇವರಲ್ಲಿ ಹೆಸರು ನೋಂದಾಯಿಸಬಹುದು.

0 comments:

Post a Comment