ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:17 PM

ಆಸೆ...

Posted by ekanasu

ಕಾರಿಡಾರ್ : ಪದ್ಮಾ ಭಟ್

ನನ್ನ ನೂರು ಆಸೆಗಳೇನಿದ್ದರೂ
ಗೋಣಿ ಚೀಲದಲ್ಲಿ ಕಟ್ಟಿ
ಇಡಲು ಮಾತ್ರ
ಎಂದೂ ನೆರವೇರಲಾರದ ಆಸೆಗಳಿಗೇನು
ಮಾಡಲಿ ಹೇಳಿಕೊಂಡು...

ನೆರವೇರದ ಕನಸುಗಳೇ
ನೀವೇಕೆ ಬಂದು ನನ್ನನ್ನು
ಕಾಡುತ್ತೀರಾ?
ಬಣ್ಣಬಣ್ಣದ ಆಸೆಗಳ ಹುಟ್ಟಿಸಿ...

ಕಣ್ಣು ಬಿಡುವುದರೊಳಗೆ
ಮರೆಯಾಗುವುದಾದರೆ
ಎಂದಿಗೂ ನಿಮಗೆ ಜಾಗವಿಲ್ಲ
ನೀವು ಕನಸುಗಳು
ನನಸು ಆಗುವುದಾದರೆ ಮಾತ್ರ ನನ್ನಲ್ಲಿ ಬಂದುಬಿಡಿ...

1 comments:

Anonymous said...

padma it is very nice....i like it ..

Post a Comment